ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಕರ್ನಾಟಕ ರಾಜ್ಯ ಅಮೇಚೂರ್ ಸೈಕ್ಲಿಂಗ್ ಸಂಸ್ಥೆಯಿಂದ ನಡೆಯಲಿರುವ ನಾಲ್ಕು ದಿನಗಳ 28ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನಶಿಪ್‌ಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿಜಯಪುರದಲ್ಲಿ ಸೈಕ್ಲಿಂಗ್ ವೆಲೊಡ್ರಂ ಕಾಮಗಾರಿ ಶೀಘ್ರದಲ್ಲಿ ಪೂರ್ಣವಾಗಲಿದೆ. ಅದಕ್ಕೆ ಅಗತ್ಯವಾಗಿರುವ ಹೆಚ್ಚಿನ ಅನುದಾನವನ್ನು ಸರ್ಕಾರ ನೀಡಲಿದೆ. ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ವಿಜಯಪುರದಲ್ಲಿ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಬೇಕಿರುವ ಅತ್ಯುತ್ತಮ ಹವಾಮಾನ ಮತ್ತು ಪೂರಕ ವಾತಾರವಣವಿದೆ. ಅಲ್ಲದೇ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟ್‌ಗಳು ರೋಡ್ ಸೈಕ್ಲಿಂಗ್‌ನಲ್ಲಿ ರಾಷ್ಟ್ರಾದ್ಯಂತ ಹೆಸರು ಮಾಡಿದ್ದಾರೆ. ಹೀಗಾಗಿ ಇಲ್ಲಿ ಸೈಕ್ಲಿಂಗ್ ಅಕಾಡೆಮಿ ಸ್ಥಾಪನೆಯಿಂದ ರೋಡ್ ಸೈಕ್ಲಿಂಗ್, ವೆಲೋಡ್ರಂ ಸೈಕ್ಲಿಂಗ್ ಮತ್ತು ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧಿಗಳಿಗೂ ಅನುಕೂಲವಾಗಲಿದೆ ಎಂದು ವಿವರಿಸಿದರು.ಈ ಅಕಾಡೆಮಿ ಸ್ಥಾಪನೆಯಿಂದ ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯಗಳು ಸೈಕ್ಲಿಸ್ಟ್‌ಗಳಿಗೆ ಸಿಗಲಿವೆ. ಅಲ್ಲದೇ, ಸ್ಥಳೀಯ ಬಡ ಮತ್ತು ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಾಕಷ್ಟು ಪ್ರೋತ್ಸಾಹ ಸಿಗಲಿದೆ. ಇದಕ್ಕಾಗಿ ಇಲಾಖೆಯ ಸಿಎಸ್ಆರ್ ಫಂಡ್ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯಿಂದಲೂ ನೆರವು ನೀಡಲಾಗುವುದು ಎಂದು ತಿಳಿಸಿದರು.
ಸೈಕ್ಲಿಂಗ್ ಸಂಸ್ಥೆಯ ಅಧ್ಯಕ್ಷ ರಾಜು ಬಿರಾದಾರ ಮಾತನಾಡಿ, ಜಿಲ್ಲೆಯಲ್ಲಿ ಸಚಿವ ಎಂ.ಬಿ.ಪಾಟೀಲ ಮತ್ತಿತರರು ಸೈಕ್ಲಿಂಗ್‌ಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ಈವರೆಗೆ ನಡೆದ ಒಟ್ಟು 28 ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಕ್ರೀಡಾಕೂಟಗಳಲ್ಲಿ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟ್‌ಗಳು 13 ಬಾರಿ ಜನರಲ್ ಚಾಂಪಿಯನ್ ಆಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದರು.
ಮೊದಲ ದಿನ ಫಲಿತಾಂಶ:
೧೬ ವರ್ಷದೊಳಗಿನ ಬಾಲಕರ ೨೦ ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್‌ನಲ್ಲಿ ರಾಜಸ್ಥಾನದ ಶೌರ್ಯ ಶೇರೋನ್ ೨೬ನಿ೨೪:೧೨೬ ಸೆ. ಪ್ರಥಮ. ರಾಜಸ್ಥಾನದ ರಾಧಾಕಿಶನ್ ಹುಡ್ಡಾ ೨೬ನಿ ೫೧:೧೮೪ ಸೆ ದ್ವಿತೀಯ ಹಾಗೂ ಕರ್ನಾಟಕದ ಯಲ್ಲೇಶ ಹುಡೇದ ೨೭ನಿ೦೬:೪೨೦ ಸೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪುರುಷರ ೪೦ ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್‌ನಲ್ಲಿ ಕರ್ನಾಟಕದ ನವೀನ್ ಜಾನ್ ೪೯ನಿ ೫೧:೯೭೭ ಸೆ. ಪ್ರಥಮ, ದಿನೇಶಕುಮಾರ ಸರ್ವಿಸಸ್ ೫೧ನಿ೦೮:೭೫೬ ಸೆ ದ್ವಿತೀಯ ಹಾಗೂ ತಮಿಳುನಾಡು ಜೋಯಲ್ ಸಂತೋಷ ಸುಂದರಂ ಎಸ್. ೫೧ನಿ೨೮:೨೯೩ ಸೆ. ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.