ಕನ್ನಡಪ್ರಭ ವಾರ್ತೆ ಉಡುಪಿ
ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳ ಪಾತ್ರವು ಮುಖ್ಯ. ಉತ್ತಮ ಶಿಸ್ತು, ನಾಯಕತ್ವ ಗುಣ, ಸೇವಾಮನೋಭಾವ ಸಹಿತ ಆದರ್ಶ ವ್ಯಕ್ತಿತ್ವ ಬೆಳೆಸಿಕೊಳ್ಳಲು ಸಾಧ್ಯ ಎಂದು ಮಂಗಳೂರಿನ ಕರ್ನಾಟಕ ರಾಜ್ಯ ದೇವಾಡಿಗರ ಕೇಂದ್ರ ಸಂಘದ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ದುಬೈ ಉದ್ಯಮಿ ಹರೀಶ್ ಶೇರಿಗಾರ್ ಹೇಳಿದ್ದಾರೆ.ಇಲ್ಲಿನ ಹಿರಿಯಡ್ಕ ದೇವಾಡಿಗ ಉಪಸಂಘದಲ್ಲಿ ನಡೆದ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ, ವಿದ್ಯಾರ್ಥಿ ವೇತನ, ಸನ್ಮಾನ ಹಾಗೂ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ಕೇಂದ್ರ ಸಂಘದ ಅಧ್ಯಕ್ಷ ಅಶೋಕ್ ಮೊಯ್ಲಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಹಾಪೋಷಕರಾಗಿ ಶ್ರೀಧರ ದೇವಾಡಿಗ ಇದ್ದರು. ಉಪಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.ಡಾ. ಮಾಧವಿ ಎಸ್. ಭಂಡಾರಿ, ಡಾ. ಪ್ರವೀಣ್ ಕುಮಾರ್, ಆಲೂರು ರಘುರಾಮ್ ದೇವಾಡಿಗ, ಅಶೋಕ್ ಶೇರಿಗಾರ್ ಹಿರಿಯಡ್ಕ, ಪ್ರಭಾಕರ್ ದೇವಾಡಿಗ, ಮೋಹನ್ ದಾಸ್ ಅವರು ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಗುರುತಿಸಿ ಸನ್ಮಾನಿಸಲಾಯಿತು.ಈ ಸಾಲಿನ ಪ್ರತಿಭಾವಂತ ವಿದ್ಯಾರ್ಥಿ ಕೆ. ಶ್ರೀನಿತ್ ಎಸ್. ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು. ಒಟ್ಟು 1 ಲಕ್ಷ 3 ಸಾವಿರ ರು. ಮೊತ್ತದ ಪುಸ್ತಕ ಹಾಗು ಸುಮಾರು 42000 ರು. ವಿದ್ಯಾರ್ಥಿವೇತನ ವಿತರಿಸಲಾಯಿತು.ಯಶಸ್ವಿನಿ ಹಿರಿಯಡ್ಕ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಕರುಣಾಕರ್ ಎಂ.ಎಚ್., ವೀಣಾ ಗಣೇಶ್, ಗೀತಾ ಕಲ್ಯಾಣಪುರ, ಬಾಬು ದೇವಾಡಿಗ, ಸುಧಾಕರ್ ಕುಮಾರ್ ದೇವಾಡಿಗ, ಸದಾನಂದ ಶೇರಿಗಾರ್ ಇದ್ದರು.
ಎಚ್. ಗಣೇಶ್ ಸೇರಿಗಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ರಮೇಶ್ ಶೇರಿಗಾರ್ ವಂದಿಸಿದರು. ಪೂರ್ಣಿಮಾ ದಿನೇಶ್ ಹಾಗೂ ಶತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು. ರತ್ನಾಕರ ದೇವಾಡಿಗ, ಮಂಜುನಾಥ್ ಸೇರಿಗಾರ್ ಪೆರ್ಡೂರು, ವಿಶ್ವನಾಥ್ ಸೇರಿಗಾರ್ ಸಹಕರಿಸಿದರು