ಕನ್ನಡಪ್ರಭ ವಾರ್ತೆ ಗುಬ್ಬಿ
ಗುಬ್ಬಿ ತಾಲೂಕಿನ ದೊಣೆ ಗಂಗಾ ಕ್ಷೇತ್ರದ ಗಡಿಭಾಗವಾದ ಶ್ರೀ ಸಿದ್ದರಾಮೇಶ್ವರರ ತಪೋವನದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶ್ರೀ ಸಿದ್ದರಾಮೇಶ್ವರರು ಇಲ್ಲಿ ತಪಸ್ಸು ಮಾಡಿರುವಂತಹ ಪುಣ್ಯಭೂಮಿಯಾಗಿದೆ. ಅನಾದಿಕಾಲದಿಂದಲೂ ತನ್ನದೇ ಆದ ಶರಣರ ಪರಂಪರೆಯನ್ನು ನಡೆಸಿಕೊಂಡು ಬಂದಿದೆ. ಯಾತ್ರಿ ನಿವಾಸ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ದೇವಾಲಯದಲ್ಲಿ ನಡೆಯುತ್ತಿವೆ ಎಂದು ತಿಳಿಸಿದರು.
ಕರಡಿ ಗವಿ ಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿಗಳು ಮಾತನಾಡಿ, ಶ್ರೀ ಸಿದ್ದರಾಮೇಶ್ವರರು ನಾಡಿನಾದ್ಯಂತ ಸಂಚಾರವನ್ನು ಮಾಡುವ ಮೂಲಕ ಸಾಮಾಜಿಕವಾಗಿ ಧಾರ್ಮಿಕವಾಗಿ ಸಾಕಷ್ಟು ಕೆಲಸವನ್ನು ಮಾಡಿದಂತಹ ಮಹಾಪುರುಷರಾಗಿದ್ದರು. ಇಲ್ಲಿಯೂ ಸಹ ಆಗಮಿಸಿ ಲೋಕ ಕಲ್ಯಾಣಕ್ಕಾಗಿ ತಪ್ಪಸ್ಸು ಮಾಡಿರುವ ಜಾಗವಿದು. ಖಂಡಿತ ಇದು ಮುಂದಿನ ದಿನದಲ್ಲಿ ದೊಡ್ಡ ಮಟ್ಟದಲ್ಲಿ ಧಾರ್ಮಿಕ ಕೇಂದ್ರವಾಗಿ ಬೆಳೆಯುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೆರೆಗೋಡಿ ರಂಗಪುರದ ಗುರು ಪರದೇಶಿ ಕೇಂದ್ರ ಸ್ವಾಮೀಜಿ, ಬಳೆ ಕಟ್ಟೆಯ ಇಮ್ಮಡಿ ಕರಿ ಬಸವ ದೇಶೀಕೇಂದ್ರ ಸ್ವಾಮೀಜಿ, ಯಳನಾಡು ಸಂಸ್ಥಾನದ ಜ್ಞಾನ ಪ್ರಭು ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿ, ಸೇರಿದಂತೆ ಟ್ರಸ್ಟ್ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಸಾವಿರಾರು ಭಕ್ತರು ಹಾಜರಿದ್ದರು.