ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಭಾವಚಿತ್ರವುಳ್ಳ ಮತದಾರರ ಮಾಹಿತಿ ಇರುವ ಚೀಟಿ ವಿತರಣೆಗೆ ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಷಗಳ ಕಾರ್ಯಕರ್ತರು ಆಕ್ಷೇಪ ವ್ಯಕ್ತ ಪಡಿಸಿದ ಘಟನೆ ನಗರದಲ್ಲಿ ಶನಿವಾರ ನಡೆಯಿತು.
ವಿಧಾನಸಭಾ ಚುನಾವಣೆ ವೇಳೆ ಗಿಫ್ಟ್ ಕೂಪನ್ ವಿತರಿಸಿದಂತೆ ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲಲು ಕುತಂತ್ರ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು, ತಾವು ಮತದಾರರ ಮಾಹಿತಿಯುಳ್ಳ ಮತಚೀಟಿಗಳನ್ನು ಮಾತ್ರ ವಿತರಿಸುತ್ತಿರುವುದಾಗಿ ವಾದಿಸಿದರು. ಹೀಗೆ ಮತ ಚೀಟಿಗಳನ್ನು ಚುನಾವಣಾ ಆಯೋಗದ ಅನುಮತಿ ಇಲ್ಲದೆ ವಿತರಿಸುವುದು ಅಕ್ಷಮ್ಯ ಎಂದು ಬಿಜೆಪಿ-ಜೆಡಿಎಸ್ ಕಾರ್ಯಕರ್ತರು ಮತ್ತೆ ಆಕ್ಷೇಪ ವ್ಯಕ್ತಪಡಿಸಿದರು. ಕೆಲ ಕಾಲ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ವಾಕ್ಸಮರ ನಡೆಯಿತು. ಬಳಿಕ ಚುನಾವಣಾ ಕರ್ತವ್ಯದಲ್ಲಿದ್ದ ಅಧಿಕಾರಿಯೊಬ್ಬರು ಸ್ಥಳಕ್ಕೆ ಆಗಮಿಸಿ ಮುದ್ರಣ ಯಂತ್ರವನ್ನು ಪರಿಶೀಲಿಸಿ ಅನಮತಿ ಪತ್ರ ಪಡೆಯುವಂತೆ ಸೂಚಿಸಿದರು. ಅನುಮತಿ ಪತ್ರ ತಮ್ಮ ಬಳಿ ಇರುವುದಾಗಿ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು. ಅಲ್ಲಿಗೆ ಸಮಸ್ಯೆ ತಿಳಿಯಾಯಿತು.ಕಾಂಗ್ರೆಸ್ ಕಾರ್ಯಕರ್ತರು ಮತದಾರರ ಮಾಹಿತಿ ಚೀಟಿ ವಿತರಣೆಗೆ ಆಕ್ಷೇಪ ವ್ಯಕ್ತಪಡಿಸಿದ ಮೈತ್ರಿ ಪಕ್ಷಗಳ ಕಾರ್ಯಕರ್ತರು ಉಪಚುನಾವಣಾಧಿಕಾರಿಗಳಿಂದ ಅನುಮತಿ ಪಡೆದಿರುವ ಸಂಗತಿ ತಿಳಿದು ಮೌನವಾದರು. ಅಲ್ಲದೆ, ಚುನಾವಣೆ ಪಾರದರ್ಶಕವಾಗಿ ನಡೆಯಬೇಕು. ಹೀಗಾಗಿ ಅಧಿಕಾರಿಗಳು ಇನ್ನು ಹೆಚ್ಚಿನ ನಿಗಾ ಇಡಬೇಕಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಮತದಾರರಿಗೆ ಗಿಫ್ಟ್‌ಕಾರ್ಡ್ ಕೊಟ್ಟು ವಂಚಿಸಿದ್ದರು. ಇಂತಹ ವಂಚನೆ ಮರುಕಳಿಸಬಾರದು ಎಂದು ಹೇಳಿದರು.ಬಾಕ್ಸ್ ..............
ಮನೆ ಮನೆಗೆ ತೆರಳಿ ಮತದಾನಕ್ಕೆ ಮನವಿ ಮಾಡುವ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಧುನಿಕ ತಂತ್ರಜ್ಞಾನ ಬಳಸಿಕೊಂಡು ಮತದಾರರ ಮಾಹಿತಿಯುಳ್ಳ ಚೀಟಿಗಳನ್ನು ವಿತರಿಸುತ್ತಿದ್ದಾರೆ. ಅಸಲಿಗೆ ಈ ಕೆಲಸವನ್ನು ಚುನಾವಣಾ ಆಯೋಗ ಮಾಡಬೇಕಾಗಿತ್ತು. ರಾಜಕೀಯ ಪಕ್ಷಗಳು ಮಾಡುತ್ತಿವೆ ಎಂದು ಸಾಮಾನ್ಯ ನಾಗರಿಕರು ಪ್ರತಿಕ್ರಿಯಿಸಿದ್ದಾರೆ.
ಕೋಟ್ .........
-ಗುರುಪ್ರಸಾದ್, ಜಿಲ್ಲಾಧ್ಯಕ್ಷ, ಕಾಂಗ್ರೆಸ್ ಯುವ ಘಟಕ, ರಾಮನಗರ
ಹ್ಯಾಂಡ್ ಪ್ರಿಂಟರ್ ಮತ್ತು ಡಿ.ಕೆ.ಸುರೇಶ್ ಭಾವಚಿತ್ರವುಳ್ಳ ಮತಚೀಟಿ.