ಬಿಜೆಪಿ ಏಜೆಂಟ್ ಗ್ಯಾನೇಶ್ ಕುಮಾರ್ ವಜಾಗೊಳಿಸಿ: ಸಿಪಿಐ ಜಿಲ್ಲಾ ಖಜಾಂಚಿ ಗಿರೀಶ್

KannadaprabhaNewsNetwork |  
Published : Oct 30, 2026, 02:00 AM IST
್ಿ್ಿ್ಿ | Kannada Prabha

ಸಾರಾಂಶ

ಕೇಂದ್ರ ಸರ್ಕಾರ ಗ್ಯಾನೇಶ್ ಕುಮಾರನನ್ನು ರಕ್ಷಿಸುತ್ತಿದೆ. ಗ್ಯಾನೇಶ್ ಕುಮಾರ್ ಬಿಜೆಪಿ ಮತ್ತು ಆರ್‌ಎಸ್‌ಎಸ್ ಏಜೆಂಟ್ ಆಗಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವ ಮೂಲಕ ಬಿಜೆಪಿ ಚುನಾವಣೆಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರು

ಕೇಂದ್ರ ಸರ್ಕಾರ ಕೂಡಲೇ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ವಜಾಗೊಳಿಸಿ ಮತ್ತು ಎಸ್‌ಐಆರ್ ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಗಿರೀಶ್ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.

ಸಿಪಿಐನಿಂದ ಬಿಎಸ್‌ಎನ್‌ಎಲ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮಾನವಸರಪಳಿ ನಿರ್ಮಿಸಿದ ನಂತರ ಮಾತನಾಡಿದ ಅವರು. ಕೇಂದ್ರ ಸರ್ಕಾರ ಗ್ಯಾನೇಶ್ ಕುಮಾರನನ್ನು ರಕ್ಷಿಸುತ್ತಿದೆ. ಗ್ಯಾನೇಶ್ ಕುಮಾರ್ ಬಿಜೆಪಿ ಮತ್ತು ಆರ್‌ಎಸ್‌ಎಸ್ ಏಜೆಂಟ್ ಆಗಿ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುವ ಮೂಲಕ ಬಿಜೆಪಿ ಚುನಾವಣೆಗಳಲ್ಲಿ ಗೆಲ್ಲುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು. ಕೇಂದ್ರ ಚುನಾವಣಾ ಆಯೋಗ ಸುಪ್ರೀಂಕೋರ್ಟಿಗೆ ಅಫಿಡೆವಿಟ್ ಸಲ್ಲಿಸಿ ಪಶ್ಚಿಮ ಬಂಗಾಳದಲ್ಲಿ 16 ಲಕ್ಷ ನೈಜ ಮತದಾರರನ್ನು ಕೈಬಿಟ್ಟಿರುವುದು ತಪ್ಪಾಗಿದೆ ಎಂದು ತಿಳಿಸಿದೆ. ಇದರಿಂದ ಗ್ಯಾನೇಶ್ ಕುಮಾರ್ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಸಾಬಿತಾಗಿದೆ. ಹಾಗಾಗಿ ಅವರನ್ನು ವಜಾಗೊಳಿಸಿ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಸಿಪಿಐ ಜಿಲ್ಲಾ ಖಜಾಂಚಿ ಅಶ್ವತ್ಥನಾರಾಯಣ ಮಾತನಾಡಿ, ಗ್ಯಾನೇಶ್ ಕುಮಾರ್ ಸೇರಿದಂತೆ ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಟಿ.ಎನ್. ರಾಜೇಶ್ ಮತ್ತು ಬೋಜರಾಜು, ಜಿಲ್ಲಾ ಮಂಡಳಿ ಸದಸ್ಯ ನಾಗರಾಜು, ಶಾಖಾ ಕಾರ್ಯದರ್ಶಿಗಳಾದ ಹನುಮಯ್ಯ, ದೇವರಾಜು, ಮಂಜುನಾಥ್, ಜಿಲ್ಲಾ ಮುಖಂಡರಾದ ವೆಂಕಟೇಶ್, ಗೋಪಾಲ್ ಕುಪ್ಪೂರು, ಚಾಮುಂಡಿ ಡೈಕ್ಯಾಸ್ಟ್ ಯೂನಿಯನ್‌ನ ಅಧ್ಯಕ್ಷರಾದ ನಾಗಭೂಷಣ್, ಉಪಾಧ್ಯಕ್ಷರಾದ ರಮೇಶ್, ಪಿಜೆಮಾರ್ಗೋ ಕಿಶೋರ್, ಕೆಎಸ್‌ಆರ್‌ಟಿಸಿ ಮುಖಂಡರಾದ ಮನ್ಮಥ, ಮಂಜುನಾಥ್ ಇನ್ನೂ ಮುಂತಾದವರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು