ಕುಷ್ಟಗಿ: ಪುರಾಣ ಪ್ರವಚನಗಳು ಜಗತ್ತನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುವ ಮಾರ್ಗ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಪುರಾಣ ಎಂಬುದು ಜಗತ್ತನ್ನು ಬೆಳಗಿಸಲು ಒಂದು ಸಾಧನೆ ನಂಬಿಕೆ ಇಟ್ಟು ಮನುಷ್ಯ ಧಾರ್ಮಿಕತೆಯಲ್ಲಿ ತೊಡಗಿದರೆ ಸನ್ಮಾರ್ಗ ಪ್ರಾಪ್ತಿಯಾಗುತ್ತದೆ. ಅಷ್ಟೆ ಅಲ್ಲದೆ ಭಕ್ತಿ ಭಾವನೆಯೂ ಮೂಡುತ್ತದೆ ಎಂದರು.
ಪುರಾಣಗಳಿಂದ ಸಂಸ್ಕ್ರತಿ, ಆಚಾರ, ವಿಚಾರ ಹಾಗೂ ಧಾರ್ಮಿಕತೆ ತಿಳಿದುಕೊಳ್ಳಬಹುದಾಗಿದ್ದು, ಇಂತಹ ಪುರಾಣಗಳು ಹೆಚ್ಚೆಚ್ಚು ನಡೆಯಬೇಕು ಎಂದರು.ಪ್ರತಿಯೊಬ್ಬರೂ ಉತ್ತಮ ಚಿಂತನೆ, ವಿಚಾರ ಮತ್ತು ನಡತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ನವರಾತ್ರಿ ದಸರಾ ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ದೇವಿ ಪುರಾಣದ ಮಹಾಮಂಗಲದ ಅಂಗವಾಗಿ ದೇವಿಯ ಪುರಾಣ ಗ್ರಂಥ ಹಾಗೂ ದೇವಿಯ ಭಾವಚಿತ್ರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕಾಳಿಕಾದೇವಿ ದೇವಸ್ಥಾನದಿಂದ ಆರಂಭಗೊಂಡು ಮುಖ ಬೀದಿಗಳಲ್ಲಿ ಮೆರವಣಿಗೆಗೊಳ್ಳುವ ಮೂಲಕ ದೇವಸ್ಥಾನಕ್ಕೆ ತಲುಪಿಸುವ ಮೂಲಕ ದೇವಿ ಗ್ರಂಥ ಹಾಗೂ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ದೇವಿ ಪುರಾಣ ಸಂಪನ್ನಗೊಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷ ಶರಣಪ್ಪ ಬಡಿಗೇರ, ಮಾನಪ್ಪ ಕಮ್ಮಾರ, ಗುರಪ್ಪ ಬಡಿಗೇರ, ನಗರ ಘಟಕ ಅಧ್ಯಕ್ಷ ಸಿದ್ದಪ್ಪ ಬಡಿಗೇರ, ನಗರ ಘಟಕ ಪ್ರಧಾನ ಕಾರ್ಯದರ್ಶಿ ದೇವಪ್ಪ ಬಡಿಗೇರ, ಕೃಷ್ಣಪ್ಪ ಪತ್ತಾರ, ಬಸವರಾಜ ಬಡಿಗೇರ, ಶೇಷಗಿರಿ ಸೋನಾರ್, ಅಡಿವೆಪ್ಪ ಪತ್ತಾರ, ನಾಗರಾಜ ಬಡಿಗೇರ, ಅಯ್ಯಪ್ಪ ಬಡಿಗೇರ, ಅನೀಲ ಕಮ್ಮಾರ, ಶ್ರೀಶೈಲ ಬಡಿಗೇರ, ಶಿವಕುಮಾರ ಬಡಿಗೇರ, ಮಹಾಂತೇಶ ಬಡಿಗೇರ, ಪ್ರಮೋದ ಬಡಿಗೇರ, ಪ್ರಭು ಪತ್ತಾರ,ಪುರಾಣ ಪ್ರವಚನಕಾರ ನಾಗಲಿಂಗ ಬಡಿಗೇರ, ದೇವಸ್ಥಾನ ಅರ್ಚಕ ಕಾಳಪ್ಪ ಬಡಿಗೇರ ಹಾಗೂ ಮಹಿಳೆಯರು ಸೇರಿದಂತೆ ಇತರರು ಇದ್ದರು.