- ಹುತಾತ್ಮರಿಗೆ ಕಾಂಗ್ರೆಸ್ ಕೊಡುಗೆ ಏನು?: ಯಶವಂತ್ ವಾಗ್ದಾಳಿ - - -
ಕನ್ನಡಪ್ರಭ ವಾರ್ತೆ ದಾವಣಗೆರೆಸ್ವಾತಂತ್ರ್ಯ ಹೋರಾಟದ ವೇಳೆ 1942ರಲ್ಲಿ ಬ್ರಿಟಿಷರ ಗುಂಡಿಗೆ ಬಲಿಯಾದ 6 ಜನ ಸ್ವಾತಂತ್ರ್ಯ ಹೋರಾಟಗಾರರು, 90ರ ದಶಕದ ರಾಮಜ್ಯೋತಿ ರಥಯಾತ್ರೆ ವೇಳೆ ಬಲಿಯಾದ 8 ಮಂದಿ ಶ್ರೀರಾಮ ಭಕ್ತರ ಕುಟುಂಬಗಳ ಪೈಕಿ ಎಷ್ಟು ಕುಟುಂಬಕ್ಕೆ ನಿಮ್ಮ ಕಾಂಗ್ರೆಸ್ ಆಳ್ವಿಕೆಯಲ್ಲಿ ಸೂರು, ಸೌಲಭ್ಯ, ನೆರವು ನೀಡಿದ್ದೀರಿ ಎಂದು ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ ವಿರುದ್ಧ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಹರಿಹಾಯ್ದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಾಮ ಜ್ಯೋತಿ ರಥಯಾತ್ರೆ ವೇಳೆ ಹುತಾತ್ಮರಾದ ರಾಮಭಕ್ತರ ಹೆಸರಲ್ಲಿ 15 ಕೆಜಿ ಬೆಳ್ಳಿ ಇಟ್ಟಿಗೆಯನ್ನು ನಾವೇ ಸ್ನೇಹಿತರು ₹9.40 ಲಕ್ಷ ಹೊಂದಿಸಿ, ಉತ್ತಮ್ ಚಂದ್ ಅವರಿಂದ ಉಳಿದಿದ್ದನ್ನು ಸೇರಿಸಿ, 3 ಕೆಜಿ ಬೆಳ್ಳಿ ಇಟ್ಟಿಗೆ ಮಾಡಿಸಿ, ಅದರಲ್ಲಿ ಹುತಾತ್ಮ 8 ರಾಮಭಕ್ತರ ಹೆಸರು ಹಾಕಿಸಿ, ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಟ್ರಸ್ಟ್ ನ್ಯಾಸದ ಕಾರ್ಯದರ್ಶಿಗಳ ಕೈಗೆ ಕೊಟ್ಟಿದ್ದೇವೆ ಎಂದರು.ಅಯೋಧ್ಯೆ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ಸಮರ್ಪಿಸಲು ಹೋಗಿದ್ದ ವೇಳೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಹ ಸಿಕ್ಕಿದ್ದು, ಶ್ರೀಗಳ ಮೂಲಕವೇ ನ್ಯಾಸದ ಕೋಶಾಧ್ಯಕ್ಷರಾದ ಶ್ರೀ ಗೋವಿಂದ ಗಿರಿಧರ ಮಹಾರಾಜರಿಗೆ ಸಮರ್ಪಿಸಿದ್ದೇವೆ. ದಿನೇಶ ಶೆಟ್ಟಿ ಪಕ್ಕದಲ್ಲೇ ಇದ್ದ ಕಾಂಗ್ರೆಸ್ ಮಾಜಿ ಮೇಯರ್ ಅನಿತಾ ಬಾಯಿ ಅಣ್ಣ ಶ್ರೀನಿವಾಸ ಸಹ ರಾಮಭಕ್ತ. 90ರ ದಶಕದ ಗಲಾಟೆಯಲ್ಲಿ ಭೀಕರವಾಗಿ ಹತ್ಯೆಯಾಗಿದ್ದರು. ಇಂತಹ ರಾಮಭಕ್ತರಿಗೆ ಅವಮಾನಿಸುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಕೋಮು ಗಲಭೆಯಲ್ಲಿ ಬಲಿಯಾದ ಹಿಂದುಗಳಿಗಷ್ಟೇ ಅಲ್ಲ, ಅನ್ಯ ಕೋಮಿನವರಿಗೂ ಶಾಮನೂರು ಶಿವಶಂಕರಪ್ಪ 90ರ ದಶಕದಲ್ಲಿ ಧನಸಹಾಯ ಮಾಡಿರಬಹುದು. ಅದು ಆಗಿನ ಶಾಸಕ ಯಜಮಾನ ಮೋತಿ ವೀರಣ್ಣ ಅವರಿಗೆ ಸಿಗುತ್ತಿದ್ದ ಕಾಂಗ್ರೆಸ್ ಟಿಕೆಟ್ ತಪ್ಪಿಸಿ, ತಾವು ಪಡೆಯಲಿಕ್ಕೆಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದರು.ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ, ಹುತಾತ್ಮ ರಾಮಭಕ್ತರ ಕುಟುಂಬಕ್ಕೆ ಇದೇ ದಿನೇಶ ಶೆಟ್ಟಿ ದೂಡಾ ಅಧ್ಯಕ್ಷರಾಗಿ, ತಮ್ಮ ಪಕ್ಷದಿಂದ ಎಷ್ಟು ನಿವೇಶನ ಕೊಡಿಸಿದ್ದಾರೆ? ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅದೆಷ್ಟು ಬಂಗಲೆ ಕಟ್ಟಿಸಿ ಕೊಟ್ಟಿದ್ದಾರೆ? ಎಷ್ಟು ಹಣದ ಸಹಾಯ ಮಾಡಿದ್ದಾರೆ? ಎಷ್ಟು ಪಾರ್ಕ್, ರಸ್ತೆ, ಸರ್ಕಲ್‌ಗಳಿಗೆ ಸ್ವಾತಂತ್ರ್ಯ ಯೋಧರ ಹೆಸರಿಟ್ಟಿದ್ದಾರೆ? ಶಾಮನೂರು ಕುಟುಂಬದ ಯಾರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು ಎಂಬುದನ್ನು ಮೊದಲು ತಿಳಿಸಲಿ ಎಂದು ಹೇಳಿದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ, ಬಿ.ರಮೇಶ ನಾಯ್ಕ, ಚೇತನಾ ಶಿವಕುಮಾರ, ಶಿವನಗೌಡ ಪಾಟೀಲ, ಟಿಂಕರ್ ಮಂಜಣ್ಣ, ಕಿಶೋರಕುಮಾರ, ಪರಶುರಾಮ, ಗೋವಿಂದರಾಜ, ಬಾಲಚಂದ್ರ ಶ್ರೇಷ್ಠಿ ಸೇರಿದಂತೆ ಹುತಾತ್ಮರ ಕುಟುಂಬ ಸದಸ್ಯರು ಇದ್ದರು.- - -
(ಟಾಪ್ ಕೋಟ್)ದಾವಣಗೆರೆಯಲ್ಲಿ 1990ರ ಅಕ್ಟೋಬರ್ 6ರಂದು ನಮ್ಮ ಭಾವ ಶ್ರೀನಿವಾಸ ಗಲಭೆ ವೇಳೆ ಬರ್ಬರವಾಗಿ ಹತ್ಯೆ ಮಾಡಿದ್ದರು. ಇದಾಗಿ 35 ವರ್ಷ ಕಳೆದರೂ ನಾವ್ಯಾರೂ ಯಾರ ಮನೆ ಬಾಗಿಲಿಗೂ ಹೋಗಿ ನೆರವು, ಅಧಿಕಾರ ಕೇಳಿಲ್ಲ. ಇಂತಹ ಘಟನೆ ದಿನೇಶ ಶೆಟ್ಟಿ ಮನೆ ಸದಸ್ಯರಲ್ಲೇ ಆಗಿದ್ದರೆ ಇದೇ ರೀತಿ ವ್ಯಂಗ್ಯವಾಗಿ ಮಾತನಾಡುತ್ತಿದ್ದರಾ?
- ಚೇತನಾ ಬಾಯಿ ಶಿವಕುಮಾರ, ಮುಖಂಡರು, ಬಿಜೆಪಿ ಮಹಿಳಾ ಮೋರ್ಚಾ.- - - -23ಕೆಡಿವಿಜಿ1.ಜೆಪಿಜಿ:
ದಾವಣಗೆರೆಯಲ್ಲಿ ಗುರುವಾರ ಬಿಜೆಪಿ ಹಿರಿಯ ಮುಖಂಡ ಯಶವಂತ ರಾವ್ ಜಾಧವ್ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.