ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಗುಂಡ್ಲುಪೇಟೆ ಶಾಸಕ ಗಣೇಶ್ ಪ್ರಸಾದ್ ಮಾತನಾಡಿ, ಶಿಕ್ಷಣವಿದ್ದರೆ ಜಯಿಸಲು ಸಾಧ್ಯ, ಯಾವುದೇ ಪದವಿ ಪಡೆಯಬೇಕಾದರೂ ಕಠಿಣ ಶ್ರಮ ಅಗತ್ಯ, ಈ ನಿಟ್ಟಿನಲ್ಲಿ ಶಾಂತ ಮಲ್ಲಿಕಾರ್ಜುನ ಶ್ರೀ ಪಿ.ಎಚ್‌ಡಿ ಪದವಿ ಸಂಪಾದಿಸಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರ ಎಂದರು. ಮಾಜಿ ಸಚಿವ ಎನ್.ಮಹೇಶ್ ಮಾತನಾಡಿ, ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಸಾರಸತ್ವ ಲೋಕದ ಹೆಮ್ಮೆ, ಅವರು ಇನ್ನಷ್ಟು ಹೆಚ್ಚಿನ ಸಾಧನೆಗೈಯುವಂತಾಗಲಿ, ಅವರಿಗೆ ಪದವಿ ದೊರೆತಿರುವುದು ಚಾಮರಾಜನಗರ ಜಿಲ್ಲೆಯ ಭಕ್ತ ಸಮೂಹಕ್ಕೆ ಹೆಮ್ಮೆ ಪಡುವ ಸಂಗತಿ ಎಂದರು.ಮಾಜಿ ಶಾಸಕ ಜಿಎನ್ ನಂಜುಂಡಸ್ವಾಮಿ ಮಾತನಾಡಿ, ಬಡಕುಟುಂಬಗಳ ಪೋಷಣೆಯಲ್ಲಿ ಅಂದಿನಿಂದಲೂ ಸಾಲೂರು ಮಠ ಶ್ರಮಿಸುತ್ತಿದೆ. ನೂತನ ಶ್ರೀಗಳು ಹೆಸರಿಗೆ ತಕ್ಕಂತೆ ಶಾಂತಿ ಪ್ರಿಯರು. ಅವರಿಗೆ ಪದವಿ ಸಂದಿರುವುದು ಉತ್ತಮ ಬೆಳವಣಿಗೆ ಎಂದರು.ಈ ವೇಳೆ ವಾಟಾಳು ಮಠಾಧ್ಯಕ್ಷ ಸಿದ್ದಲಿಂಗ ಶಿವಾಚಾರ್ಯ ಶ್ರೀ, ಉಗ್ರಾಣ ನಿಗಮದ ಅಧ್ಯಕ್ಷ ಜಯಣ್ಣ, ಕಾಡಾ ಅಧ್ಯಕ್ಷ ಮರಿಸ್ವಾಮಿ, ಮಾನಸ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್, ನಗರಸಭಾಧ್ಯಕ್ಷೆ ರೇಖಾ ರಮೇಶ್, ಉಪಾಧ್ಯಕ್ಷ ಎಪಿ ಶಂಕರ್, ಚಾಮುಲ್ ಅಧ್ಯಕ್ಷ ನಾಗೇಂದ್ರಸ್ವಾಮಿ, ತಿಮ್ಮರಾಜಿಪುರ ರಾಜು, ಕೆಂಪನ ಪಾಳ್ಯ ಮಹದೇವಸ್ವಾಮಿ, ದೊಡ್ಡಿಂದುವಾಡಿ ವೀರಭದ್ರಸ್ವಾಮಿ, ಗುರುಮಲ್ಲೇಶ್ವರ ಸಂಸ್ಥೆಯ ವೃಷಬೇಂದ್ರ, ಶಿವಕುಮಾರ್, ಬೃಂಗೇಶ್, ಉತ್ತಂಬಳ್ಳಿ ಗಣೇಶ, ಮುಡಿಗುಂಡ ರಾಜೇಶ, ಪ್ರಭು, ಕಿರಣ್, ಮಹೇಶ , ತಿಮ್ಮರಾಜಿಪುರ ಮಹದೇವಸ್ವಾಮಿ, ಮಹದೇವಪ್ಪ, ಮಹದೇವಸ್ವಾಮಿ, ಶಿವಪುರ ಲೋಕೇಶ್ ಇನ್ನಿತರರಿದ್ದರು.
ಮಠಗಳು ಚಲಿಸುವ ಜ್ಞಾನ ಭಂಡಾರ: ಸಿದ್ದಗಂಗಾಶ್ರೀಮಠಗಳು ಚಲಿಸುವ ಜ್ಞಾನ ಭಂಡಾರವಿದ್ದಂತೆ. ಸಮಾಜದಲ್ಲಿ ಮಠ ಮಾನ್ಯಗಳು ನೀಡುತ್ತಿರುವ ಸೇವೆ ಸ್ಮರಣೀಯ ಎಂದು ಸಿದ್ಧಗಂಗಾ ಮಠದ ಕಿರಿಯ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಗೌರವ ಸಮರ್ಪಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಡಾ.ಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರಿಗೆ ಭಕ್ತ ಸಮೂಹವೇ ದೊಡ್ಡ ಆಸ್ತಿ. ಭಕ್ತ ಸಮೂಹ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಪವಿತ್ರ ಕಾರ್ಯಕ್ರಮ. ಮಠ, ಮಾನ್ಯಗಳು ಸಮಾಜದಲ್ಲಿ ಶ್ರದ್ಧಾ, ನೆಮ್ಮದಿಯ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿವೆ, ಅವುಗಳು ಸಮಾಜದ ಜೀವನಾಡಿಗಳು, ಮಠಗಳು ಮಮಕಾರ ತೋರಿಸುವ ಭಕ್ತಿಯ ತಾಣ, ನಾಡಿನ ಜನರ ಶ್ರೇಯೋಭಿವೃದ್ಧಿಯಲ್ಲಿ ಮಠ, ಮಾನ್ಯಗಳ ಪಾತ್ರ ಮಹತ್ವವಾದುದು , ಜೀವನಕ್ಕೆ ಬೇಕಾದ ಸಂಸ್ಕಾರ ಕಲಿಸುವಲ್ಲಿ, ಮಾನವ, ಮಾನವರ ನಡುವೆ ಬೆಸುಗೆ ಬೆಸೆಯುವಲ್ಲಿ, ಸಮಾಜದ ಓರೆ, ಕೊರೆ ತಿದ್ದುವಲ್ಲಿಯೂ ಆಧ್ಯಾತ್ಮದ ಗುರುಗಳು ಅತ್ಯಗತ್ಯ ಎಂದರು.ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಅಧ್ಯಯನಕ್ಕೆ ವಯಸ್ಸಿಲ್ಲ, ಮಿತಿ ಇಲ್ಲ ಎಂಬುದನ್ನು ಪದವಿ ಪಡೆಯುವ ಮೂಲಕ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಾಧಿಸಿದ್ದಾರೆ, ಶ್ರೀಮಠ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದಾರೆ. ಅವರೊಬ್ಬ ಶಿಕ್ಷಣ ಪ್ರೇಮಿ, ಅಪಾರ ಭಕ್ತ ಸಮೂಹ ಪ್ರೀತಿಸುವ ಶರಣ, ಅವರ ಮಠದ ಜವಾಬ್ದಾರಿ ಜೊತೆ ಪದವಿಗಳಿಸಿರುವುದು ಜಿಲ್ಲೆಯ ಜನತೆ ಹೆಮ್ಮೆ ತರುವಂತಹ ವಿಚಾರ ಎಂದರು.
ಶಾಂತಮಲ್ಲಿಕಾರ್ಜುನ ಶ್ರೀಗಳಿಗೆ ಸಾಲೂರು ಮಠದ ಅಧಿಕಾರ ಕೊಡಿಸಿದ್ದು ಶ್ರೀಮಹದೇಶ್ವರರೇ, ಅವರ ಸೇವೆ ಮಾಡಿಸಿಕೊಳ್ಳಲು ಅವರಿಗೆ ಸಾಕ್ಷಾತ್ ಮಹದೇಶ್ವರರೆ ಪೀಠಾಧಿಪತಿ ಸ್ಥಾನ ಕೊಡಿಸಿದ್ದಾರೆ. ಮಠಾಧಿಪತಿ ಸ್ಥಾನ ಮುಳ್ಳಿನ ಹಾಸಿಗೆ ಇದ್ದಂತೆ. ಈ ಸ್ಥಾನ ಅತ್ಯಂತ ಜವಾಬ್ದಾರಿಯುತವಾದುದು, ಹಾಗಾಗಿ ಇಂತಹ ಸ್ಥಾನಕ್ಕೆ ಯೋಗ್ಯರನ್ನು ಕೂರಿಸುವಂತಾಗಬೇಕು.-ಶರತ್‌ಚಂದ್ರ ಸ್ವಾಮೀಜಿ, ಮೈಸೂರು ಕುಂದೂರು ಮಠಾಧ್ಯಕ್ಷ