ಕನ್ನಡಪ್ರಭ ವಾರ್ತೆ ಮಾಲೂರು
ಭಾರತೀಯ ಸಂಸ್ಕೃತಿಯಲ್ಲಿ ಧರ್ಮ ಕ್ಷೇತ್ರಗಳಿಗೆ ಅಪಾರವಾದ ಗೌರವ ಸ್ಥಾನ ಮಾನಗಳಿವೆ ಧರ್ಮಸ್ಥಳ ಧರ್ಮ ಕ್ಷೇತ್ರದಂತ ಶ್ರದ್ಧಾ ಕೇಂದ್ರದ ಬಗ್ಗೆ ಅಪಪ್ರಚಾರ ಮಾಡುತ್ತಿರುವುದು ಇಡೀ ಭಾರತೀಯ ಹಿಂದೂಗಳು ತಲೆ ತಗ್ಗಿಸುವ ವಿಚಾರ ಎಂದು ಆನಂದ್ ಗುರೂಜಿ ಹೇಳಿದರು. ಅವರು ಪಟ್ಟಣದಲ್ಲಿ ಹೂಡಿ ವಿಜಯ್ ಕುಮಾರ್ ಅವರ ಸ್ವಾಭಿಮಾನಿ ಜನತಾ ಪಕ್ಷದ ವತಿಯಿಂದ ಗುರುವಾರ ಧರ್ಮ ರಕ್ಷಣೆಗಾಗಿ ಹಮ್ಮಿಕೊಂಡಿದ್ದ, ಧರ್ಮಸ್ಥಳ ಚಲೋ ಕಾರ್ಯಕ್ರಮಕ್ಕೆ ತೆರಳುವ ಬಸ್ಸುಗಳು ಮತ್ತು ಕಾರುಗಳಿಗೆ ವೈಟ್ ಗಾರ್ಡನ್‌ನಲ್ಲಿ ಚಾಲನೆ ನೀಡಿ ಮಾತನಾಡಿದರು.ಧರ್ಮಸ್ಥಳಕ್ಕೆ ಧರ್ಮ ಯಾತ್ರೆ
ಭಾರತೀಯ ಸಂಸ್ಕೃತಿಯಲ್ಲಿ ಹಿಂದೂ ಧರ್ಮಕ್ಕೆ ವಿಶೇಷವಾದ ಗೌರವ ಸ್ಥಾನವಿದೆ, ಹಿಂದೂ ಧರ್ಮದ ಶ್ರದ್ಧಾ ಕೇಂದ್ರಗಳ ಬಗ್ಗೆ ಕೆಲವರು ಅಪಪ್ರಚಾರ ಮತ್ತು ಕೆಟ್ಟದಾಗಿ ಬಿಂಬಿಸುವ ಕೆಲಸ ಒಬ್ಬರಿಗೆ ಇಬ್ಬರಿಗೆ ಮಾತ್ರವಲ್ಲ ಇಡಿ ಭಾರತ ದೇಶದ ಹಿಂದೂ ಧರ್ಮದವರು ತಲೇ ತಗ್ಗಿಸುವಂತಾಗಿದೆ. ಇಂಥಹ ಸಂದರ್ಭದಲ್ಲಿ ಹೂಡಿ ವಿಜಯಕುಮಾರ್ ನೂರಾರು ಜನ ಸಾದು ಸಂತರ ಸಮಕ್ಷಮದಲ್ಲಿ ಸಾವಿರಾರು ಜನ ಧರ್ಮಾಭಿಮಾನದ ಭಕ್ತಾದಿಗಳ ನೇತೃತ್ವದಲ್ಲಿ ಧರ್ಮ ರಕ್ಷಣೆಗಾಗಿ ಧರ್ಮಸ್ಥಳಕ್ಕೆ ಧರ್ಮ ಯಾತ್ರೆ ಮಾಡುತ್ತಿರುವುದು ಶ್ಲಾಘನೀಯ ವಿಷಯ ಎಂದರು.ಯಾವುದೇ ಧರ್ಮ ಕ್ಷೇತ್ರಗಳ ಬಗ್ಗೆ ಅಪಪ್ರಚಾರ ವಿರೋಧವಾದರೆ ಎಲ್ಲರು ಒಗ್ಗಟ್ಟು ತೋರಿಸಿ ಧರ್ಮರಕ್ಷಣೆ ಮಾಡಬೇಕು, ಧರ್ಮ ರಕ್ಷಣೆ ಮಾಡಿದರೆ ಧರ್ಮ ನಮ್ಮನ್ನು ರಕ್ಷಣೆ ಮಾಡುತದೆ, ಆ ಕೆಲಸಕ್ಕೆ ಹೂಡಿ ವಿಜಯಕುಮಾರ್ ಮುಂದಾಗಿದ್ದಾರೆ. ಅವರಗೆ ಒಳ್ಳೆಯದಾಗಲಿ ಎಂದು ಹೇಳಿದರು. ಧರ್ಮಸ್ಥಳ ರಕ್ಷಣೆ ನಮ್ಮ ಹಕ್ಕು
ಸ್ವಾಭಿಮಾನಿಪಕ್ಷದ ಸಂಸ್ಥಾಪಕ ಹೂಡಿ ವಿಜಯಕುಮಾರ್ ಮಾತನಾಡಿ, ಧರ್ಮರಕ್ಷಣೆಗಾಗಿ ಧರ್ಮಸ್ಥಳಕ್ಕೆ ಸುಮಾರು ೬೦-೭೦ ಬಸ್ ಮತ್ತು ಕಾರುಗಳ ಮೂಲಕ ೫ ಸಾವಿರಕ್ಕೂ ಹೆಚ್ಚು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಭಕ್ತರು ಧರ್ಮಸ್ಥಳಕ್ಕೆ ಹೋಗುತಿದ್ದು, ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತಿರುವವರ ವಿರುದ್ಧ ಹಿಂದೂ ಧರ್ಮ ಮತ್ತು ಧರ್ಮಸ್ಥಳ ಉಳಿವು ನಮ್ಮ ಹಕ್ಕು, ಅದಕ್ಕಾಗಿ ಧರ್ಮಾಧಿಕಾರಿಗಳಿಗೆ ಧೈರ್ಯ ತುಂಬಲು ಈ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.ದಿಪೋತ್ಸವ, ಹೋಮ, ಪೂಜೆ
ನಮ್ಮ ತಾಲೂಕಿನಿಂದ ಧರ್ಮಯಾತ್ರೆ ಮೂಲಕ ಹೋಗಿ ನೂರಾರು ಸ್ವಾಮಿಜಿಗಳು ಮತ್ತು ತಾಲೂಕಿನ ಸಾವಿರಾರು ಭಕ್ತರಿಂದ ಗುರುವಾರ ರಾತ್ರಿ ದಿಪೋತ್ಸವ, ವಿಶೇಷವಾಗಿ ಸ್ವಾಮಿಜಿಗಳಿಂದ ಹೋಮ, ಪೂಜೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದ್ದು, ಈ ಎಲ್ಲಾ ಭಕ್ತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮಂಜುನಾಥ ಸ್ವಾಮಿ ಆಶೀರ್ವಾದ ಪಡೆದು ಬರುವುದಾಗಿ ಹೇಳಿದರು.ಬಸ್ಸುಗಳು ಹಾಗೂ ಕಾರುಗಳ ಮೂಲಕ ನಗರದ ಮಾರ್ಗವಾಗಿ ಯಾತ್ರೆ ಚಿಕ್ಕಸಬ್ಬೆನಹಳ್ಳಿ ಗೇಟ್ ಬಳಿ ಇರುವ ಚೆನ್ನೈ ಕಾರಿಡಾರ್ ರಸ್ತೆಯ ಮೂಲಕ ದಾಬಸ್‌ಪೇಟೆ ಕಡೆ ತೆರಳಿತು. ಈ ಸಂದರ್ಭದಲ್ಲಿ ನಾಗಲಾಪುರ ಮಠದ ತೇಜೆಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಬೆಳ್ಳಾವಿ ಮಠದ ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಸ್ವಾಭಿಮಾನಿ ಜನತಾ ಪಕ್ಷದ ಅಧ್ಯಕ್ಷ ಆರ್ ಪ್ರಭಾಕರ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶ್ವೇತಾ ವಿಜಯ್ ಕುಮಾರ್, ನಗರ ಸಭೆ ಸದಸ್ಯರಾದ ರಾಮಮೂರ್ತಿ ಇನ್ನಿತರರು ಹಾಜರಿದ್ದರು.