- ಜಯದೇವ ವೃತ್ತ ಬಳಿ ಶಿವಯೋಗಿ ಮಂದಿರ ಹಿಂಭಾಗದ ಸಭಾಂಗಣದಲ್ಲಿ ಕಾರ್ಯಕ್ರಮ
- ಹೈಯರ್ ಪ್ರೈಮರಿ ಮಕ್ಕಳಿಗೆ ಜಿಲ್ಲಾಮಟ್ಟಕ್ಕೆ ಸೀಮಿತ ಸ್ಪರ್ಧೆ
- ಹೈಸ್ಕೂಲ್ ಮಕ್ಕಳು ಜಿಲ್ಲಾಮಟ್ಟದಲ್ಲಿ ಗೆದ್ದರೆ ರಾಜ್ಯಮಟ್ಟಕ್ಕೆ- - -
ವಿದ್ಯಾರ್ಥಿಗಳಲ್ಲಿ ಪರಿಸರ, ವನ್ಯಜೀವಿ ಮತ್ತು ವನ್ಯ ಸಂಪತ್ತಿನ ಬಗ್ಗೆ ಅರಿವು ಮೂಡಿಸುವ ಸದುದ್ದೇಶದಿಂದ ಕನ್ನಡಪ್ರಭದಿಂದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಜ.18ರಂದು ಭಾನುವಾರ ನಗರದ ಶ್ರೀ ಜಯದೇವ ವೃತ್ತದ ಬಳಿಯ ಶ್ರೀ ಶಿವಯೋಗಿ ಮಂದಿರದ ಹಿಂಭಾಗದ ನೂತನ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.
ವನ್ಯಜೀವಿ ಮತ್ತು ವನ್ಯ ಸಂಪತ್ತು ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆ ಭಾನುವಾರ ಬೆಳಗ್ಗೆ 9.30ರಿಂದ 11.30 ಗಂಟೆವರೆಗೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯದಲ್ಲಿ ಜನಪ್ರತಿನಿಧಿಗಳು, ವಿವಿಧ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಗಣ್ಯರು ಬಹುಮಾನ ವಿತರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಸೇವ್ ವೈಲ್ಡ್ ಲೈಫ್ ಅಭಿಯಾನದಡಿ ರಾಜ್ಯಮಟ್ಟದಲ್ಲಿ ಕರ್ನಾಟಕ ಅರಣ್ಯ ಇಲಾಖೆ ಸಹಕಾರದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಹಾಗೂ ದಾವಣಗೆರೆ ಜಿಲ್ಲಾಮಟ್ಟದ ಸ್ಪರ್ಧೆಯು ಖಾಸಗಿ ಶಾಲಾ-ಕಾಲೇಜು ಆಡಳಿತ ಮಂಡಳಿಗಳು, ಸರ್ಕಾರಿ ಶಾಲೆಗಳು, ಸಾಶಿಇ, ಗಣ್ಯರ ಸಹಕಾರದಲ್ಲಿ ನಡೆಯಲಿದೆ. ಸ್ಪರ್ಧೆಯ ವಿಷಯವು ವನ್ಯ ಸಂಪತ್ತು, ವನ್ಯಜೀವಿಗಳ ಬಗ್ಗೆ ಅರಿವು, ಜಾಗೃತಿ ಮೂಡಿಸುವುದಾಗಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ ಕನ್ನಡಪ್ರಭ ಹಿರಿಯ ಪ್ರಧಾನ ವರದಿಗಾರ ನಾಗರಾಜ ಎಸ್. ಬಡದಾಳ್ (ಮೊ-98440-24995), ಹಿರಿಯ ಜಾಹೀರಾತು ಪ್ರತಿನಿಧಿ ಟಿ.ಆರ್. ಸುಧೀಂದ್ರ (98449-13226), ಪ್ರಸಾರಾಂಗ ವಿಭಾಗದ ಶಿವರಾಜ (63661-59404) ಅವರನ್ನು ಸಂಪರ್ಕಿಸುವಂತೆ ಕನ್ನಡಪ್ರಭ ಕೋರಿದೆ.
-13ಕೆಡಿವಿಜಿ11.ಜೆಪಿಜಿ: ದಾವಣಗೆರೆ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯ ಬ್ಯಾನರ್.