ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ೧,೯೫,೨೪೪ ಮತದಾರರು

KannadaprabhaNewsNetwork |  
Published : Oct 30, 2026, 02:00 AM IST
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎಸ್‌ಐಆರ್ ಅಂತಿಮ ಪಟ್ಟಿ ಪ್ರಕಟ | Kannada Prabha

ಸಾರಾಂಶ

ಎಸ್‌ಐಆರ್ ಪ್ರಕ್ರಿಯೆಯಲ್ಲಿ ೧೦,೫೫೭ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗಿದೆ. ಮರಣ ೬,೧೧೨, ಶಾಶ್ವತ ಸ್ಥಳಾಂತರ ೭,೭೦೫, ಪತ್ತೆಯಾಗದೇ ಇರುವವರು ೫೧೬, ಈಗಾಗಲೇ ನೋಂದಣಿ ೨,೪೧೪ ಸೇರಿ ಒಟ್ಟು ೧೬,೭೪೭ ಮತಗಳನ್ನು ತೆಗೆದುಹಾಕಲಾಗಿದೆ ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಕೊರಟಗೆರೆ (ಪ.ಜಾ) ಮೀಸಲು ವಿಧಾನಸಭಾ ಕ್ಷೇತ್ರದ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಕ್ಷೇತ್ರದಲ್ಲಿ ಒಟ್ಟು ೧,೯೫,೨೪೪ ಮತದಾರರು ಇದ್ದಾರೆ ಎಂದು ಮತದಾರರ ನೊಂದಣಾಧಿಕಾರಿ ಸೋಮಪ್ಪ ಕಡುಕೋಳ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿ, ಎಸ್‌ಐಆರ್ ಪೂರ್ವದಲ್ಲಿ ಕ್ಷೇತ್ರದಲ್ಲಿ ೨,೦೯,೪೯೫ ಮತದಾರರಿದ್ದರು. ಕರಡು ಪಟ್ಟಿಯಲ್ಲಿ ೧,೯೨,೭೪೮ಕ್ಕೆ ಇಳಿಕೆಯಾಗಿದ್ದು, ಅಂತಿಮವಾಗಿ ೧,೯೫,೨೪೪ ಮತದಾರರು ದೃಢೀಕೃತಗೊಂಡಿದ್ದಾರೆ. ಇದರಲ್ಲಿ ಪುರುಷರು ೯೬,೭೧೫, ಮಹಿಳೆಯರು ೯೮,೫೨೩, ತೃತೀಯ ಲಿಂಗಿಗಳು ೬ ಮಂದಿ ಇದ್ದಾರೆ ಎಂದು ಹೇಳಿದರು.

ಕ್ಷೇತ್ರದಲ್ಲಿ ಒಟ್ಟು ೨೫೬ ಮತಗಟ್ಟೆಗಳಿದ್ದು, ಹೊಸದಾಗಿ ೨,೭೮೬ ಮತದಾರರ ಸೇರ್ಪಡೆಯಾಗಿದೆ. ೨೯೦ ಮತದಾರರ ಹೆಸರು ಬಿಡತಕ್ಕವಾಗಿವೆ. ನಿವ್ವಳ ೨,೪೯೬ ಮತದಾರರು ಹೆಚ್ಚಾಗಿದ್ದಾರೆ. ೧೮-೧೯ ವಯಸ್ಸಿನ ೨,೬೩೭ ಯುವ ಮತದಾರರು ಹಾಗೂ ೨,೫೫೨ ವಿಕಲಚೇತನ ಮತದಾರರು ಇದ್ದಾರೆ.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ೧೦,೫೫೭ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಲಾಗಿದೆ. ಮರಣ ೬,೧೧೨, ಶಾಶ್ವತ ಸ್ಥಳಾಂತರ ೭,೭೦೫, ಪತ್ತೆಯಾಗದೇ ಇರುವವರು ೫೧೬, ಈಗಾಗಲೇ ನೋಂದಣಿ ೨,೪೧೪ ಸೇರಿ ಒಟ್ಟು ೧೬,೭೪೭ ಮತಗಳನ್ನು ತೆಗೆದುಹಾಕಲಾಗಿದೆ ಎಂದು ವಿವರಿಸಿದರು.

ಸಭೆಯಲ್ಲಿ ತಹಸೀಲ್ದಾರ್ ಶರತ್‌ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆಶಂಕರ್, ಜೆಡಿಎಸ್ ಅಧ್ಯಕ್ಷ ಕಾಮರಾಜು, ಬಿಜೆಪಿ ಅಧ್ಯಕ್ಷ ರುದ್ರೇಶ್, ಲಕ್ಷ್ಮಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟೇಶ್ ಮೂರ್ತಿ, ಕಾಂಗ್ರೆಸ್‌ನ ರಘುವೀರ್, ಹನುಮಂತರಾಜು ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು