ಅತಿಯಾದ ಆತ್ಮವಿಶ್ವಾಸ ಬೇಡ : ಜೆಪಿ ನಡ್ಡಾ

Published : Apr 22, 2024, 10:10 AM IST
JP Nadda

ಸಾರಾಂಶ

ಅತಿಯಾದ ಆತ್ಮವಿಶ್ವಾಸ ಬೇಡ. ಒಟ್ಟಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿ. ಯಾವುದೇ ಕಾರಣಕ್ಕೂ ಧಾರವಾಡ, ಹಾವೇರಿ-ಗದಗ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಬಾರದು ಆ ರೀತಿ ಎಚ್ಚರಿಕೆ ವಹಿಸಿ 

  ಹುಬ್ಬಳ್ಳಿ :  ಅತಿಯಾದ ಆತ್ಮವಿಶ್ವಾಸ ಬೇಡ. ಒಟ್ಟಾಗಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸಿ. ಯಾವುದೇ ಕಾರಣಕ್ಕೂ ಧಾರವಾಡ, ಹಾವೇರಿ-ಗದಗ ಹಾಗೂ ದಾವಣಗೆರೆ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲಬಾರದು ಆ ರೀತಿ ಎಚ್ಚರಿಕೆ ವಹಿಸಿ..!

ಇದು ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಮೂರು ಕ್ಷೇತ್ರಗಳ ಕೋರ್‌ ಕಮಿಟಿ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮುಖಂಡರಿಗೆ ನೀಡಿರುವ ಸೂಚನೆ.

ಎದುರಾಳಿಗಳಿಗೆ ಸರಿಯಾದ ತಿರುಗೇಟು ನೀಡಿ. ಪಕ್ಷದ ಕಾರ್ಯಕರ್ತರು ಸೇರಿದಂತೆ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪ್ರಚಾರ ನಡೆಸಿ. ಯಾರ ಬಗ್ಗೆಯೂ ನಿರ್ಲಕ್ಷ್ಯ ಭಾವನೆ ತೋರಬೇಡಿ ಎಂದು ಸಲಹೆ ಮಾಡಿದರು.

ಮೂರು ಕ್ಷೇತ್ರಗಳಲ್ಲಿ ಉತ್ತಮ ವಾತಾವರಣವಿದೆ. ಚುನಾವಣೆ ಮುಗಿಯುವವರೆಗೂ ಇದೇ ಪರಿಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಏನು ಬೇಕೋ ಅದನ್ನು ಮಾಡಿ. ಸದ್ಯ ವಾತಾವರಣವಿದೆ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಮೈ ಮರೆಯಬೇಡಿ. ಪ್ರತಿಯೊಬ್ಬ ಕಾರ್ಯಕರ್ತನಿಗೂ ಅವನದೇ ಆದ ಛಾಪು ಇರುತ್ತದೆ. ನೀವು ಆತನನ್ನು ನಿರ್ಲಕ್ಷಿಸಿದರೆ ಮತ ಕೈಕೊಡುವ ಸಾಧ್ಯತೆಯಿರುತ್ತದೆ ಎಂಬುದನ್ನು ಅರಿತುಕೊಳ್ಳಿ ಎಂದು ಸಲಹೆ ಮಾಡಿದರು. ದೇಶದಲ್ಲಿ ಸುಭದ್ರ ಸರ್ಕಾರ ರಚಿಸಬೇಕೆಂದರೆ ಪ್ರತಿಕ್ಷೇತ್ರವೂ ಮುಖ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಸೋಲಬಾರದು. ಇದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಸೂಚನೆ ನೀಡಿದರು.

ಸಭೆಯಲ್ಲಿ ಧಾರವಾಡದ ಪ್ರಹ್ಲಾದ ಜೋಶಿ, ಹಾವೇರಿ- ಗದಗನ ಬಸವರಾಜ ಬೊಮ್ಮಾಯಿ ಹಾಗೂ ದಾವಣಗೆರೆಯ ಗಾಯಿತ್ರಿ ಸಿದ್ದೇಶ್ವರ ಸೇರಿದಂತೆ ಮೂರು ಕ್ಷೇತ್ರಗಳ ವ್ಯಾಪ್ತಿಯ ಶಾಸಕರು, ಎಂಎಲ್ಸಿ, ಸಂಸದರು, ಜಿಲ್ಲಾಧ್ಯಕ್ಷರು, ಪ್ರಧಾನಕಾರ್ಯದರ್ಶಿಗಳು ಸೇರಿದಂತೆ ಕೋರ್‌ ಕಮಿಟಿ ಸದಸ್ಯರು ಪಾಲ್ಗೊಂಡಿದ್ದರು.

PREV

Recommended Stories

ಹಸಿದವರಿಗೆ ಆಸರೆಯಾದ ಅಣ್ಣಿಗೇರಿ ಇಂದಿರಾ ಕ್ಯಾಟೀನ್‌
ಧರ್ಮಸ್ಥಳಕ್ಕೆ ಮಸಿ ಬಳಿದ ಬಳಿಕ ಆರೋಪಿ ಬಂಧಿಸುವ ನಾಟಕ: ಜೋಶಿ