ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ನಂದಿ ರಂಗಮಂದಿರದ ಕಸಾಪ ಕಚೇರಿಯಲ್ಲಿ ಏರ್ಪಡಿಸಿದ್ದ 70 ನೇ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕನ್ನಡ ಭಾಷೆ, ಸಾಹಿತ್ಯ ಸಂಸ್ಕೃತಿಗೆ ಸುಮಾರು 2,000 ವರ್ಷಗಳ ಇತಿಹಾಸವಿದೆ. ವ್ಯಕ್ತಿ ಮತ್ತು ನಾಡಿನ ಉನ್ನತಿಗೆ ಸಾಹಿತ್ಯ ಪರಂಪರೆಯು ದಾರಿದೀಪವಾಗಿದೆ ಎಂದರು.
ಶ್ರೀಮಂತ ಕನ್ನಡ ಸಾಹಿತ್ಯಶತ ಶತಮಾನಗಳ ಹಿಂದೆಯೇ ಕವಿಗಳು, ಲೇಖಕರು, ಅನುಭಾವಿಗಳು ಮತ್ತು ಹೋರಾಟಗಾರರು ಕನ್ನಡ ಭಾಷೆ ಮತ್ತು ಸಾಹಿತ್ಯವನ್ನು ಉನ್ನತ ಮಟ್ಟದಲ್ಲಿ ಕಟ್ಟಿರುತ್ತಾರೆ. ಬೆರಳೆಣಿಕೆಯಷ್ಟು ಅಕ್ಷರಸ್ಥರಿದ್ದ ಕಾಲದಲ್ಲಿ ಭಕ್ತಿ ಪಂಥದವರು, ಬಸವಾದಿ ಶಿವಶರಣರು, ಕೀರ್ತನೆಕಾರರು, ದಾಸರು, ಮಹಾನ್ ಕವಿಗಳು,ನೆಲದ ಅಸ್ಮಿತೆಯನ್ನ ಕಲೆಯಾಗಿ ಪ್ರದರ್ಶಿಸಿದ ಜನಪದೀಯರು ಅತ್ಯಂತ ಸೃಜನಶೀಲಾ ಹಾಗೂ ಮೌಲಿಕ ಸಾಹಿತ್ಯವನ್ನು ಕೊಟ್ಟಿದ್ದಾರೆಂದರು,
ಮೈಸೂರು ಅರಸರು ಹಾಗೂ ದಿವಾನರುಗಳು ಶಿಕ್ಷಣ, ಸಾಹಿತ್ಯ ,ಸಂಸ್ಕೃತಿ ಕೃಷಿ,ಮತ್ತು ತಂತ್ರಜ್ಞಾನಗಳ ಬಗ್ಗೆ ನೀಡಿರುವ ಕೊಡುಗೆಗಳನ್ನು ಯಾರು ಮರೆಯಲಾಗದು. ಕನ್ನಡ ಭಾಷೆ,ಸಾಹಿತ್ಯ ಸಂಸ್ಕೃತಿ ನಿರ್ಮಾಣಕ್ಕಾಗಿ ಶಾಲಾ ಕಾಲೇಜುಗಳು, ವಿದ್ಯಾರ್ಥಿ ನಿಲಯಗಳು , ರಾತ್ರಿ ಶಾಲೆಗಳು ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿರುತ್ತಾರೆ. ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ರ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರು ದೂರ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೊಳಿಸಿ ನಾಡಿನ ಮುನ್ನಡೆಗೆ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಬಿ.ವಿ.ಕೃಷ್ಣ ಮತ್ತು ಹಳೆಯ ಕನ್ನಡ ಚಿತ್ರಗೀತೆಗಳ ಗಾಯಕ ಮುನೀರ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಧ್ವಜಾರೋಹಣ ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡಜಿಲ್ಲಾ ಹಾಗೂ ತಾಲೂಕು ಸಮಿತಿಯ ಸದಸ್ಯರಾದ ಚೆನ್ನ ಮಲ್ಲಿಕಾರ್ಜುನಯ್ಯ, ಎಸ್.ಎನ್.ಅಮೃತ್ ಕುಮಾರ್ , ಕೆ.ಎಂ.ರೆಡ್ಡಪ್ಪ,ಸರ್ದಾರ್ ಚಾಂದ್ ಪಾಷಾ, ಮಂಚನ ಬಲೆ ಶ್ರೀನಿವಾಸ್, ಪಾಮು ಚಲಪತಿ ಗೌಡ, ಡಿ.ಎಂ.ಶ್ರೀ ರಾಮ್, ಮಹಾದೇವ್, ನಗರಸಭೆ ಸದಸ್ಯೆ ಅಣ್ಣಮ್ಮ ,ಎಲ್ ಐಸಿ ನರಸಿಂಹ , ಪ್ರೌಢಶಾಲಾ ಅಧ್ಯಾಪಕರಾದ ಅರುಣ, ಕೆ ಆರ್ ಶಶಿಧರ್ , ಮಂಜುನಾಥ್ ಮತ್ತು ವಿದ್ಯಾರ್ಥಿಗಳು ಇದ್ದರು.