ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯಲ್ಲಿ ಇಂದು ಸುದ್ದಿಗರಾರೊಂಡಿಗೆ ಮಾತನಾಡಿದ ಅವರು, ಮೋದಿ ಅವರಿಲ್ಲದೇ ಹಿಂದೆ ದೇಶ ನಡೆದೇ ಇಲ್ಲವಾ? ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ಹಿಂದೆಲ್ಲಾ ಬಡವರ ಬಗ್ಗೆ ಅನುಕಂಪದ ಸರಕಾರಗಳಿದ್ದವು. ಈಗಿನದು ಬರಿ ಜಾಹಿರಾತು ಸರಕಾರ, ದೇಶದಲ್ಲಿ 543 ಸೀಟ್ ಗೆಲ್ಲುತ್ತೆವೆ ಅಂತ ಅಂತ ಮೋದಿ ಹೇಳ್ತಿದಾರೆ, ಅವರ ನಡವಳಿಕೆಗಳು ಪ್ರಜಾಪ್ರಭುತ್ವಕ್ಕೆ ಸರಿ ಹೊಂದಲ್ಲ, ಮೋದಿ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಹೆದರಿಸಿ, ಬೆದರಿಸಿ ಹಲವರನ್ನು ಸೆಳೆಯುವ ಪ್ರಯತ್ನ ಮಾಡ್ತಿದಾರೆ, ನಮ್ಮ ಪಕ್ಷದಲ್ಲಿ ಇದ್ದಾಗ ಕರಪ್ಟ್ ಅಂತಾರೆ. ಅವರೇ ಮೋದಿ ಜೊತೆಗೆ, ಬಿಜೆಪಿ ಹೋದ್ರೆ ತಕ್ಷಣ ಸ್ವಚ್ಚ ಅಂತಾರೆ, ಹಂಗೆ ಹೀಗೆ ಹೇಂಗೆ ಆದ್ರು? ಎಂದು ಪ್ರಶ್ನೆ ಮಾಡಿದರು.
ಸೀಟು ಹಂಚಿಕೆ ಸಂಬಂಧ ಇಂಡಿಯಾ ಒಕ್ಕೂಟದ ಸಭೆ ನಡೆಯುತ್ತಿವೆ, ಒಂದೊಂದು ರಾಜ್ಯಗಳಲ್ಲಿ ದಿನವೂ ಒಂದೊಂದು ಸಭೆ ನಡೆಯುತ್ತಿವೆ, ಬೇರೆ ಪಕ್ಷದವರ ಜೊತೆ ಮಾತಾಡಲು ಒಂದು ತಂಡ ಮಾಡಿದ್ದೇವೆ, ಮುಕುಲ್ ವಾಸ್ಮಿಕ್ ಹಾಗೂ ಗೆಲ್ಹೋಟ್ ನೇತೃತ್ವದಲ್ಲಿ 6 ಜನರ ಟೀಂ ಮಾಡಿದ್ದೇವೆ, ಅವರ ಕೆಲಸ ಸಾಗಿದೆ ಎಂದರು.
ಎಲ್ಲಿಗೋ ಹೋಗುವಾಗ ಇಲ್ಲಿ ಇಳಿದು ಸಭೆ ಮಾಡಿ ಹೋಗ್ತಾರೆ. ಒಂದು ಅವರ ಅಭ್ಯರ್ಥಿಯನ್ನು ನೋಡೋಕೆ ಪದೇ ಪದೇ ಬರ್ತಿರಬಹುದು. ಇಲ್ಲಾಂದ್ರೆ ಕಾಂಗ್ರೆಸ್ ಮುಗಿಸಿ ಅಂತ ಹೇಳೋಕೆ ಬರ್ತಿರಬಹುದು, ಕಳೆದ ಭಾರಿಯೂ ಎಲ್ಲರೂ ಇಲ್ಲಿಗೆ ಬಂದಿದ್ದರು ಎಂದರು.
ಚಂಡಿಗಡ್ ಮೇಯರ್ ಏಲೆಕ್ಷನ್ ನಲ್ಲಿ ಒಬ್ಬ ಅಧಿಕಾರಿಯೇ ಮತ ಹಾಕಿರುವ ಪ್ರಕರಣದಲ್ಲಿ ಮಾತಾಡಿದ ಖರ್ಗೆ, ಹಿಂಗ ಆದ್ರೆ ಹೆಂಗೆ? ದೆಹಲಿಯಿಂದ ಚಂಡಿಗಡ ಕೇವಲ ಒಂದು ಗಂಟೆ ದಾರಿ, ಅಲ್ಲಿಯೇ ಈ ರೀತಿ ಆಗುತ್ತೆ ಅಂದ್ರೆ ಹೇಗೆ? ಇನ್ನು ಬೇರೆ ಕಡೆಯಲ್ಲಿ ಯಾವ ರೀತಿ ನಡೆದಿರಬಹುದು ? ಎಂದು ಆತಂಕ ಹೊರ ಹಾಕಿದರು.