ಬಸವಣ್ಣವರ ತತ್ವದಲ್ಲಿ ಲಿಂಗ, ಜಾತಿ, ಸಮಾನತೆ ಭೇದ ಇಲ್ಲ

KannadaprabhaNewsNetwork |  
Published : May 01, 2025, 12:46 AM IST
2 | Kannada Prabha

ಸಾರಾಂಶ

ಬಸವಣ್ಣನವರು ನಾವೆಲ್ಲರೂ ಸಹ ನಿನಗೆ ಬೇಕು ಅಷ್ಟೇ ಅಲ್ಲದೆ ಅವರ ಆದರ್ಶಗಳನ್ನು ಜೀವಂತವಾಗಿಸಿ ನಾವು ಕೂಡ ಅದನ್ನು ಅಳವಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಮೈಸೂರು12ನೇ ಶತಮಾನದಲ್ಲಿ ಮಾನವಕುಲಕ್ಕೆ ಮಾರ್ಗದರ್ಶಕರಾಗಿ ಇಂದು ಕೂಡ ಪ್ರಸ್ತುತವಾಗಿದೆ ಎಂದರೆ ಒಂದು ದೂರ ದೃಷ್ಟಿಯ ಆಲೋಚನೆಗಳು ಮತ್ತು ಸಮಾಜವು ಯಾವ ರೀತಿ ಕಟ್ಟಬೇಕು ಎನ್ನುವ ಪರಿಕಲ್ಪನೆಯನ್ನು ಹೊಂದುವಂತಹ ಬಸವಣ್ಣನವರ ತತ್ವದಲ್ಲಿ ಲಿಂಗಭೇದ ಇಲ್ಲ ಜಾತಿಭೇದ ಇಲ್ಲ ಸಮಾನತೆ ಭೇದ ಇಲ್ಲ ಎಲ್ಲರನ್ನು ಸಮಾನವಾಗಿ ಕಾಣುವ ಒಂದು ಪ್ರವೃತ್ತಿ ಬಸವಣ್ಣವರಲ್ಲಿ ಇತ್ತು ಎಂದು ಶಾಸಕ ತನ್ವೀರ್ ಸೇಠ್ ಹೇಳಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಸವಣ್ಣನವರು ನಾವೆಲ್ಲರೂ ಸಹ ನಿನಗೆ ಬೇಕು ಅಷ್ಟೇ ಅಲ್ಲದೆ ಅವರ ಆದರ್ಶಗಳನ್ನು ಜೀವಂತವಾಗಿಸಿ ನಾವು ಕೂಡ ಅದನ್ನು ಅಳವಡಿಸಿಕೊಳ್ಳಬೇಕು. ಇಂತಹ ಮಹಾನ್ ವ್ಯಕ್ತಿಗಳ ಇರುವಂತಹ ಸಮಾಜದಲ್ಲಿ ಯಾವ ಜಾತಿ ಯಾವ ಅಂತಸ್ತು ಎನ್ನುವ ಭೇದವಿಲ್ಲದೆ ಅವರು ಜೀವಿಸಿದರು ಎಂದು ತಿಳಿಸಿದರು.ದಾಸರು ಮತ್ತು ಶರಣರು ನಮಗೆ ಜೀವನದಲ್ಲಿ ಒಳ್ಳೆಯ ಉಪಯುಕ್ತವಾದ ಮಾತುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಂತಹ ಸಂದರ್ಭದಲ್ಲಿ ಬಹುಶಃ ಎಲ್ಲೂ ಇಂತಹ ಒಂದು ವ್ಯವಸ್ಥೆಗೆ ನಾವು ಯಾವ ಜಾತಿ ಅಂತಸ್ತು ಎನ್ನುವ ಒಂದು ಇಕ್ಕಟ್ಟಿನಲ್ಲಿರುವಂತಹದ್ದು ಬರುವುದಿಲ್ಲ ಎಂದು ಹೇಳಿದರು.ಬಸವಣ್ಣನವರು ಹೇಳಿರುವಂತಹ ವಚನಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು. ಕೇವಲ ಇವ ಯಾರವಾ ಇವ ಯಾರವ ಇವ ನಮ್ಮವ ನಮ್ಮವ ಎನ್ನುವ ವಚನಗಳಿಗೆ ಸೀಮಿತವಾಗದೆ, ಎಲ್ಲರನ್ನೂ ಅಪ್ಪಿಕೊಂಡು ಎಲ್ಲರನ್ನೂ ಜೊತೆಗೂಡಿಸಿ ಮೇಲು-ಕೀಳು ಎಂಬುವುದು ಇದ್ದೇ ಇರುತ್ತದೆ. ಅದು ಸಹಜವಾಗಿ ಹಾಗೆ ಆಗುತ್ತದೆ ಕ್ಷಮೆ ಕೊಡುವಂತಹ ವ್ಯಕ್ತಿ ನಾವೆಲ್ಲಾ ಆಗಬೇಕು ಎಂದು ಅವರು ತಿಳಿಸಿದರು.ಶಾಸಕ ಟಿ.ಎಸ್. ಶ್ರೀವತ್ಸ ಮಾತನಾಡಿ ಬಸವಣ್ಣನವರು ಮಾಡಿದಂತಹ ಅನೇಕ ಹೋರಾಟಗಳು, ಶ್ರಮಗಳು ಕಾರಣಕ್ಕೆ ಲಿಂಗ ಸಮಾಜ ಬಹಳ ಹಿಂದೆಯೇ ಸಮಾಜದಲ್ಲಿ ಇದ್ದ ಶೋಷಣೆಯ ವಿರುದ್ಧ ಧ್ವನಿ ಎತ್ತಿ ಈಗಾಗಲೇ ಅವರೇ ಹೇಳಿರುವಂತೆ ಸ್ವಂತ ಸಹೋದರಿಗೆ ಲಿಂಗಧಾರಣೆಯನ್ನು ಮಾಡುವುದರ ಮೂಲಕ ಸಮಾಜದಲ್ಲಿ ಸಮಾನತೆ ತರಬೇಕು ಎಂಬ ನಿಟ್ಟಿನಲ್ಲಿ ಪ್ರಯತ್ನ ಸಾಕಷ್ಟು ಇದೆ ಎಂದು ಹೇಳಿದರು. ಇವತ್ತು ವಚನಗಳು ಎಂದರೆ ಸಮಾಜದಲ್ಲಿ ಅಂಕುಡೊಂಕನ್ನು ತುಂಬಾ ಸರಳ ಭಾಷೆಯಲ್ಲಿ ನಮ್ಮೆಲ್ಲರಿಗೂ ಅರ್ಥವಾಗುವಂತ ರೀತಿಯಲ್ಲಿದ್ದು, ಬಸವಣ್ಣನವರ ವಚನಗಳು ನಮಗೆ ಅನೇಕ ಸಂದರ್ಭದಲ್ಲಿ ಪ್ರೇರಣೆ ನೀಡುತ್ತದೆ ಎಂದರು. ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ ಮಾತನಾಡಿ, ಬಸವೇಶ್ವರ ಈ ರಾಷ್ಟ್ರಕ್ಕೆ ಅಲ್ಲ ಇಡೀ ಪ್ರಪಂಚಕ್ಕೆ ಒಬ್ಬ ಮಹಾನ್ ಚೇತನ ಮತ್ತು ಮಾನವೀಯ ಮೌಲ್ಯಗಳು ಸಾಮಾಜಿಕ ಸಮಾನತೆ ಸರ್ವ ಬಾಳು ಸಮಪಾಲು ಇಂದು ಹೇಳಿರುವಂತೆ ಅದನ್ನು ಸುಮಾರು 800 ವರ್ಷಗಳ ಹಿಂದೆ ಸ್ವತಂತ್ರ ಬರುವುದಕ್ಕೂ ಮುಂಚೆ ಈ ರಾಷ್ಟ್ರದಲ್ಲಿ ಇದ್ದಂತಹ ಜಾತಿ ಪದ್ಧತಿಯನ್ನು ಅದನ್ನು ತೊಲಗಿಸಲು ಪಣತೊಟ್ಟು ಅದನ್ನು ಕಾರ್ಯಗತ ಮಾಡಿದ್ದಾಗಿ ಹೇಳಿದರು.ಎಡಿಸಿ ಡಾ.ಪಿ. ಶಿವರಾಜು ಮಾತನಾಡಿ ಬಸವಣ್ಣ ಅವರನ್ನು ಜಗಜ್ಯೋತಿ ಎಂದು ಕರೆಯುತ್ತೇವೆ. ಅವರ ಬಗ್ಗೆ ಇವತ್ತು ನಡೆಯುವಂತಹ ಜಯಂತಿಯಿಂದ ಹಿಡಿದು ಮುಂದೆ ಬರುವಂತಹ ಜಯಂತಿವರೆಗೆ ಅವರ ಬಗ್ಗೆ ಸಭೆಗಳನ್ನು ಹೆಚ್ಚು ಹೆಚ್ಚು ಮಾಡಬೇಕು, ಉಪನ್ಯಾಸ ಏರ್ಪಡಿಸುವುದರ ಜೊತೆಗೆ ಮುನ್ನೂರ ಅರವತ್ತು ದಿನವು ಆಚರಿಸಬೇಕು ಎಂದರು.ಅವರ ಆದರ್ಶಗಳು ಚಿಂತನೆಗಳು ಅಪಾರವಾದದ್ದು, ಸಮುದ್ರದಲ್ಲಿ ಒಂದು ಕೊಡ ನೀರು ತೆಗೆದರು ಅದು ಕಲಿಯಾಗುವುದಿಲ್ಲ. ಅವರು ದೇವರಂತೆ ಎಂದು ಹೇಳಿದರು.ನಮ್ಮ ಜೀವನದಲ್ಲಿ ಒಂದೇ ಒಂದು ಸಾಧನೆ ಮಾಡುತ್ತಾ ಹೋಗುತ್ತೇವೆ. ಆದರೇ ಬಸವಣ್ಣ ನವರದು ಸಮತೋಲನದ ವ್ಯಕ್ತಿತ್ವ, ಇವರು ರಾಜಕೀಯ ಕ್ಷೇತ್ರದಲ್ಲಿಯೂ ಸಹ ಇದ್ದರೂ, ಉತ್ತಮ ಆಡಳಿತಗಾರರಾಗಿ ಇದ್ದರೂ, ಸಾಮಾಜಿಕ ಸುಧಾರಣೆಯನ್ನು ತಂದರು. ಸರಿಸಮಾನತೆಯ ಮೂಲಕ ಜಾತಿ ಪದ್ಧತಿ ನಿರ್ಮೂಲನೆ ಮಾಡುವ ಮೂಲಕ ಹಾಗೂ ಆಧ್ಯಾತ್ಮಿಕತೆಯಲ್ಲೂ ಸಹ ಅವರು ಇದುದ್ದಾಗಿ ಅವರು ತಿಳಿಸಿದರು.ಸಾಹಿತ್ಯ ಕ್ಷೇತ್ರದಲ್ಲಿ ಅವರ ವಚನ ಸಾಹಿತ್ಯಗಳು, ಧಾರ್ಮಿಕ ಗ್ರಂಥಗಳ ಸಾರಗಳು ಹೂವಿನ ರೀತಿಯಲ್ಲಿ ಇರುತ್ತದೆ. ಹೂಗಳ ಮಕರಂದವನ್ನು ನಾವು ತೆಗೆದಾಗ ಹೇಗೆ ಸಾರ ಸಿಗುತ್ತದೆಯೋ ಹಾಗೆಯೇ ಸರಳ ಭಾಷೆಯಲ್ಲಿ ನಮಗೆ ತಿಳಿಸಿಕೊಟ್ಟವರು ಬಸವಣ್ಣನವರು. ವಚನಗಳು ಎಂದರೆ ಸಂಸ್ಕೃತಿಯ ಸಾರ, ಜೀವನದ ಸಾರಾ, ಒಬ್ಬ ಮನುಷ್ಯ ಜೀವನದಲ್ಲಿ ಮಾನವೀಯತೆ ಅಳವಡಿಸಿಕೊಂಡು ಹೇಗೆ ಬದುಕಬಹುದು ಎಂಬುದನ್ನು ತೋರಿಸುವುದೇ ವಚನ ಎಂದು ಅವರು ಹೇಳಿದರು.ಸಾಹಿತಿ ಮತ್ತು ಸಂಶೋಧಕ ಡಾ. ರಾಜಶೇಖರ ಜಮದಂಡಿ ಅವರು ಮುಖ್ಯ ಭಾಷಣಮಾಡಿ, ಬಸವಣ್ಣ ಎಂದರೆ ನೆನಪಾಗುವುದು ಬಸವಣ್ಣನವರ ಚಳುವಳಿ, ಬಸವಣ್ಣನವರ ಕ್ರಾಂತಿ, ಸಾಮಾಜಿಕ ಸುಧಾರಣೆ ಇವೆಲ್ಲವೂ ನಮಗೆ ನೆನಪು ಬರುತ್ತದೆ ಎಂದು ಹೇಳಿದರು.ಆ ದಿನದಲ್ಲಿ ನಮ್ಮ ಭಾರತ ಪ್ರಾಚೀನ ಕಾಲದಿಂದಲೂ ಸ್ನೇಹ, ಸೌಹಾರ್ದತೆ, ಆತ್ಮೀಯತೆಯ ಕಂಪನ್ನು ಸೇರಿಸಿ ಬಹುತ್ವದ ಏಕತೆಯೇ ನೆಲೆಗೊಂಡಿಸಿ ಕೊಟ್ಟಿರುವಂತಹದ್ದು, ಈ ನೆಲವನ್ನು ಅನೇಕ ಸಂತರು, ಸೂಫಿಗಳು, ದಾಶಿಯರು, ಎಲ್ಲರೂ ತಮ್ಮ ತಮ್ಮ ಆಧ್ಯಾತ್ಮಿಕ ತತ್ವದರ್ಷ ಚಿಂತನೆಗಳಲ್ಲಿ ಈ ಸಮಾಜಕ್ಕೆ ಪಣ ತೊಟ್ಟವರು ಇಂದು ತಿಳಿಸಿಕೊಟ್ಟರು. ಮನುಷ್ಯರಲ್ಲಿ ಪಶುತ್ವ ಗುಣಗಳನ್ನು ಅಳಿಸಿ ಮಾನವೀಯ ಗುಣ ಬರಬೇಕು ಎಂಬುದೇ ಅವರ ಧೋರಣೆ ಆಗಿತ್ತು ಈ ಹಿನ್ನೆಲೆಯಲ್ಲಿ ಬಸವಣ್ಣನವರು ಕೂಡ ಒಬ್ಬರು ಎಂದರು. ಅಕ್ಷಯ ತೃತೀಯ ದಿನದಂದು ಏನನ್ನೇ ಮಾಡಲಿ ಅದು ಅಕ್ಷಯವಾಗಲಿದೆ ಎಂಬ ನಂಬಿಕೆ ಇದೆ. ಆದ್ದರಿಂದ ಉಪಕಾರ ಮಾಡುವುದು, ಸಂಪತ್ತು ಗಳಿಸುವುದು, ಪೂಜೆ-ಪುನಸ್ಕಾರಗಳನ್ನು ಮಾಡುವುದಕ್ಕೆ ಅಕ್ಷಯ ತೃತೀಯ ದಿನದಂದು ವಿಶೇಷ ಮಹತ್ವವಿದೆ. ನಾಡಿನಾದ್ಯಂತ ಬಸವ ಜಯಂತಿ ಹಾಗೂ ಅಕ್ಷಯ ತೃತೀಯವನ್ನು ಆಚರಿಸಲಾಗುವುದು ಮತ್ತೊಂದು ವಿಶೇಷದ ಸಂಗತಿ ಎಂದು ಅವರು ಹೇಳಿದರು.ಬಸವಣ್ಣನವರು ಒಬ್ಬ ಮಹಾನ್ ಕವಿ, ಸಮಾಜ ಸುಧಾರಕ ಮತ್ತು ತತ್ವಜ್ಞಾನಿಯಾಗಿ ಹೊರಹೊಮ್ಮಿದರು. ಕಾವ್ಯದ ಮೂಲಕ ಅವರು ಸಾಮಾಜಿಕ ಜಾಗೃತಿಯನ್ನು ಹರಡಲು ಪ್ರಾರಂಭಿಸಿದರು. ಲಿಂಗ ಅಥವಾ ಸಾಮಾಜಿಕ ಪೂರ್ವಾಗ್ರಹವನ್ನು ತಿರಸ್ಕರಿಸಲಾಯಿತು ಮತ್ತು ಇಷ್ಟಲಿಂಗವನ್ನು ಅವರು ಪರಿಚಯಿಸಿದರು. ಬಿಜ್ಜಳನ ರಾಜ್ಯದ ಮಮಂತ್ರಿಯಾಗಿದ್ದ ಬಸವಣ್ಣನವರು ಅನುಭವ ಮಂಟಪವನ್ನು ಪ್ರಾರಂಭಿಸಿದರು. ಇದು ನಂತರ ಎಲ್ಲಾ ವರ್ಗದ ಜನರು ಜೀವನದ ಆಧ್ಯಾತ್ಮಿಕ ವಿಷಯಗಳನ್ನು ಮುಕ್ತವಾಗಿ ಚರ್ಚಿಸಲು ಸಾಮಾನ್ಯ ಕೇಂದ್ರವಾಯಿತು. ಬಸವೇಶ್ವರರ ಸಾಕ್ಷರತಾ ಕೃತಿಗಳು ವಚನ ಸಾಹಿತ್ಯವನ್ನು ಒಳಗೊಂಡಿವೆ ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ಮುಖಂಡರಾದ ಮೂಗೂರು ನಂಜುಂಡಸ್ವಾಮಿ, ಮ.ಗು. ಸದಾನಂದಯ್ಯ, ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್, ಸರ್ಕಾರಿ ನೌಕರರ ಜಿಲ್ಲಾ ಅಧ್ಯಕ್ಷ ಸಿ.ಬಿ. ಅರುಣ್ ಕುಮಾರ್, ಬಸವ ಜಯಂತ್ಯುತ್ಸವದ ಸಮಿತಿಯ ಬಿ.ಜಿ. ನಾಗರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ