ಕಾಂಗ್ರೆಸ್‌ನ್ನು ನಿರ್ನಾಮ ಮಾಡಲು ಅಸಾಧ್ಯ: ಹರೀಶ್ ಕುಮಾರ್‌

KannadaprabhaNewsNetwork |  
Published : Dec 29, 2023, 01:30 AM IST
ಧ್ವಜಾರೋಹಣ ನೆರವೇರಿಸಿದ ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌  | Kannada Prabha

ಸಾರಾಂಶ

ಮಂಗಳೂರಿನ ಕದ್ರಿಯಲ್ಲಿರುವ ಕಾಂಗ್ರೆಸ್‌ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಸಂಸ್ಥಾಪನಾ ದಿನಾಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ನಗರದ ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನೆರವೇರಿತು.

ಧ್ವಜಾರೋಹಣ ನೆರವೇರಿಸಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯರಾದ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್, ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಬಾಪೂಜಿ ಅವರೊಂದಿಗೆ ಸೇರಿಕೊಂಡು ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂಬ ಸಂಸ್ಥೆ ಪ್ರಾರಂಭವಾಯಿತು. ಭಾರತದ ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷವಾದ್ದರಿಂದ ಸೂರ್ಯ- ಚಂದ್ರರು ಇರುವವರೆಗೂ ಕಾಂಗ್ರೆಸ್ ಪಕ್ಷ ಶಾಶ್ವತವಾಗಿರುತ್ತದೆ, ಯಾರಿಂದಲೂ ಅದನ್ನು ನಿರ್ನಾಮ ಮಾಡಲು ಅಸಾಧ್ಯ ಎಂದು ಹರೀಶ್ ಕುಮಾರ್ ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವರಾದ ರಮಾನಾಥ್ ರೈ, ಸ್ವಾತಂತ್ರ್ಯಕ್ಕೆ ಬಹಳಷ್ಟು ಹೋರಾಟ ಮಾಡಿ ಇತಿಹಾಸ ನಿರ್ಮಿಸಿದ ಪಕ್ಷ ಕಾಂಗ್ರೆಸ್, ಆದರೆ ಈಗ ಇತಿಹಾಸವನ್ನು ತಿರುಚಲಾಗುತ್ತಿದೆ. ಜನರಿಗೆ ತಪ್ಪು ಮಾಹಿತಿ ನೀಡಿ ಜನರನ್ನು ತಪ್ಪು ಭಾವನೆಗೆ ತಲುಪಿಸುತ್ತಿದ್ದಾರೆ. ಇದಕ್ಕೆ ಯಾರೂ ಕಿವಿಗೊಡಬಾರದು, ನೈಜ ಇತಿಹಾಸವನ್ನು ಅರಿಯಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಂಖಡರಾದ ಪಿ.ವಿ ಮೋಹನ್, ಶಕುಂತಳಾ ಶೆಟ್ಟಿ ಆರ್. ಪದ್ಮರಾಜ್, ಕೃಪಾ ಅಮರ್ ಆಳ್ವ, ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಹರಿನಾಥ್.ಕೆ, ಶಾಹುಲ್ ಹಮಿದ್, ಶುಭೋದಯ ಆಳ್ವ, ಕವಿತಾ ಸನಿಲ್, ನೀರಜ್ ಚಂದ್ರಪಾಲ್, ಪ್ರವೀಣ್ ಚಂದ್ರ ಆಳ್ವ, ಶಬೀರ್.ಎಸ್., ಬಿ.ಎಂ ಅಬ್ಬಾಸ್ ಅಲಿ, ಸಂಶುದ್ದೀನ್ ಕುದ್ರೋಳಿ, ಶಮೀರ್ ಪಜೀರ್, ಪೂರ್ಣೇಶ್ ಭಂಡಾರಿ, ಸುಹಾನ್ ಆಳ್ವ, ಅಶೋಕ್ ಡಿ.ಕೆ, ಝೀನತ್‌ ಸಂಶುದ್ದೀನ್ ಬಂದರ್, ಯೊಗೀಶ್ ಕುಮಾರ್, ವಿಶ್ವನಾಥ್ ಬಜಾಲ್, ಶಶಿಕಲಾ ಪದ್ಮನಾಭ, ನಾಗೇಶ್ ತೊಕ್ಕೊಟ್ಟು, ಝೊಬೈರ್ ತಲಮೊಗರು ಮತ್ತಿತರರಿದ್ದರು.

ಸೇವಾದಳದ ಜಿಲ್ಲಾ ಮುಖ್ಯಸ್ಥ ಜೋಕಿಂ ಡಿ ಸೋಜಾ ಸ್ವಾಗತಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿಗಾಗಿ ಮಕ್ಕಳಿಂದ ಪತ್ರ: ₹490 ಕೋಟಿ ಕೊಟ್ಟ ಸಿಎಂ!
ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ : ಬಿಯರ್‌, ವೈನ್‌ ಅಗ್ಗ?