- ಬದುಕು ಕಸಿದ ಸೌತೆಕಾಯಿ ಫ್ಯಾಕ್ಟರಿ ರಾಸಾಯನಿಕಯುಕ್ತ ನೀರು: ರೈತ ಕಣ್ಣೀರು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
10-12 ವರ್ಷಗಳಿಂದ 2 ಎಕರೆಯಲ್ಲಿ ಮಕ್ಕಳಿಗಿಂತ ಹೆಚ್ಚು ಪ್ರೀತಿಯಿಂದ ಬೆಳೆಸಿದ್ದ, ಜತನದಿಂದ ಕಾಪಾಡಿದ್ದ 1100 ಅಡಕೆ ಮರಗಳನ್ನು ಗ್ರೀನ್ ಆಗ್ರೋ ಪ್ಯಾಕ್ ಸೌತೆಕಾಯಿ ಕಂಪನಿಯ ಕಲುಷಿತ ನೀರಿನ ಪರಿಣಾಮ ಇಳುವರಿಯಿಲ್ಲದೇ, ಜೆಸಿಬಿಯಿಂದ ತೆರವುಗೊಳಿಸಿದ ಘಟನೆ ತಾಲೂಕಿನ ಹೆಬ್ಬಾಳ್ ಗ್ರಾಮದಲ್ಲಿ ಸೋಮವಾರ ವರದಿಯಾಗಿದೆ.ಹೆಬ್ಬಾಳದಲ್ಲಿ ಗ್ರೀನ್ ಆಗ್ರೋ ಪ್ಯಾಕ್ ಸೌತೆಕಾಯಿ ಕಂಪನಿಯಿಂದ ಹೊರಬಿಡುವ ರಾಸಾಯನಿಕ ಮಿಶ್ರಿತ ನೀರು ಹಳ್ಳದ ಮೂಲಕ, ಹೊಲ-ಗದ್ದೆಗಳ ಅಂತರ್ಜಲ ಸೇರುತ್ತಿದೆ. ಹೀಗೆ ಅಂತರ್ಜಲ ಸೇರಿದ ರಾಸಾಯನಿಕ ಮಿಶ್ರಿತ ನೀರಿನಿಂದಾಗಿ ಸುಮಾರು 18ಕ್ಕೂ ಹೆಚ್ಚು ಕೊಳವೆ ಬಾವಿಗಳ ನೀರು ಸಹ ಕಲುಷಿತವಾಗಿದೆ. ಈ ಕಲುಷಿತ ನೀರನ್ನೇ ಅಡಕೆ ಗಿಡಗಳಿಗೆ ಹರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಣಾಮ 1100 ಅಡಕೆ ಮರಗಳಿಂದ ಕನಿಷ್ಠ 2 ಕ್ವಿಂಟಲ್ ಅಡಕೆಯೂ ಬಂದಿಲ್ಲ. ಈ ಬೇಸರದಿಂದ ರೈತ ಕೆ.ವಿ.ರುದ್ರೇಶ್ ಜೆಸಿಬಿ ಬಾಡಿಗೆಗೆ ತರಿಸಿಕೊಂಡು ಕಣ್ಣೀರು ಹಾಕುತ್ತ, ಅಡಕೆ ಮರಗಳ ನಾಶಪಡಿಸಿದ್ದಾರೆ.
ಅಡಕೆ ಗಿಡಗಳಿಗೆ ಸಮೀಪದ ಸೌತೆಕಾಯಿ ಫ್ಯಾಕ್ಟರಿಯ ರಾಸಾಯನಿಕಯುಕ್ತ ಮಲಿನ ನೀರು ಮಾರಕವಾಗಿದೆ ಪರಿಣಮಿಸಿದೆ. ರುದ್ರೇಶ ಅಷ್ಟೇ ಅಲ್ಲ, ಸುತ್ತಮುತ್ತಲಿನ ರೈತರದ್ದೂ ಇದೇ ಪರಿಸ್ಥಿತಿ. ನಾಲ್ಕೈದು ವರ್ಷಗಳ ಹಿಂದೆಯೇ ಸೌತೆಕಾಯಿ ಫ್ಯಾಕ್ಟರಿಯಿಂದ ಆಗುತ್ತಿರುವ ಅನಾಹುತ, ಅಪಾಯದ ಬಗ್ಗೆ ಕನ್ನಡಪ್ರಭ ಸಹ ವಿಶೇಷ ವರದಿ ಮಾಡಿದ್ದರೂ ಸಂಬಂಧಿಸಿದವರು ಎಚ್ಚೆತ್ತುಕೊಂಡಿಲ್ಲ.- - -
-7ಕೆಡಿವಿಜಿ10, 11, 12, 13:ಹೆಬ್ಬಾಳ್ ಗ್ರಾಮದಲ್ಲಿ ಸೌತೆಕಾಯಿ ಫ್ಯಾಕ್ಟರಿ ತ್ಯಾಜ್ಯ ನೀರಿನಿಂದಾಗಿ ಅಡಕೆ ಬೆಳೆ ನಷ್ಟಕ್ಕೀಡಾದ ಬೇಶರಕ್ಕೆ ರೈತ ರುದ್ರೇಶ 1100 ಅಡಕೆ ಮರಗಳನ್ನು ಜೆಸಿಬಿಯಿಂದ ನಾಶಪಡಿಸಿದರು.