ಪ್ರಭುಲಿಂಗೇಶ್ವರ ಸೌಹಾರ್ದಕ್ಕೆ ಜಿಲ್ಲಾಮಟ್ಟದ ಪ್ರಶಸ್ತಿ

KannadaprabhaNewsNetwork |  
Published : Dec 24, 2024, 12:46 AM IST
ಜಮಖಂಡಿ ಶಾಸಕರ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯ ಚಿತ್ರ. | Kannada Prabha

ಸಾರಾಂಶ

ಪ್ರಭುಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ದೊರೆತಿದೆ ಎಂದು ಶಾಸಕ ಜಗದೀಶ್ ಗುಡಗುಂಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಪ್ರಭುಲಿಂಗೇಶ್ವರ ಸೌಹಾರ್ದ ಸಹಕಾರಿ ಸಂಘಕ್ಕೆ ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಉತ್ತಮ ಸಹಕಾರಿ ಸಂಘ ಪ್ರಶಸ್ತಿ ದೊರೆತಿದೆ ಎಂದು ಶಾಸಕ ಜಗದೀಶ್ ಗುಡಗುಂಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2003ರಲ್ಲಿ ಪ್ರಾರಂಭಗೊಂಡ ಸಹಕಾರಿ ಸಂಘ 2018ರ ಹೊತ್ತಿಗೆ 12 ಶಾಖೆಗಳನ್ನು ವಿಸ್ತರಿಸಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಣ್ಣ ಕೈಗಾರಿಕೆಗಳು ಗುಡಿ ಕೈಗಾರಿಕೆಗಳು ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯಗಳನ್ನು ಕಲ್ಪಿಸುತ್ತಾ ಸಹಕಾರ ಕ್ಷೇತ್ರದಲ್ಲಿ ದಾಪು-ಗಾಲು ಇಡುತ್ತಿದೆ ಎಂದರು.

₹10 ಕೋಟಿ ಶೇರು ಬಂಡವಾಳ 33,763 ಸದಸ್ಯರನ್ನು ಹೊಂದಿದೆ. 13ಕ್ಕೂ ಹೆಚ್ಚು ರೀತಿಯ ಸಾಲಗಳನ್ನು ಸಂಘದಿಂದ ಒದಗಿಸಲಾಗುತ್ತಿದೆ. 80 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ₹430 ಕೋಟಿ ಠೇವಣಿ ಹೊಂದಿದೆ. ₹ 400 ಕೋಟಿಯಷ್ಟು ಸಾಲವನ್ನು ನೀಡಲಾಗಿದೆ. ಮೈಕ್ರೋ ಫೈನಾನ್ಸ್ ರೀತಿ ತ್ವರಿತ ಸಾಲ ನೀಡಲಾಗುತ್ತದೆ. ಇದರಿಂದ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದು ವಿವರಿಸಿದರು.

ಸಹಕಾರ ಸಂಘಕ್ಕೆ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಹಾಗೂ ಇಥೆನಾಲ್ ಉತ್ಪಾದನಾ ಘಟಕ ಬೆನ್ನೆಲುಬಾಗಿದ್ದು ಸಂಘದ ಬೆಳವಣಿಗೆಗೆ ಸಹಕಾರಿಯಾಗಿದೆ. ವಿಶೇಷ ಸೇವೆಗಳನ್ನು ಕೂಡ ಸಹಕಾರ ಸಂಘದಿಂದ ನೀಡಲಾಗುತ್ತಿದ್ದು ಆರ್‌ಡಿಎಐನಿಂದ ವಿಮಾ ಪರವಾನಗಿ ಪಡೆಯಲಾಗಿದೆ. ಜೀವವಿಮೆ ವಾಹನ ವಿಮೆ ಅಪಘಾತ ವಿಮೆ ಆರೋಗ್ಯ ವಿಮೆಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಅದರಂತೆ ಪ್ಯಾನ್ ಕಾರ್ಡ್ ಮಾಡಿಕೊಡುವುದು, ರೈಲ್ವೆ ಟಿಕೆಟ್ ಬುಕಿಂಗ್, ಮೈಕ್ರೋ ಎಟಿಎಂ ವ್ಯವಸ್ಥೆ ಪಹಣಿ ಪತ್ರಿಕೆಗಳನ್ನು ಪಾಸ್‌ಪೋರ್ಟ್‌ಗಳನ್ನು ನೀಡುವ ಪರವಾನಗಿಗಳನ್ನು ಸಂಘ ಹೊಂದಿದೆ ಎಂದು ಹೇಳಿದರು.

ಈ ವೇಳೆ ನಿರ್ದೇಶಕರಾದ ನೇಮಣ್ಣ ಜಮಖಂಡಿ, ಚೆನ್ನಪ್ಪ ಮಾಳವಾಡ, ವಿದ್ಯಾವತಿ ಮಳೆಮಠ, ಪಾರ್ವತಿ ಗುಡಗುಂಟಿ, ರಾಜೇಂದ್ರ ಕುಮಾರ್ ಗುಡಗುಂಟಿ, ನಾಗಪ್ಪ ಸನದಿ, ದೇವಲ ದೇಸಾಯಿ, ಮಲ್ಲಿಕಾರ್ಜುನ್ ಕೊಡ್ಲಿವಾಡಮಠ, ಬಸಯ್ಯ ಮಹಾಲಿಂಗಪುರ್, ಮಲ್ಲಪ್ಪ ಕೋಟಿ, ಹಣಮಂತ ದಾಸರ, ಮಹಾಂತೇಶ ಹಿಟ್ಟಿನ ಮಠ, ಪ್ರಕಾಶ್ ಕಾಲ್ ತಿಪ್ಪಿ, ವಿರೂಪಾಕ್ಷಯ್ಯ ಗುಡಗುಂಟಿ, ಪ್ರಭು ಅಕ್ಕಿವಾಟ, ನಿಂಗಪ್ಪ ತಳವಾರ್, ಬ್ಯಾಂಕಿನ ಜನರಲ್ ಮ್ಯಾನೇಜರ್ ಮಹೇಶ್ ಮಠಪತಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಣಿ ಚನ್ನಮ್ಮ ನಾಟ್ಯ ಮಂದಿರ ಶೀಘ್ರ ಪ್ರಾರಂಭಿಸಿ
ಗುರಿ ಸಾಧಿಸಲು ಕಠಿಣ ಏಕಾಗ್ರತೆ ಅಗತ್ಯ