ಕನ್ನಡಪ್ರಭ ವಾರ್ತೆ ಹಲಗೂರು
ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಪೂರ್ಣ ಸಾವಯವ ಕೃಷಿಕರ ಸಂಘ ಹಾಗೂ ರೋಟರಿ ಸಂಸ್ಥೆ ಸಹಯೋಗದಲ್ಲಿ ತಲಾ ಎರಡು ಸಸಿಗಳನ್ನು ವಿತರಿಸಿ ಮಾತನಾಡಿದರು.
ಮಕ್ಕಳಲ್ಲಿ ಪರಿಸರ ಮೇಲೆ ಪ್ರೀತಿ ಬೆಳೆದು ಗಿಡಗಳನ್ನು ಬೆಳೆಸುವುದರಿಂದ ಅವರಲ್ಲಿ ಒಂದು ಭಾವನಾತ್ಮಕ ಜವಾಬ್ದಾರಿ ಉಂಟಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಮನೆ ಅಂಗಳದಲ್ಲಿ ನಾವು ನೀಡಿರುವ ತೆಂಗಿನ ಸಸಿಗಳನ್ನು ನೆಟ್ಟು ಜೋಪಾನ ಮಾಡುವುದರಿಂದ ಭವಿಷ್ಯದಲ್ಲಿ ವ್ಯಾಸಂಗಕ್ಕೆ ಸಹಕಾರಿ ಜೊತೆಗೆ ನಿಮ್ಮ ಯಶಸ್ಸಿಗೂ ಅನುಕೂಲವಾಗುತ್ತದೆ ಎಂದರು.ರೋಟರಿ ಕ್ಲಬ್ ಹಲವು ಸಮಾಜ ಸೇವೆಗಳನ್ನು ಮಾಡುತ್ತಿದೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಇಲ್ಲಿಯೂ ಒಂದು ಕ್ಲಬ್ ನ ಪ್ರಾರಂಭಿಸಿ ನಿಮ್ಮ ಶಿಕ್ಷಕಿಯವರ ಮಾರ್ಗದರ್ಶನದಲ್ಲಿ ಸಮಾಜ ಸೇವೆ ಮಾಡಬಹುದು ಎಂದು ಹೇಳಿದರು.
ಸಂಸ್ಥೆ ಮತ್ತೊರ್ವ ಸದಸ್ಯ ರವಿಕುಮಾರ್ ಮಾತನಾಡಿ, ಕರ್ನಾಟಕದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಇಂತಹ ಶಿಕ್ಷಕರು ಇದ್ದರೆ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ವ್ಯಾಸಂಗ ಪಡೆದು ಒಳ್ಳೆಯ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಶಿಕ್ಷಕಿ ಶಕುಂತಲಾ, ರೋಟರಿ ವಲಯ ರಾಜ್ಯಪಾಲ ಬಿ.ಎಂ.ನಟರಾಜು, ಕೃಷಿ ಸಮಿತಿ ನಿರ್ದೇಶಕ ಅಕ್ಷಯ್ ಮಲ್ಲಪ್ಪ, ಸಮುದಾಯ ನಿರ್ದೇಶಕ ಕೃಷ್ಣಮೂರ್ತಿ, ರೋಟರಿ ಅಧ್ಯಕ್ಷೆ ಸುಪ್ರಿಯಾ, ಸಾವಯವ ಕೃಷಿ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್, ಕಪನೀಗೌಡ, ನಿವೃತ್ತ ಮುಖ್ಯ ಶಿಕ್ಷಕ ಎ.ಎಸ್.ದೇವರಾಜು, ಎಸ್ಡಿಎಂಸಿ ಅಧ್ಯಕ್ಷ ನಂದೀಶ್, ಸದಸ್ಯರಾದ ಪುಟ್ಟರಾಜು, ಶಿವಕುಮಾರ್ ಸೇರಿ ಶಾಲೆ ಎಲ್ಲಾ ಶಿಕ್ಷಕರು, ಶಿಕ್ಷಕಿಯರು ಉಪಸ್ಥಿತರಿದ್ದರು.