11ರಂದು ಮಾದಾಪುರದ ಶ್ರೀಮತಿ ಡಿ.ಚೆನ್ಮಮ್ಮ ಶಿಕ್ಷಣ ಸಂಸ್ಥೆ ವಜ್ರಮಹೋತ್ಸವ

KannadaprabhaNewsNetwork |  
Published : Jan 08, 2025, 12:17 AM IST
ಚಿತ್ರ : 7ಎಂಡಿಕೆ1 : ಶ್ರೀಮತಿ ಡಿ.ಚೆನ್ಮಮ್ಮ ಶಿಕ್ಷಣ ಸಂಸ್ಥೆ | Kannada Prabha

ಸಾರಾಂಶ

ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು 11ರಂದು ಸಂಸ್ಥೆಯ 60 ನೇ ವರ್ಷಾಚರಣೆ ಆಯೋಜಿಸಲಾಗಿದೆ. ಇದೇ ಸಂದರ್ಭ, ಅಂದಾಜು 20 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಭೋಜನಶಾಲೆ ಉದ್ಘಾಟನೆ ಮತ್ತು ಸ್ಮರಣ ಸಂಚಿಕೆ ಲೋಕಾರ್ಪಣೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಗ್ರಾಮೀಣ ಪ್ರದೇಶದ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಎಜುಕೇಶನ್ ಸೊಸೈಟಿ ವಜ್ರ ಮಹೋತ್ಸವದ ಸಂಭ್ರಮದಲ್ಲಿದ್ದು 11ರಂದು ಸಂಸ್ಥೆಯ 60 ನೇ ವರ್ಷಾಚರಣೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಕರ್ನಲ್ ಬಿ.ಜಿ.ವಿ. ಕುಮಾರ್ ತಿಳಿಸಿದ್ದಾರೆ.

ಅಂದು ಬೆಳಗ್ಗೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸುವರು. ಅತಿಥಿಗಳಾಗಿ ರಾಜ್ಯ ಸರ್ಕಾರದ ಚೀಫ್‌ ಎಲೆಕ್ಟ್ರಿಕಲ್‌ ಇನ್‌ಸ್ಪೆಕ್ಟರ್‌ ರೋಷನ್ ಅಪ್ಪಚ್ಚು, ಅರಣ್ಯ ಮಹಾವಿದ್ಯಾಲಯದ ನಿವೖತ್ತ ಡೀನ್ ಸಿ.ಜಿ. ಕುಶಾಲಪ್ಪ, ಮಾಜಿ ಸಚಿವರಾದ ಎಂ. ಪಿ ಅಪ್ಪಚ್ಚು ರಂಜನ್, ಬಿ.ಎ..ಜೀವಿಜಯ, ಪಾಂಡಿಚೇರಿ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ನಿವೃತ್ತ ಕಾರ್ಯದರ್ಶಿ ಬಿ.ಆರ್. ಬಾಬು, ಸಂಸ್ಥೆಯ ಮಹಾಪೋಷಕ ಗೌತಮ್ ಬಸಪ್ಪ, ಎಂ.ಜಿ ಬೋಪಣ್ಣ, ಕಾರ್ಯದರ್ಶಿ ಎಂ.ಬಿ. ಬೋಪಣ್ಣ, ರೋಟರಿ ಸಂಸ್ಥೆಯ ನಿಕಟ ಪೂರ್ವ ಗವರ್ನರ್‌ ಎಚ್‌.ಆರ್‌.ಕೇಶವ, ಜಿ.ಪಂ. ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಬಿ.ಬಿ. ಪುಪ್ಪಾವತಿ, ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಕೆ.ಯು. ರೀಟಾ ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭ, ಅಂದಾಜು 20 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣವಾಗಿರುವ ಭೋಜನಶಾಲೆ ಉದ್ಘಾಟನೆ ಮತ್ತು ಸ್ಮರಣ ಸಂಚಿಕೆ ಲೋಕಾರ್ಪಣೆ ನಡೆಯಲಿದೆ.

ಸ್ನೇಹ ಮಿಲನ:

ವಜ್ರಮಹೋತ್ಸವದ ಅಂಗವಾಗಿ 11ರಂದು ಮಧ್ಯಾಹ್ನ 2 ಗಂಟೆಯಿಂದ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಜಿ.ಬೋಪಣ್ಣ ಉದ್ಘಾಟಿಸಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆಯ ನಿವೃತ್ತ ಹೆಚ್ಚುವರಿ ಆಯುಕ್ತ ಬಿ.ಎ.ನಾಣಿಯಪ್ಪ, ಕಾಫಿ ಬೆಳೆಗಾರರಾದ ಸಿ.ಪಿ.ಮುದ್ದಪ್ಪ, ಕೆ.ಎಸ್.ಮಂಜುನಾಥ್, ಎಚ್.ಎ.ಎಸ್. ಉತ್ತಯ್ಯ, ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕ ಅಬ್ದುಲ್ ರಶೀದ್, ಅರಣ್ಯ ಇಲಾಖೆಯ ಹಿರಿಯ ಸಹಾಯಕಿ ಬಿ.ಆರ್. ವಿಜಯಲಕ್ಷ್ಮಿ, ಪತ್ರಕರ್ತ ಅನಿಲ್ ಎಚ್. ಟಿ., ವಕೀಲ ಕೆ.ಎಸ್.ರತನ್ ತಮ್ಮಯ್ಯ, ಕರ್ನಲ್ ಪಾಸುರ ಮುತ್ತಪ್ಪ, ಕರ್ನಲ್ ಎಂ.ಜಿ.ತಿಮ್ಮಯ್ಯ, ಸಂಸ್ಥೆಯ ನಿವೃತ್ತ ಹಿರಿಯ ಕಚೇರಿ ಸಹಾಯಕಿ ಎಸ್. ಸಿ. ಮಾಲತಿ, ಲೆಕ್ಕಪರಿಶೋಧಕ ಫ್ರಾನ್ಸಿಸ್ ಪಿ.ಡಬ್ಲ್ಯು, ನಿವೃತ್ತ ಉಪ ನೋಂದಣಿಧಾಕಾರಿ ಕೆ.ಎಂ.ಭಾನುಮತಿ, ಮೈಸೂರಿನ ಉದ್ಯಮಿ ಬಿ.ವಿ.ವೆಂಕಪ್ಪ , ಶಾಲಾ ಸಮಿತಿಯ ಪೋಷಕ ಸದಸ್ಯ ಎಚ್.ಎಸ್ ಗಣೇಶ್ , ಸವಿತ ಪಾಲ್ಗೊಳ್ಳಲಿದ್ದಾರೆ.

ಅಂದು ಸಂಜೆ 5 ಗಂಟೆಯಿಂದ 7 ಗಂಟೆ ವರೆಗೆ ಹೆಸರಾಂತ ‘ಸರಿಗಮಪ’ ಕಲಾವಿದರಾದ ಮಹೇಂದ್ರ, ಪ್ರಿಯಾ ಕುಂದಾಪುರ, ಶಶಿಕುಮಾರ್, ಸಿಂಚನ ಅವರಿಂದ ಗಾನ ವೈಭವ ಮತ್ತು ಬೆಂಗಳೂರಿನ ಕಲಾವಿದರಿಂದ ನೃತ್ಯ ಕಾರ್ಯಕ್ರಮ ಆಯೋಜಿತವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಕ. ಬಿ.ಜಿ.ವಿ. ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಥೆಯ ಇತಿಹಾಸ:

ದಾನಿ ದಿ. ಲೆ.ಕ. ಡಿ ಸಿ ಬಸಪ್ಪ ಪ್ರಯತ್ನದಿಂದಾಗಿ ಅವರ ತಾಯಿ ಡಿ ಚೆನ್ನಮ್ಮ ಸ್ಮರಣಾರ್ಥ 1960 ರ ಜು.22 ರಂದು ಆರಂಭವಾದ ಪ್ರೌಢಶಾಲೆ 6 ದಶಕಗಳಲ್ಲಿ ಈ ವ್ಯಾಪ್ತಿಯ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ದಿವಂಗತರಾದ ಮಚ್ಚಂಡ ಗಣಪತಿ, ಪುಟ್ಟುಸ್ವಾಮಿ ಮುತ್ತಯ್ಯ ಗುಂಡುಕುಟ್ಟಿ ಮಂಜುನಾಥಯ್ಯ, ಎಂ ಎ ಪೊನ್ನಪ್ಪ, ಕೆ.ಡಿ.ಸೋಮಯ್ಯ, ಸಿ.ಎ.ಪೂವಯ್ಯ, ಎಂ ಜಿ ಬೋಪಣ್ಣ ಸೇರಿದಂತೆ ಅನೇಕ ಮಹನೀಯರ ಪರಿಶ್ರಮದಿಂದಾಗಿ ಶಿಕ್ಷಣ ಸಂಸ್ಥೆಯು ಸಾಕಷ್ಟು ಅಭಿವೖದ್ದಿ ಹೊಂದಿದೆ.

1964ರಲ್ಲಿ ಗರಗಂದೂರಿನ ಈಗಿನ ಸುಂದರ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಯಿತು. 1967ರಲ್ಲಿ ದಿ. ಗುಂಡೂರಾವ್ ಕಾಲದಲ್ಲಿ ಕಾಲೇಜು ಸ್ಥಾಪನೆಯ ಕನಸು ಈಡೇರಿತು.

ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾಗಿ ಕೊಡಗಿನ ಇತಿಹಾಸದ ಕೃತಿಕಾರ, ಖ್ಯಾತ ಸಾಹಿತಿ ದಿ. ಡಿ.ಎನ್. ಕೖಷ್ಣಯ್ಯ ಕಾರ್ಯನಿರ್ವಹಿಸಿದ್ದು ಸಂಸ್ಥೆಯ ಪಾಲಿಗೆ ಹೆಮ್ಮೆಯ ವಿಚಾರ ಎಂದೂ ಕುಮಾರ್ ಸ್ಮರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ನಶಿಸುತ್ತಿರುವ ಚಿತ್ರಕಲೆ ಉಳಿಸಿ ಬೆಳೆಸಿ