ಯುವಕನಿಂದ ಅಯೋಧ್ಯೆಗೆ ಧರ್ಮಸೇತು ಸ್ಕೆಟಿಂಗ್ ಯಾತ್ರೆ

KannadaprabhaNewsNetwork | Published : Nov 27, 2023 1:15 AM

ಸಾರಾಂಶ

ರಾಮಾಯಣದಲ್ಲಿ ಶ್ರೀರಾಮಚಂದ್ರ ಸಂಚರಿಸಿದ ಪ್ರದೇಶಗಳಿಗೆ ಸ್ಕೆಟಿಂಗ್‌ ಮೂಲಕ ಮಣ್ಣು ಸಂಗ್ರಹ ಮಾಡಲಿರುವೆ. ಅತಿ ಉದ್ದ ಸ್ಕೆಟಿಂಗ್‌ ಇದಾಗಿದೆ. ಗುರಿ ಪೂರ್ಣಗೊಳಿಸಿ ದೇಶಕ್ಕೆ ಮೊದಲಿಗನಾಗುವೆ ಎನ್ನುತ್ತಾರೆ ಅಗಸ್ತೀಯ ವಾಲಾಂಡ್.

ಕನ್ನಡಪ್ರಭ ವಾರ್ತೆ ಹೊಸಪೇಟೆ

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯ ನಿಮಿತ್ತ ಗುಜರಾತ್‌ನ ಅಗಸ್ತೀಯ ವಾಲಾಂಡ್ ಎಂಬ ೨೧ರ ಹರೆಯದ ಯುವಕ ಸ್ಕೇಟಿಂಗ್‌ ಧರ್ಮಸೇತು ಯಾತ್ರೆ ಮೂಲಕ ರಾಮಾಯಣ ಘಟನಾ ಸ್ಥಳಗಳಿಗೆ ಭೇಟಿ ನೀಡಿ ಮಣ್ಣು ಸಂಗ್ರಹಿಸುತ್ತಿದ್ದಾರೆ.

ಗುಜರಾತ್‌ನ ಆನಂದ ಜಿಲ್ಲೆಯ ನಿವಾಸಿ ವಾಲಾಂಡ್ ಸ್ಕೆಟಿಂಗ್ ಮೂಲಕ ರಾಮಾಯಣದ ಸ್ಥಳಗಳಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಶ್ರೀರಾಮಚಂದ್ರ ಭೇಟಿ ನೀಡಿದ ಸ್ಥಳಗಳಿಗೆ ಭೇಟಿ ನೀಡಿ ಮಣ್ಣು ಸಂಗ್ರಹಿಸುತ್ತಿದ್ದಾರೆ.

ಬಿಬಿಎ ಪದವಿ ಮುಗಿದ ಕೂಡಲೇ ಸ್ಕೆಟಿಂಗ್ ಮೂಲಕ ಶ್ರೀರಾಮಚಂದ್ರ ಸಂಚರಿಸಿದ ಕ್ಷೇತ್ರಗಳಿಗೆ ತೆರಳಿ ಮಣ್ಣು ಸಂಗ್ರಹ ಮಾಡುತ್ತಿದ್ದಾನೆ. ತಮಿಳುನಾಡಿನ ರಾಮೇಶ್ವರದ ಧನುಶ್‌ಕೋಟಿಯಿಂದ ನ. 5ರಂದು ಅಯೋಧ್ಯೆ ವರೆಗೆ (ಒಟ್ಟು ೪೫೦೦ ಕಿಮೀ) ಸ್ಕೆಟಿಂಗ್‌ ಯಾತ್ರೆ ಆರಂಭಿಸಿದ್ದಾನೆ. ದಿನಕ್ಕೆ ೭೦ರಿಂದ ೮೦ ಕಿಮೀ ಸಂಚರಿಸುವ ಮೂಲಕ ಅಂದಿನ ಯಾತ್ರೆಗೆ ವಿರಾಮ ನೀಡುತ್ತಾನೆ. ಈಗ ಹಂಪಿಗೆ ಆಗಮಿಸಿದ್ದು, ಇಲ್ಲಿಯವ ವರೆಗೆ 1200 ಕಿಮೀ ಪ್ರಯಾಣ ಮಾಡಿದ್ದು, ಇನ್ನೂ ಅಂದಾಜು 3300 ಕಿಮೀ ಪ್ರಯಾಣ ಬಾಕಿ ಇದ್ದು, ರಾಮಮಂದಿರ ಉದ್ಘಾಟನೆ ಮುನ್ನ ಜ. ೨೧ರೊಳಗೆ ಅಯೋಧ್ಯಗೆ ತಲುಪುವ ಇರಾದೆ ಹೊಂದಿದ್ದಾನೆ.

ಎಲ್ಲಿಂದ ಎಲ್ಲಿಯವರೆಗೆ?:

ತಮಿಳುನಾಡಿನ ಧನುಶ್‌ಕೋಟಿಯಿಂದ ಆರಂಭವಾದ ಸ್ಕೆಟಿಂಗ್‌ ಧರ್ಮಸೇತುಯಾತ್ರೆಯು ರಾಮೇಶ್ವರಂ, ರಾಮನಾಥಪುರಂ, ಕೊಡಿಕಾರೈ, ತಿರುಚಿರಪಲ್ಲಿ, ಹಂಪಿ, ಕೊಪ್ಪಳ, ತುಳಜಾಪುರ, ಭಾಂದರ್‌ದಾರ್, ಪಂಚವಟಿ, ರಾಮಟೇಕ್, ಸತ್ನ, ಚಿತ್ರಕೋಟ್, ಪ್ರಯಾಗ್ ಮೂಲಕ ಅಯೋಧ್ಯೆಗೆ ಯಾತ್ರೆ ನಡೆಯಲಿದೆ. ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ್, ಉತ್ತರಪ್ರದೇಶ ಐದು ರಾಜ್ಯದ ಪ್ರವಾಸ ಕೈಗೊಂಡಿದ್ದಾರೆ.

ಯುವಕ ಅಗಸ್ತೀಯ ವಾಲಾಂಡ್‌ಗೆ ಆತನ ತಂದೆ ಗನ್ ಶಾಮ್ ಹಾಗೂ ಅಣ್ಣ ಮಾರ್ಕಂಡ್ ಯಾತ್ರೆಯಲ್ಲಿ ಸಹಕಾರ ನೀಡುತ್ತಿದ್ದಾರೆ. ಅಗಸ್ತೀಯ ಸಂಚರಿಸಿದಂತೆ ಹಿಂದಿನಿಂದ ಕಾರಿನಲ್ಲಿ ಹಿಂಬಾಲಿಸುತ್ತಾರೆ. ಮಣ್ಣು ಸಂಗ್ರಹ:

ರಾಮಾಯಣದಲ್ಲಿ ಶ್ರೀರಾಮಚಂದ್ರ ಸಂಚರಿಸಿದ ಪ್ರದೇಶಗಳಿಗೆ ಸ್ಕೆಟಿಂಗ್‌ ಮೂಲಕ ಮಣ್ಣು ಸಂಗ್ರಹ ಮಾಡಲಿರುವೆ. ಅತಿ ಉದ್ದ ಸ್ಕೆಟಿಂಗ್‌ ಇದಾಗಿದೆ. ಗುರಿ ಪೂರ್ಣಗೊಳಿಸಿ ದೇಶಕ್ಕೆ ಮೊದಲಿಗನಾಗುವೆ ಎನ್ನುತ್ತಾರೆ ಅಗಸ್ತೀಯ ವಾಲಾಂಡ್.

Share this article