- ಎರಡು ದಿನದಲ್ಲಿ ಸ್ಪಂದಿಸದಿದ್ದಲ್ಲಿ ಪಾಲಿಕೆ ಕೇಂದ್ರ ಕಚೇರಿ, ಉಭಯ ಶಾಸಕರ ಮನೆಗಳಿಗೆ ಮುತ್ತಿಗೆ । ಶೋಭಾ ದೇಸಾಯಿ ಗಡುವು ನಿಗದಿ
ಕನ್ನಡಪ್ರಭ ವಾರ್ತೆ ಕಲಬುರಗಿ
ಮಹಾನಗರದ ಪಾಲಿಕೆ ಆಡಳಿತ ಬಿಗುವು ಕಳೆದುಕೊಂಡು ಇಲ್ಲಿನ ಆರ್ಥಿಕ ಪರಿಸ್ಥಿತಿ ರೋಗಗ್ರಸ್ತವಾಗಿದೆ. ತೆರಿಗೆ ಸಂಗ್ರಹಿಸೋರಿಲ್ಲ, ವಲಯ ಕಚೇರಿಗಳು ಪಾಳು ಬಿದ್ದಿವೆ, ಹೊಲಸು ಕುಡಿವ ನೀರು ಪೂರೈಕೆ, ಹದಗೆಟ್ಟ ರಸ್ತೆಗಳು ಇವೆಲ್ಲ ಸಮಸ್ಯೆಗಳಿಂದ ನಗರವಾಸಿಗಳ ಬದುಕು ಜರ್ಜರಿತವಾಗಿದೆ ಎಂದು ದೂರಿರುವ ಪಾಲಿಕೆ ವಿಪಕ್ಷ ಬಿಜೆಪಿ ಇನ್ನೆರಡು ದಿನದಲ್ಲಿ ತಾನು ಎತ್ತಿರುವ ಸಮಸ್ಯೆಗಳಿಗೆ ಪರಿಹಾರ, ಸ್ಪಂದನೆ ದೊರಕದೆ ಹೋದಲ್ಲಿ ಪಾಲಿಕೆ ಕೇಂದ್ರ ಕಚೇರಿ ಹಾಗೂ ಶಾಸಕ ಅಲ್ಲಂಪ್ರಭು, ಉತ್ತರ ಶಾಸಕಿ ಖನೀಜ್ ಫಾತೀಮಾ ಮನೆಗಳಿಗೆ ಮುತ್ತಿಗೆ ಹಾಕೋದಾಗ ಎಚ್ಚರಿಸಿದೆ.ಪಾಲಿಕೆ ವಿರೋಧ ಪಕ್ಷ ನಾಯಕಿ ಶೋಭಾ ದೇಸಾಯಿ, ಮಾಜಿ ಮೇಯರ್ ವಿಶಾಲ ಧರ್ಗಿ, ಮಾಜಿ ಉಪ ಮೇಯರ್ ಶಿವಾನಂದ ಪಿಸ್ತಿ ಸೇರಿದಂತೆ ಪಾಲಿಕೆಯ ಬಿಜೆಪಿ ಸದಸ್ಯರು ಕೆಲವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಪಾಲಿಕೆಯ ಆಡಳಿತ ಅಧೋಗತಿ ತಲುಪಿದರೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯಾಗಲಿ, ನಗರ ಶಾಸಕರಾಗಲಿ ಕ್ಯಾರೆ ಎಂದಿಲ್ಲ. ಹೀಗಾಗಿ ನಗರ ಮೂಲ ಸವಲತ್ತು ಹರಿದು ಹೋಗಿದೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.
...ಬಾಕ್ಸ್....
ಹೊರ ವಲಯದ ಉದನೂರಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಬೆಂಕಿ ಪ್ರಸಂಗ ಕಾಡುತ್ತಿದ್ದರೂ ಕೇಳೋರಿಲ್ಲ. ವೈಜ್ಞಾನಿಕ ವಿಧಾನ ಅನುಸರಿಸದೆ ಘಟಕ ನಿರ್ಮಿಸಿದ್ದು, ಇದರಿಂದ ಜನತೆ ಆರೋಗ್ಯದ ಮೇಲೆ ಭಾರಿ ಕೆಟ್ಟ ಪರಿಣಾಮ ಬೀರುತ್ತಿದೆ. ಉಭಯ ಶಾಸಕರು, ಜಿಲ್ಲಾ ಸಚಿವರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಶೋಭಾ ದೇಸಾಯಿ, ವಿಶಾಲ ಧರ್ಗಿ ದೂರಿದರು.
....ಬಾಕ್ಸ್.....ಪಾಲಿಕೆ ಹಲವು ವಿಭಾಗಗಳಿಗೆ ಬೀಗ!ಭೂಸ್ವಾಧೀನ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ 300 ಕೋಟಿ ರು. ಪರಿಹಾರ ಭೂ ಮಾಲೀಕರಿಗೆ ನೀಡಬೇಕಿದ್ದರೂ ನೆನೆದುದಿಗೆ ಬಿದ್ದಿದೆ. ಹಲವು ಕೇಸ್‌ಗಳಲ್ಲಿ ಪಾಲಿಕೆಯ ಕಚೇರಿ ಸ್ವತ್ತು, ಆಸ್ತಿಪಾಸ್ತಿ ಮುಟ್ಟುಗೋಲಿಗೆ ಆದೇಶ ಬಂದಿವೆ. ಅನೇಕ ವಿಭಾಗಗಳ ಪೀಠೋಪಕರಣ, ಕಂಪ್ಯೂಟರ್, ಸಾಮಗ್ರಿಗಳು ಜಪ್ತಿಯಾಗಿ ಹಲವು ವಿಭಾಗ ಬೀಗ ಜಡಿಯಲ್ಪಟ್ಟಿದ್ದರೂ ಕೇಳೋರಿಲ್ಲ. ಇದು ನಾಚಿಕೆ ಗೇಡಿನ ವಿಚಾರವೆಂದು ಶೋಭಾ ದೇಸಾಯಿ ಪಾಲಿಕೆ ಆಡಳಿತದ ವಿರುದ್ಧ ವಾಗ್ದಾಳಿ ನಡೆಸಿದರು.-----
ಕಮೀಷನರ್ ಎಲ್ಲಿದ್ದಾರೆಂಬ ಮಾಹಿತಿಯೇ ಇಲ್ಲ!
ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಹೋದರೂ ಪಾಲಿಕೆಯ ಆಡಳಿತ ಮುಖ್ಯಸ್ಥ ಕಳೆದ 2 ವಾರದಿಂದ ಪಾಲಿಕೆಗೆ ಬಂದಿಲ್ಲ.ಹೀಗಾಗಿ ಪಾಲಿಕೆ ಆಡಳಿತ ಅಧೋಗತಿ ತಲುಪಿದೆ. ಕಮೀಷನರ್ ಧೋರಣೆ ಪ್ರಶ್ನಿಸಿದ ಸೋಭಾ ದೇಸಾಯಿ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ನಗರಾಧ್ಯಕ್ಷ ಚಂದು ಪಾಟೀಲ್ ಸೇರಿ ಬಿಜೆಪಿ ಮುಖಂಡರೊಂದಿಗೆ ಶಾಸಕರ ಮನೆ, ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಬಿಸಿ ಮುಟ್ಟಿಸುತ್ತೇವೆಂದು ಹೇಳಿದ್ದಾರೆ.ಫೋಟೋ- ಶೋಭಾ 1 ಮತ್ತು ಶೋಭಾ 2