
ಕನ್ನಡಪ್ರಭ ವಾರ್ತೆ, ತುಮಕೂರು
ಗಾಂಧಿ ಜಯಂತಿ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಆಶ್ರಯದಲ್ಲಿ ನಗರದ ಹನುಮಂತಪುರ ಕೊಲ್ಲಾಪುರದಮ್ಮ ಸಭಾಭವನದಲ್ಲಿ ಶುಕ್ರವಾರ ನಡೆದ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು
ಕುಡುಕರನ್ನು ಅವಹೇಳನ ಮಾಡುವ ಈ ಸಮಾಜದಲ್ಲಿ ಇಡೀ ಜಗತ್ತಿನಲ್ಲಿ ಕುಡುಕರಿಗೆ ವೇದಿಕೆ ನೀಡಿ, ಕುಡಿತ ಬಿಟ್ಟವರನ್ನು ಗೌರವಿಸುವ ಏಕೈಕ ಸಂಸ್ಥೆ ಎಂದರೆ ಅದು ಧರ್ಮಸ್ಥಳ ಸಂಸ್ಥೆ. ಒಂದು ಸರ್ಕಾರ ಮಾಡಬೇಕಾದ ಸಮಾಜ ಸುಧಾರಣಾ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದು ಅಭಿನಂದಿಸಿದರು.ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರ ಆರ್ಥಿಕ ಚಟುವಟಿಕೆ ನಡೆಸಲು ಅವಕಾಶ ನೀಡಿ ಅವರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವುದರಿಂದ ಹಿಡಿದು, ದೇವಾಲಯಗಳ ಜೀಣೋದ್ಧಾರ, ಅಶಕ್ತರಿಗೆ ಮನೆ ಕಟ್ಟಿಸಿಕೊಡುವುದು, ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ, ಶಾಲೆಗಳಿಗೆ ಡೆಸ್ಕ್ ಕೊಡುವುದು ಮುಂತಾದ ಹಲವಾರು ಕಾರ‍್ಯಕ್ರಮಗಳ ಮೂಲಕ ಧರ್ಮಸ್ಥಳ ಸಂಸ್ಥೆ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕಾರ‍್ಯಗಳನ್ನು ಮಾಡುತ್ತಾ ಸ್ವಾಸ್ಥ್ಯ ಸಮಾಜ ನಿರ್ಮಾಣದ ಗಾಂಧೀಜಿ ಕನಸನ್ನು ನನಸು ಮಾಡುವ ಕಡೆ ಮುನ್ನಡೆದಿದೆ ಎಂದು ಹೇಳಿದರು.
ಲೇಖಕಿ ಮಲ್ಲಿಕಾ ಬಸವರಾಜು ಅವರು ಮಹಾತ್ಮ ಗಾಂಧೀಜಿ ಬಗ್ಗೆ ಉಪನ್ಯಾಸ ನೀಡಿದರು. ಸ್ಫೂರ್ತಿ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಪಿ. ಚಿದಾನಂದ್ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಬೇಕಾದ ಸರ್ಕಾರ ಮದ್ಯ ಮಾರಾಟವನ್ನು ಪ್ರೋತ್ಸಾಹಿಸುತ್ತಿರುವುದು ಎಷ್ಟು ಸರಿ ಎಂದರು.