- ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ ಕಾರ್ಯಕ್ರಮ: ಸಂತೋಷ ಮಾಹಿತಿ - - -
ದಾವಣಗೆರೆ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದಿಂದ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಸೇವಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಡಿ.13ರಂದು ನಗರದ ಕುಂದುವಾಡ ರಸ್ತೆಯ ಬಂಟರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಎಂ.ಎಸ್. ಸಂತೋಷಕುಮಾರ ಮಾಗಾನಹಳ್ಳಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ಒಕ್ಕೂಟದ ಅಧ್ಯಕ್ಷ ಸಂತೋಷಕುಮಾರ ಮಾಗಾನಹಳ್ಳಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸುವರು. ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಎಂಎಲ್‌ಸಿ ಅಬ್ದುಲ್ ಜಬ್ಬಾರ್, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲರಾವ್, ಡಿಡಿಪಿಐ ಕೆ.ಎಂ.ಕೊಟ್ರೇಶ, ಹಿರಿಯ ಸಾಹಿತಿ ಚಿಕ್ಕಮಗಳೂರಿನ ಚಟ್ನಹಳ್ಳಿ ಮಹೇಶ ಭಾಗವಹಿಸುವರು. 2025-26ನೇ ಸಾಲಿನಲ್ಲಿ ಒಕ್ಕೂಟದ 167 ಖಾಸಗಿ ಶಾಲೆಗಳ ಶಿಕ್ಷಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎ.ಎಸ್.ಪ್ರಸನ್ನಕುಮಾರ, ಖಜಾಂಚಿ ಎಚ್.ಜೆ. ಮೈನುದ್ದೀನ್, ಒಕ್ಕೂಟದ 21 ಕಾರ್ಯಕಾರಿ ಮಂಡಳಿ ನಿರ್ದೇಶಕರು ಹಾಗೂ ಮೂವರು ಸಂಚಾಲಕರು ಇಡೀ ಕಾರ್ಯಕ್ರಮದ ನೇತೃತ್ವ ವಹಿಸಿದ್ದಾರೆ. ಶಿಕ್ಷಕರಲ್ಲಿ ಬೋಧನಾ ಉತ್ಸಾಹ ಹೆಚ್ಚಿಸುವ, ಇತರೆ ಶಿಕ್ಷಕ-ಶಿಕ್ಷಕಿಯರಿಗೂ ಪ್ರೇರಣೆ ನೀಡುವ ನಿಟ್ಟಿನಲ್ಲಿ ಒಕ್ಕೂಟದ ಕಾರ್ಯಕ್ರಮ ಎಲ್ಲರಿಗೂ ಸ್ಫೂರ್ತಿ ನೀಡಲಿದೆ ಎಂದು ಸಂತೋಷಕುಮಾರ ವಿವರಿಸಿದರು.
ಆಡಳಿತ ಮಂಡಳಿಗಳ ಒಕ್ಕೂಟ ಖಜಾಂಚಿ ಎಚ್.ಜೆ. ಮೈನುದ್ದೀನ್, ಪ್ರಧಾನ ಕಾರ್ಯದರ್ಶಿ ಎ.ಎಸ್. ಪ್ರಸನ್ನಕುಮಾರ, ಸಹ ಕಾರ್ಯದರ್ಶಿ, ಜಿಪಂ ಮಾಜಿ ಅಧ್ಯಕ್ಷೆ ಸಹನಾ ರವಿ, ಉಪಾಧ್ಯಕ್ಷೆ ಬಿ.ಅನುಸೂಯ, ಬಿ.ಅನುಸೂಯ, ಸುಭಾನ್ ಸಾಬ್ ಇತರರು ಇದ್ದರು.- - -
-12ಕೆಡಿವಿಜಿ2.ಜೆಪಿಜಿ:ಒಕ್ಕೂಟ ಅಧ್ಯಕ್ಷ ಎಂ.ಎಸ್. ಸಂತೋಷಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.