ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಬಿಎಲ್‌ಎ-೨ ಹಾಗೂ ಪಕ್ಷದ ಕಾರ್ಯಕರ್ತರ ಜವಾಬ್ದಾರಿ
ಯಲಬುರ್ಗಾ: ಪ್ರತಿಯೊಬ್ಬ ಅರ್ಹರು ಮತದಾರ ಪಟ್ಟಿಯಲ್ಲಿ ಉಳಿಯಬೇಕು. ಪಟ್ಟಿಯಿಂದ ಹೊರಗುಳಿದರೆ ಸೌಲಭ್ಯದಿಂದ ವಂಚಿತರಾಗುತ್ತಾರೆ. ನಿಟ್ಟಿನಲ್ಲಿ ಬಿಎಲ್ಎ೨ ಕೆಲಸ ಮಾಡಬೇಕು ಎಂದು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಸುಧೀರ ಕೊರ್ಲಹಳ್ಳಿ ಹೇಳಿದರು.
ತಾಲೂಕಿನ ಬಂಡಿ ಗ್ರಾಮದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಮುಧೋಳ ಜಿಪಂ ಬಳೂಟಗಿ, ಬಂಡಿ ಹಾಗೂ ತುಮ್ಮರಗುದ್ದಿ ಗ್ರಾಪಂಗಳ ಬಿಎಲ್‌ಎ-೨ ಮತ್ತು ಪಕ್ಷದ ಮುಖಂಡರಿಗೆ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗೃತಿ ಹಾಗೂ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.ಯಾವುದೇ ಕಾರಣಕ್ಕೂ ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಬಿಎಲ್‌ಎ-೨ ಹಾಗೂ ಪಕ್ಷದ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಯಾವುದೇ ಅರ್ಹ ಮತದಾರರು ವಂಚಿತರಾಗದಂತೆ ಜಾಗೃತಿಯಿಂದ ಕಾರ್ಯ ನಿರ್ವಹಿಸುವಂತೆ ಕರೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ೧೮ ವರ್ಷ ಮೇಲ್ಪಟ್ಟ ಪ್ರತಿಯೊಂದು ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾನೆ. ಆ ಹಕ್ಕನ್ನು ಎಂದಿಗೂ ಕಳೆದುಕೊಳ್ಳಬಾರದು ಹೀಗಾಗಿ ಎಲಿಮಿನೇಷನ್ ಅರ್ಜಿ ಸರಿಯಾಗಿ ಭರ್ತಿ ಮಾಡಬೇಕು. ಬಿಎಲ್ಒಗಳಿಗೆ ಸರಿಯಾಗಿ ಮಾಹಿತಿ ನೀಡಿ ಹಕ್ಕು ಉಳಿಸಿಕೊಳ್ಳಬೇಕಿದೆ. ಸಣ್ಣ ಪುಟ್ಟ ಸಮಸ್ಯೆ ಬಂದಾಗ ತಕ್ಷಣವೇ ಮೇಲಾಧಿಕಾರಿಗಳಿಗೆ ಗಮನಕ್ಕೆ ತರಬೇಕು. ಮತದಾನ ಹಕ್ಕು ಪವಿತ್ರವಾಗಿದ್ದು ಹೀಗಾಗಿ ಎಲ್ಲರ ಹಕ್ಕು ಉಳಿಯಬೇಕು ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆರಿಬಸಪ್ಪ ನಿಡಗುಂದಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭ ಜಿಪಂ ಮಾಜಿ ಸದಸ್ಯ ಎ.ಜಿ.ಭಾವಿಮನಿ, ತಾಪಂ ಮಾಜಿ ಸದಸ್ಯ ದೊಡ್ಡಬಸಪ್ಪ ಭಾವಿಮನಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಈಶ್ವರ ಅಟಮಾಳಗಿ, ಶೇಖಪ್ಪ ವಣಗೇರಿ, ಕಳಕಗೌಡ ಪಾಟೀಲ, ರಿಜ್ವಾನ್ ದಮ್ಮೂರು, ಶರಣಗೌಡ ಬಸಾಪೂರು, ಭೀಮಣ್ಣ ಜರಕುಂಟಿ, ಚಂದಾಲಿಂಗ ಹಿರೇಮನಿ, ಸಿದ್ರಾಮಗೌಡ ಪಾಟೀಲ ಸೇರಿದಂತೆ ಬಿಎಲ್‌ಎ-2ಗಳು ಇದ್ದರು.