ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಪೂರ್ವಭಾವಿ ಸಭೆ

KannadaprabhaNewsNetwork |  
Published : Jan 08, 2025, 12:17 AM IST
ಚಿತ್ರ : 7ಎಂಡಿಕೆ2 :  ಕವಿಶಿಷ್ಯ ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಪೂರ್ವಭಾವಿ ಸಭೆ ನಡೆಯಿತು. | Kannada Prabha

ಸಾರಾಂಶ

ಕೊಡಗಿನ ನಾಡಗೀತೆ ರಚನಾಕಾರ, ಮಡಿಕೇರಿ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಏಕೈಕ ಭಾರತೀಯ ಕನ್ನಡ ಮುಖ್ಯೋಪಾಧ್ಯಾಯರಾಗಿದ್ದ ದಿ. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಪೂರ್ವಭಾವಿ ಸಭೆ ಮಡಿಕೇರಿಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಹಿರಿಯ ಸಾಹಿತಿ, ಕೊಡಗಿನ ನಾಡಗೀತೆ ರಚನಾಕಾರ, ಮಡಿಕೇರಿ ಸೆಂಟ್ರಲ್ ಹೈಸ್ಕೂಲ್‌ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಏಕೈಕ ಭಾರತೀಯ ಕನ್ನಡ ಮುಖ್ಯೋಪಾಧ್ಯಾಯರಾಗಿದ್ದ ದಿ. ಪಂಜೆ ಮಂಗೇಶರಾಯರ 150ನೇ ವರ್ಷಾಚರಣೆ ಪೂರ್ವಭಾವಿ ಸಭೆ ಮಡಿಕೇರಿಯಲ್ಲಿ ನಡೆಯಿತು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್‌ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮವನ್ನು ಪಂಜೆ ಮಂಗೇಶರಾಯರ ಕಾರ್ಯಕ್ಷೇತ್ರವಾಗಿದ್ದ ಸೆಂಟ್ರಲ್ ಹೈಸ್ಕೂಲ್, ಅಂದರೆ ಈಗಿನ ಜೂನಿಯರ್ ಕಾಲೇಜ್ ಆವರಣದಲ್ಲಿ ನಡೆಸುವಂತೆ ತೀರ್ಮಾನಿಸಲಾಯಿತು. ಫೆ.7ರಂದು ಕಾರ್ಯಕ್ರಮ ನಡೆಸುವಂತೆ ತಾತ್ಕಾಲಿಕ ದಿನ ನಿಗದಿಗೊಳಿಸಲಾಯಿತು.

ಪ್ರಾಸ್ತಾವಿಕ ಮಾತನಾಡಿದ ಕೇಶವ ಕಾಮತ್, ಕಾರ್ಯಕ್ರಮ ನಡೆಸುವ ಸ್ಥಳ, ನಡೆಸುವ ರೀತಿಯ ಬಗ್ಗೆ ಸಲಹೆ ಸೂಚನೆ ನೀಡುವಂತೆ ಕೋರಿದರು.

ಗೌರವ ಕಾರ್ಯದರ್ಶಿ ಮುನೀರ್ ಅಹಮದ್, ಸಾಹಿತಿ ಡಾ. ಜಿ ಸೋಮಣ್ಣ, ಮಡಿಕೇರಿ ತಾಲೂಕು ನಿಕಟಪೂರ್ವ ಅಧ್ಯಕ್ಷ ಅಂಬೇಕಲ್ ನವೀನ್, ಶಿಕ್ಷಣ ಇಲಾಖೆಯ ಗುರುರಾಜ್, ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರಸನ್ನ ವೆಂಕಟೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಕಾರ್ಯಕ್ರಮದ ಕುರಿತು ಸಲಹೆ ನೀಡಿದರು.

ಸ್ವಾಗತ ಸಮಿತಿ ಗೌರವಾಧ್ಯಕ್ಷರಾಗಿ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರನ್ನು ಕೋರಿಕೊಂಡು ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪೊಲೀಸ್ ಅಧೀಕ್ಷಕರು ಪೋಷಕರಾಗಿಯೂ ಶಿಕ್ಷಣ ಇಲಾಖೆಯ ಮುಖ್ಯಸ್ಥರನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ವಿಶೇಷ ಅಹ್ವಾನಿತರಾಗಿ ಮತ್ತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ತಾಲೂಕು ಹೋಬಳಿ ಅಧ್ಯಕ್ಷರು, ಜಿಲ್ಲೆಯ ಇತರ ಸಂಘ-ಸಂಸ್ಥೆಗಳ ಅಧ್ಯಕ್ಷರನ್ನುಸಮಿತಿಯಲ್ಲಿ ಸೇರಿಸಲು ನಿರ್ಧರಿಸಲಾಯಿತು.ಕಾರ್ಯಕ್ರಮದಲ್ಲಿ ಪಂಜೆಯವರ ಬದುಕು, ಬರಹ, ಸಾಹಿತ್ಯ, ನಾಟಕ, ಕವನ ಇವುಗಳ ಕುರಿತು ರಾಜ್ಯದ ಹಿರಿಯ ಸಾಹಿತಿಗಳಿಂದ ವಿಚಾರಗೋಷ್ಠಿ ನಡೆಸುವಂತೆಯೂ, ಶಾಲಾ ವಿದ್ಯಾರ್ಥಿಗಳಿಂದ ಪಂಜೆಯವರ ಹಾಡುಗಳ ನೃತ್ಯರೂಪಕ ಮತ್ತು ಗೀತ ಗಾಯನ ಕಾರ್ಯಕ್ರಮ ನಡೆಸುವಂತೆ ತೀರ್ಮಾನಿಸಲಾಯಿತು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್ ಸಂಪತ್ ಕುಮಾರ್, ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಹೋಬಳಿ ಅಧ್ಯಕ್ಷ ಈರಮಂಡ ಹರಿಣಿ ವಿಜಯ್, ನಿರ್ದೇಶಕರಾದ ಕೆ.ಟಿ ಬೇಬಿ ಮ್ಯಾಥ್ಯು, ಸುನೀತಾ ಪ್ರೀತು, ಮಡಿಕೇರಿ ತಾಲೂಕು ನಿಕಟ ಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್, ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ ಮುದ್ದಯ್ಯ ಶಿಕ್ಷಣ ಇಲಾಖೆಯ ಗುರುರಾಜ್ ಕೆ ಪಿ, ಎಂ ಕೃಷ್ಣಪ್ಪ, ಸರ್ಕಾರಿ ಪ್ರೌಢಶಾಲಾ ಮುಖ್ಯ ಮುಖ್ಯೋಪಾಧ್ಯಾಯಿನಿ ಶಶಿಕಲಾ,

ಕ್ರಸೆಂಟ್ ಶಾಲೆಯ ಅಧ್ಯಾಪಕ ನಾಗರಾಜ ಶೆಟ್ಟಿ, ಜಾನ್ಸನ್ ಕೆ ಎ ಮುಖ್ಯೋಪಾಧ್ಯಾಯರು ಸಂತ ಮೈಕಲರ ಪ್ರೌಢಶಾಲೆ ಆಶಾ ಎಚ್., ಕೊಡಗು ವಿದ್ಯಾಲಯ ಶಿಕ್ಷಕಿ ಅನುಸೂಯ, ಬ್ಲಾಸಂ ಶಾಲಾ ಮುಖ್ಯೋಪಾಧ್ಯಾಯ ಸುನೀತಾ, ಪ್ರೀತು ಲಿಟಲ್ ಫ್ಲವರ್ ಶಾಲೆಯ ಪೂರ್ಣಿಮಾ ಮತ್ತು ಮುಕ್ತಾಕ್ಷಿ ಪದವಿಪೂರ್ವ ಕಾಲೇಜ್ ಉಪನ್ಯಾಸಕ ಪ್ರಪುಲ್ಲ, ಮಹದೇವ ಪೇಟೆ ಶಾಲೆಯ ಮುಖ್ಯ ಶಿಕ್ಷಕಿ, ರೋಜಿ ಕ್ಷೇವಿಯರ್, ಜಿಟಿ ರಸ್ತೆ ಶಾಲೆಯ ಮುಖ್ಯ ಶಿಕ್ಷಕಿ, ಈರಪ್ಪ ಎಚ್ ಎನ್ ಜನರಲ್ ತಿಮ್ಮಯ್ಯ ಶಾಲಾ ಶಿಕ್ಷಕ, ‌‌ ಸೌಮ್ಯ ಲತಾ ಎಂ.ಡಿ, ಸರ್ಕಾರಿ ಪ್ರೌಢಶಾಲೆ ಮಡಿಕೇರಿ ಶಿಕ್ಷಕಿ, ಎಚ್ ಕೆ ಸುಶೀಲ ಜಿಎಂಪಿ ಶಾಲೆಯ ಮುಖ್ಯ ಶಿಕ್ಷಕಿ, ಶೈಲ ಸಂತ ಜೋಸೆಫರ ಶಾಲಾ ಶಿಕ್ಷಕಿ ಹಾಗೂ ಸಾಹಿತ್ಯ ಪರಿಷತ್ ಸಿಬ್ಬಂದಿ ರೇಣುಕಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರ ಕ್ಷೇತ್ರಕ್ಕೆ ಆರ್ಥಿಕ ಶಿಸ್ತು ಅಗತ್ಯ
ಅಧಿಕಾರಿಗಳು ಜಾತ್ಯತೀತವಾಗಿ ಕೆಲಸ ಮಾಡಿ : ಸಿಎಂ ಸಿದ್ದರಾಮಯ್ಯ