;Resize=(412,232))
ಹುಬ್ಬಳ್ಳಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಇಂಡಿಗೋ ವಿಮಾನ ಲ್ಯಾಂಡ್ ಆಗುವ ವೇಳೆ ಭಾರೀ ಶಬ್ಧ ಕೇಳಿಬಂದ ಕಾರಣ, ಪ್ರಯಾಣಿಕರು ಹಾಗೂ ಸಿಬ್ಬಂದಿ ಆತಂಕಕ್ಕೊಳಗಾದ ಘಟನೆ ಶನಿವಾರ ನಡೆಯಿತು. ಭಾರೀ ಶಬ್ಧದ ಕಾರಣ ಮತ್ತೆ ಮೇಲೇರಿ 15 ನಿಮಿಷ ಹಾರಾಟ ಬಳಿಕ ಲ್ಯಾಂಡ್ ಆಯಿತು. ತಾಂತ್ರಿಕ ದೋಷದಿಂದಾಗಿ ಶಬ್ಧ ಕೇಳಿಬಂತು ಎನ್ನಲಾಗಿದೆಯಾದರೂ, ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ವನ್ನುಂಟು ಮಾಡಿತ್ತು. ಕೊನೆಗೆ ಆಕಾಶದಲ್ಲೇ ಕೆಲಹೊತ್ತು ಹಾರಾಡಿ ಬಳಿಕ ಸುರಕ್ಷಿತವಾಗಿ ಕೆಳಕ್ಕಿಳಿಸಲಾಗಿದೆ. ಇದರಿಂದಾಗಿ ಅರ್ಧಗಂಟೆ ತಡವಾಗಿ ಸುರಕ್ಷಿತವಾಗಿ ಲ್ಯಾಂಡ್ ಆದಂತಾಗಿದೆ. ವಿಧಾನ ಪರಿಷತ್ ಸದಸ್ಯ ಬಾದರಲಿ ಸೇರಿದಂತೆ 70 ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ 6E7162 ಇಂಡಿಗೋ ವಿಮಾನ ಸಂಜೆ 6.45ಕ್ಕೆ ಬಿಟ್ಟಿತ್ತು. 7.45ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಇಲ್ಲಿ ಕೆಳಕ್ಕಿಳಿಯುವಾಗಲೇ ವಿಮಾನದಿಂದ ದೊಡ್ಡದಾದ ಶಬ್ದ ಕೇಳಿ ಬಂತು. ಆದರೆ, ಆ ಶಬ್ದ ಏನು ಎಂಬುದು ಮಾತ್ರ ಗೊತ್ತಾಗಲಿಲ್ಲ. ಕ್ಷಣಾರ್ಧದಲ್ಲಿ ವಿಮಾನ ಮತ್ತೆ ಮೇಲೇರಿತು. ವಿಮಾನದೊಳಗೆ ಕೂಡಾ ಈ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ವಿಮಾನ 15 ನಿಮಿಷ ಹಾರಾಟ ನಡೆಸಿದ ಮೇಲೆ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಎಂದು ವಿಮಾನದಲ್ಲಿದ್ದ ಪ್ರಯಾಣಿಕರು ತಿಳಿಸಿದ್ದಾರೆ. ಇದರಿಂದಾಗಿ 7.45ಕ್ಕೆ ಲ್ಯಾಂಡ್ ಆಗಬೇಕಿದ್ದ ವಿಮಾನ 8.15ಕ್ಕೆ ಲ್ಯಾಂಡ್ ಮಾಡಲಾಗಿದೆ.
ವಿಮಾನದಲ್ಲಿ ಬೆಂಗಳೂರಿನಿಂದ 70 ಜನ ಪ್ರಯಾಣಿಕರು ಆಗಮಿಸಿದ್ದರು. ಸುರಕ್ಷಿತವಾಗಿ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರು, ವಿಮಾನದ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಎಲ್ಲರೂ ನಿಟ್ಟಿಸಿರು ಬಿಟ್ಟರು. ಆದರೆ, ತಾಂತ್ರಿಕ ತೊಂದರೆ ಏನು ಎಂಬುದನ್ನು ವಿಮಾನ ನಿಲ್ದಾಣ ತಿಳಿಸಿಲ್ಲ. ಕೆಲ ಕಾರಣಾಂತರಗಳಿಂದ ವಿಳಂಬವಾಗಿದೆ ಅಷ್ಟೇ. ಬಳಿಕ ಕೆಲಹೊತ್ತು ಆಕಾಶದಲ್ಲೇ ಹಾರಾಡಿಸಿ ಸುರಕ್ಷಿತವಾಗಿ ಕೆಳಕ್ಕಿಳಿಸಲಾಯಿತು ಎಂದಷ್ಟೇ ವಿಮಾನಯಾನ ಮೂಲಗಳು ತಿಳಿಸುತ್ತವೆ.
ಇದೇ ವಿಮಾನದಲ್ಲಿ ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ವಿಧಾನ ಪರಿಷತ್ ಸದಸ್ಯ ಬಾದರಲಿ, ಖ್ಯಾತ ವೈದ್ಯ ಜಿ.ಬಿ. ಸತ್ತೂರ ಸೇರಿದಂತೆ 70 ಪ್ರಯಾಣಿಕರು ಇದ್ದರು.
ವಿಮಾನದಿಂದ ಇಳಿದ ಮೇಲೆ ನಮಗೆಲ್ಲ ಶಬ್ದ ಯಾವುದಕ್ಕೆ ಬಂದಿದೆ ಎಂಬುದು ಗೊತ್ತಾಯಿತು. ಜೋರಾದ ಗಾಳಿ ಬೀಸಿದ್ದರಿಂದ ವಿಮಾನ ಇಳಿಯುವ ಸಂದರ್ಭದಲ್ಲಿ ಜೋರಾಗಿ ಶಬ್ದ ಬಂದಿದೆ ಎಂದು ವಿಮಾನ ನಿಲ್ದಾಣದಲ್ಲಿದ್ದ ಕೆಲವರು ಹೇಳಿದರು. ಆದರೆ, ಶಬ್ದ ಬಂದಿದ್ದು ಏಕೆ ಎಂಬುದು ಗೊತ್ತಾಗಲಿಲ್ಲ. ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಕ್ಕೆ ಸಿಬ್ಬಂದಿಗೆ ಥ್ಯಾಂಕ್ಸ್ ಹೇಳಿ ಹೊರ ಬಂದೇವು.
ಡಾ। ಜಿ.ಬಿ.ಸತ್ತೂರ, ಖ್ಯಾತ ವೈದ್ಯರು, ಹುಬ್ಬಳ್ಳಿ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಇಂಡಿಗೋ ವಿಮಾನದ ಲ್ಯಾಂಡಿಂಗ್ ಸಂದರ್ಭದಲ್ಲಿ ಏನು ಸಮಸ್ಯೆಯಾಗಿಲ್ಲ. ಕೆಲ ಕಾರಣಾಂತರಗಳಿಂದ ಆಕಾಶದಲ್ಲಿ ಕೆಲಹೊತ್ತು ಹಾರಾಟ ನಡೆಸಿರಬಹುದು ಅಷ್ಟೇ.
-ಹುಬ್ಬಳ್ಳಿ ವಿಮಾನ ನಿಲ್ದಾಣದ ಅಧಿಕಾರಿ ವರ್ಗ.