ನರಗುಂದ: 12ನೇ ಶತಮಾನದಲ್ಲಿ ಮಾಹಾ ಮಾನವತಾವಾದಿ ವಿಶ್ವಗುರು ಬಸವಣ್ಣನವರು ಮನುಷ್ಯ- ಮನುಷ್ಯರನ್ನು ಒಗ್ಗೂಡಿಸುವ ಕೆಲಸ ಮಾಡಿದರು. ಅದೇ ರೀತಿ ಗ್ರಾಮದಲ್ಲಿ ಜರುಗುವ ರೊಟ್ಟಿ ಜಾತ್ರೆಯು ಭಾವೈಕ್ಯತೆಗೆ ಇಂಬು ನೀಡಿದೆ ಎಂದು ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ತಿಳಿಸಿದರು.
ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕಾವ್ಯ- ಕಥೆಗಳಲ್ಲಿ ಮನುಷ್ಯ ಪಥ- ವಿಶ್ವ ಪಥ ಎನ್ನುವ ಸಂದೇಶ ಸಾರಿ, ವಿಶ್ವ ಬ್ರಾತೃತ್ವ ಬೆಳೆಸುವ, ಮನ- ಮನಸ್ಸುಗಳನ್ನು ಬೆಸೆಯುವ ಕೆಲಸವಾಗಲಿ ಎಂದು ಬಯಸಿದರು. ಲಿಂ. ಪೂಜ್ಯರು ತಮ್ಮ ಮಠಗಳಲ್ಲಿ ವಿಶ್ವಮಾನವ ಸಂದೇಶ ಜಾರಿಗೊಳಿಸಿ, ಮನುಷ್ಯರಲ್ಲಿ ದೇವರನ್ನು ಕಂಡ ನಾಡಿನ ಏಕೈಕ ಚಿಂತನಶೀಲ ಸ್ವಾಮಿಗಳಾಗಿದ್ದರು. ದೇವರು ಕಲ್ಲಿನಲ್ಲಿ ಇಲ್ಲ, ಮಾಡುವ ಕಾಯಕದಲ್ಲಿ ಚೈತನ್ಯರೂಪಿಯಾಗಿದ್ದಾನೆ. ದೇಹವೇ ದೇವಾಲಯ, ಕಾಯಕವೇ ಕೈಲಾಸ, ದುಡಿಯುವ ಕೈಗಳೇ ಶ್ರೇಷ್ಠ, ಕಾಯಕದಲ್ಲಿ ಮೇಲು ಕೀಳಿಲ್ಲ, ಹಂಚಿಕೊಳ್ಳುವ ಮನಸ್ಸೆ ದಾಸೋಹ ಸಂಸ್ಕೃತಿ ಎಂದು ನಂಬಿದ್ದರು ಎಂದರು.
ಇದೇ ಸಂದರ್ಭದಲ್ಲಿ ಪರಿಸರ ವಿಜ್ಞಾನಿ ಪ್ರಕಾಶಗೌಡ ಖ್ಯಾಮನಗೌಡ್ರ, ಅವರಿಗೆ ಶಿರೋಳ ಪೂಜ್ಯರ ಹೆಸರಿನಿಂದ ಕೊಡಮಾಡಲು ಪ್ರಾರಂಭಿಸಿದ ಗುರುಬಸವ ಸಿರಿ ಪ್ರಶಸ್ತಿನ್ನು ಸಹ ಪ್ರದಾನ ಮಾಡಲಾಯಿತು. ವೀರಯ್ಯ ಹುಬ್ಬಳ್ಳಿ, ಶೇಖರಯ್ಯ ನಾಗಲೋಟಿಮಠ, ವಿ.ಕೆ. ಮರೆಗುದ್ದಿ, ನಿಂಗಪ್ಪ ಜಂಗೀನ, ಕೌಶಲ್ಯ ಕರ್ನಾಟಕ 2025 ಪ್ರಶಸ್ತಿ ಪಡೆದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಶ್ರೀ ಮಾದಾರ ಚನ್ನಯ್ಯ ಐಟಿಐ ಕಾಲೇಜಿನ ಸಿಬ್ಬಂದಿ, ಪಿಎಚ್‌ಡಿ ಪದವಿ ಪುರಸ್ಕೃತ ವೀರಸಂಗಪ್ಪ ಬಸವರಾಜ ಮುದಕವಿ ಅವರನ್ನು ಶ್ರೀಮಠದಿಂದ ಗೌರವಿಸಲಾಯಿತು.ತೋಂಟದಾರ್ಯ ಮಠದ ಡಾ. ತೋಂಟದ ಸಿದ್ಧರಾಮ ಶ್ರೀಗಳು, ಭೈರನಹಟ್ಟಿ- ಶಿರೋಳ ಶ್ರೀ ತೋಂಟದಾರ್ಯ ಮಠದ ಶಾಂತಲಿಂಗ ಶ್ರೀಗಳು, ಮಾಜಿ ಶಾಸಕ ಬಿ.ಆರ್. ಯಾವಗಲ್, ಜಾತ್ರಾ ಸಮಿತಿ ಅಧ್ಯಕ್ಷ ರವೀಂದ್ರ ಹಿರೇಮಠ, ಪದಾಧಿಕಾರಿಗಳಾದ ಎಸ್.ವಿ. ಕುಪ್ಪಸ್ತ, ದ್ಯಾಮಣ ತೆಗ್ಗಿ, ಚಂದ್ರಶೇಖರ ಸೊಬರದ, ಸತ್ಯವಾನಪ್ಪ ಚಿಕ್ಕನರಗುಂದ, ಪ್ರಕಾಶಗೌಡ ತಿರಕನಗೌಡ್ರ, ವಿ.ಕೆ. ಮರಗುದ್ದಿ, ದ್ಯಾಮಣ್ಣ ಕಾಡಪ್ಪನವರ, ರಮಜಾನಸಾಬ ನದಾಫ್, ಶರಣಪ್ಪ ಕಾಡಪ್ಪನವರ, ಈರಯ್ಯ ಮಠದ, ಈರಪ್ಪ ಕರಕೀಕಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶ್ರೀಮಠದ ಭಕ್ತಾದಿಗಳು ಇದ್ದರು.