ಅನಧಿಕೃತ ಫ್ಲೆಕ್ಸ್, ಡಿಜೆ ಗೆ ನಿಷೇಧ

KannadaprabhaNewsNetwork |  
Published : Aug 26, 2026, 01:15 AM IST
ಪೋಟೋ ಇದೆ : 25 ಕೆಜಿಎಲ್ 2 : ಪೊಲೀಸ್ ವರಿಷ್ಠಾಧಿಕಾರಿಗೆ ಮುಸ್ಲಿಂ ಬಾಂಧವರಿಂದ ಅಭಿನಂದನೆ  | Kannada Prabha

ಸಾರಾಂಶ

ತುಮಕೂರು ಜಿಲ್ಲೆಯಲ್ಲಿ ಶಾಂತಿಯುತ ಈದ್ ಮಿಲಾದ್ ಆಚರಣೆಗಾಗಿ ಹಲವಾರು ಬಾರಿ ಸಮುದಾಯದ ಮುಖಂಡರ ಜೊತೆ ಸಭೆಗಳನ್ನು ನಡೆಸಿದ್ದು ಸುಗಮ ಆಚರಣೆಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಅನಧಿಕೃತ ಫ್ಲೆಕ್ಸ್ ಹಾಗೂ ಡಿಜೆ ಗೆನಿಷೇಧಿಸಲಾಗಿದೆ ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ .

ಕನ್ನಡ ಪ್ರಭ ವಾರ್ತೆ ಕುಣಿಗಲ್

ತುಮಕೂರು ಜಿಲ್ಲೆಯಲ್ಲಿ ಶಾಂತಿಯುತ ಈದ್ ಮಿಲಾದ್ ಆಚರಣೆಗಾಗಿ ಹಲವಾರು ಬಾರಿ ಸಮುದಾಯದ ಮುಖಂಡರ ಜೊತೆ ಸಭೆಗಳನ್ನು ನಡೆಸಿದ್ದು ಸುಗಮ ಆಚರಣೆಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಅನಧಿಕೃತ ಫ್ಲೆಕ್ಸ್ ಹಾಗೂ ಡಿಜೆ ಗೆನಿಷೇಧಿಸಲಾಗಿದೆ ಎಂದು ತುಮಕೂರು ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ತಿಳಿಸಿದ್ದಾರೆ . ಕುಣಿಗಲ್ ಪಟ್ಟಣದ ಕೋಟೆ, ಗುಜಾರಿ ಮೊಹಲ್ಲ, ಸೇರಿದಂತೆ ವಿವಿಧ ಭಾಗಗಳಲ್ಲಿ ನೂರಾರು ಪೊಲೀಸರೊಂದಿಗೆ ಪಥಸಂಚಲನ ನಡೆಸಿ ನಂತರ ಮಾತನಾಡಿದರು. ಸುಗಮ ಹಬ್ಬದ ಆಚರಣೆಗಾಗಿ ಹೆಚ್ಚುವರಿ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗವಹಿಸುವ ನಿರೀಕ್ಷೆ ಇದ್ದು ಪೊಲೀಸ್ ಇಲಾಖೆ ಹೈ ಅಲರ್ಟ್ ಸೂಚನೆ ನೀಡಲಾಗಿದೆ. ಈಗಾಗಲೇ ಹಬ್ಬ ಆಚರಣೆ ಸಂಬಂಧ ಕೋಮಿನ ಮುಖಂಡರೊಂದಿಗೆ ಹಲವಾರು ಸಭೆಗಳನ್ನು ನಡೆಸಿದ್ದೇವೆ. ಹಬ್ಬ ಆಚರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ತುಮಕೂರು ಜಿಲ್ಲೆಯಲ್ಲಿ 12 ಗಂಟೆ ಸಮಯದಲ್ಲಿ ಪ್ರಾರಂಭಗೊಂಡ ಬೃಹತ್ ಮೆರವಣಿಗೆ ರಾತ್ರಿ 8 ರವೆರೆಗೆ ನಡೆಯುತ್ತದೆ. ಇದಕ್ಕಾಗಿ ಸೂಕ್ತ ಭದ್ರತೆ ಮಾಡಲಾಗಿದ್ದು ಶಿರಾ ಪಟ್ಟಣದಲ್ಲೂ ಕೂಡ ಕಟ್ಟುನಿಟ್ಟಿನ ಆದೇಶವಿದ್ದು ಜಿಲ್ಲೆಯಲ್ಲಿ 250 ವಿವಿಧ ಸ್ಥಳಗಳಲ್ಲಿ ಮೆರವಣಿಗೆ ನಡೆಯಲಿದ್ದು ಅದರಲ್ಲಿ 40 ಅತಿ ಸೂಕ್ಷ್ಮ ಮೆರವಣಿಗೆಗಳೆಂದು ತೀರ್ಮಾನಿಸಿ ಆ ಭಾಗದ ಹಲವಾರು ಹಿಂದಿನ ಪ್ರಖರಣ ಘಟನೆಗಳು ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಿ ಸೂಕ್ತ ಬಂದೂಬಸ್ತ್ ಮಾಡಲಾಗಿದೆ ಎಂದರು. ಹಬ್ಬದ ಹಿಂದಿನ ದಿನ ರಾತ್ರಿ ಪೊಲೀಸ್ ಬಂದೋ ಬಸ್ತ್ ಚುರುಕುಗೊಳಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಹೇಳಿಕೆ ಪೋಸ್ಟರ್ ಬಹ ಕಾಮೆಂಟ್ಸ್ ಇವುಗಳ ಬಗ್ಗೆ ಪೊಲೀಸರು ನಿಗಾ ವಹಿಸುತ್ತಿದ್ದು ಇಂತಹ ವ್ಯಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ. ಮೆರವಣಿಗೆ ಸಂದರ್ಭದಲ್ಲಿ ಭಾಗವಹಿಸಿದ ಪೊಲೀಸ್ ವರಿಷ್ಠಾಧಿಕಾರಿಗೆ ಮುಸ್ಲಿಂ ಮುಖಂಡರು ಹೂಮಳೆ ಸುರಿದು ಹಾರಹಾಕಿ ಶಾಲು ಹೊದಿಸಿ ಅಭಿನಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎರಡು ವರ್ಷದಿಂದ ಬಿಲ್‌ ಆಗಿಲ್ಲ: ಅಸಮಧಾನ
ಸಂಘಗಳ ಆರ್ಥಿಕ ಪ್ರಗತಿಗೆ ಸದಸ್ಯರು ಸಹಕರಿಸಿ