ರೇಷ್ಮೆನಗರಿಯಲ್ಲಿ ಅದ್ಧೂರಿ ರಾಮೋತ್ಸವ: ಶಾಸಕ ಇಕ್ಬಾಲ್ ಹುಸೇನ್

KannadaprabhaNewsNetwork |  
Published : Nov 03, 2025, 01:15 AM IST
2ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೇಷ್ಮೆ ನಗರಿಯಲ್ಲಿ ರಾಮೋತ್ಸವ 2025-26 ಅನ್ನು ಆಚರಣೆ ಸಂಬಂಧ ಭಾನುವಾರ ನಡೆದ ಪೂರ್ವಭಾವಿ ಸಭೆಯನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು. | Kannada Prabha

ಸಾರಾಂಶ

ಮೊದಲ ಬಾರಿ ರಾಮೋತ್ಸವ ಪ್ರಾರಂಭಿಸುತ್ತಿರುವುದರಿಂದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲ ಜಾತಿ ವರ್ಗದವರು, ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ರಾಮನಗರವನವಾಸದ ಸಂದರ್ಭದಲ್ಲಿ ಸೀತಾ ಮಾತೆಯೊಂದಿಗೆ ಶ್ರೀ ರಾಮ ನೆಲೆಸಿದ್ದ ಐತಿಹ್ಯ ಹೊಂದಿರುವ ರಾಮನಗರದಲ್ಲಿ ನವೆಂಬರ್ - ಡಿಸೆಂಬರ್ ತಿಂಗಳೊಳಗೆ ರಾಮೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಮನವಿ ಮಾಡಿದರು.ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೇಷ್ಮೆ ನಗರಿಯಲ್ಲಿ ರಾಮೋತ್ಸವ 2025-26 ಅನ್ನು ಆಚರಣೆ ಸಂಬಂಧ ಭಾನುವಾರ ನಡೆದ ಪೂರ್ವಭಾವಿ ಸಭೆ ಉದ್ಘಾಟಿಸಿದ ಅವರು, ಮೊದಲ ಬಾರಿ ರಾಮೋತ್ಸವ ಪ್ರಾರಂಭಿಸುತ್ತಿರುವುದರಿಂದ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಈ ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲ ಜಾತಿ ವರ್ಗದವರು, ಸಂಘ ಸಂಸ್ಥೆಗಳು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು.ಕಳೆದ 13 ವರ್ಷಗಳಿಂದ ಕನಕಪುರದಲ್ಲಿ ಕನಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಅದೇ ರೀತಿ ಮಾಗಡಿಯಲ್ಲಿ ಕೆಂಪೇಗೌಡ ಉತ್ಸವ, ಚನ್ನಪಟ್ಟಣದಲ್ಲಿ ಬೊಂಬೆ ಉತ್ಸವ ಆಚರಣೆಗೆ ಸಿದ್ಧತೆಗಳು ನಡೆದಿವೆ. ಅದೇ ರೀತಿ ರಾಮನಗರದಲ್ಲಿ ರಾಮೋತ್ಸವವನ್ನು 20ಕ್ಕೂ ಹೆಚ್ಚು ದಿನಗಳ ಕಾಲ ಭಕ್ತಿ ಪೂರಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.ರಾಮೋತ್ಸವದ ಪ್ರಯುಕ್ತ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಪ್ರಬಂಧ ಸ್ಪರ್ಧೆ, ಯುವಕ - ಯುವತಿಯರಿಗೆ ಕ್ರಿಕೆಟ್ , ಕಬಡ್ಡಿ, ವಾಲಿಬಾಲ್ ಇತರೆ ಕ್ರೀಡೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಉಡುಗೊರೆ ನೀಡಲಾಗುವುದು. ಎಸ್ಸೆಸ್ಸೆಲ್ಸಿ - ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಗ್ರಾಮಗಳಲ್ಲಿ ದಾನ ಧರ್ಮ ಮಾಡಿದವರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.

ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು ಮಾತನಾಡಿ, ಶಾಸಕ ಇಕ್ಬಾಲ್ ಹುಸೇನ್ ರವರು ಮೊದಲಿನಿಂದಲು ರಾಮೋತ್ಸವ ಆಚರಣೆ ಮಾಡಬೇಕೆಂದು ಹೇಳುತ್ತಲೇ ಬಂದಿದ್ದರು. ಈಗ ಆ ಕಾಲ ಕೂಡಿ ಬಂದಿದೆ. ಐತಿಹಾಸಿಕವಾಗಿ ದಾಖಲೆಯಾಗುವಂತೆ ರಾಮೋತ್ಸವ ಆಚರಣೆ ಮಾಡಬೇಕು. ಇದಕ್ಕಾಗಿ ಎಲ್ಲರು ಸಂಪೂರ್ಣ ಬೆಂಬಲ ನೀಡುವಂತೆ ಕೋರಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್ ಮಾತನಾಡಿ, ಶ್ರಿರಾಮ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಗಳು ಎಂದೂ ವಿಫಲವಾಗಿಲ್ಲ. ಹಾಗಾಗಿ ಶ್ರೀ ರಾಮನ ಹೆಸರಿನಲ್ಲಿ ಮೊದಲ ಬಾರಿ ಆಯೋಜಿಸುತ್ತಿರುವ ರಾಮೋತ್ಸವ ಸಂಭ್ರಮದಲ್ಲಿ ಸರ್ವ ಧರ್ಮಗಳ ಸಮನ್ವಯತೆ ಸಾಧಿಸುವಂತಾಗಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಪ್ರತಿವರ್ಷ ಕನಕಪುರದಲ್ಲಿ ನಡೆಸುವ ಕನಕೋತ್ಸವ ಸಮಾರಂಭ ಬಹಳ ದೊಡ್ಡ ಸಂಘಟನೆಯ ಶ್ರಮ ಇರುತ್ತದೆ. ಹಾಗಾಗಿ ರಾಮನಗರದಲ್ಲಿ ನಡೆಸಲು ಉದ್ದೇಶಿಸಿರುವ ಶ್ರೀ ರಾಮೋತ್ಸವ ಕಾರ್ಯಕ್ರಮ ಯಶಸ್ವಿ ಮಾಡಲು ನಾವೆಲ್ಲರೂ ಸಹಕಾರ ಕೊಡುತ್ತೇವೆ ಎಂದರು.

ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಬಮೂಲ್ ನಿರ್ದೇಶಕ ಹರೀಶ್ ಕುಮಾರ್, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ವಿ.ಎಚ್.ರಾಜು, ಹೆಚ್.ಎನ್.ಅಶೋಕ್, ಪ್ರಾಧಿಕಾರದ ಮಾಜಿ ಅಧ್ಯಕ್ಷ‌ ಸಿಎನ್ ಆರ್ ವೆಂಕಟೇಶ್, ಮುಖಂಡರಾದ ಜಯಣ್ಣ, ಅಮ್ಜದ್ ಸಾಹುಕಾರ್, ಕೀರಣಗೆರೆ ಜಗದೀಶ್, ಭುಜಂಗಯ್ಯ ರಾಮಕೃಷ್ಣ ,ಮೋಹನ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು....ಕೋಟ್ ....

ಬೆಂಗಳೂರು ದಕ್ಷಿಣ ಜಿಲ್ಲೆಯ ಮುಕುಟದಂತಿರುವ ರಾಮದೇವರ ಬೆಟ್ಟದಲ್ಲಿ ಭಕ್ತರ ಅನುಕೂಲಕ್ಕಾಗಿ ರಸ್ತೆ ಅಭಿವೃದ್ಧಿ, ಶೌಚಾಲಯ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ಶಾಸಕ ಇಕ್ಬಾಲ್ ಹುಸೇನ್ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಶಾಸಕರ ಸ್ವಂತ ಖರ್ಚಿನಲ್ಲಿ ರೈಲಿಂಗ್ಸ್ ಹಾಕಿಸಿ ಭಕ್ತರು ಬೆಟ್ಟಕ್ಕೆ ಹತ್ತಿ ಹೋಗಲು ಅನುಕೂಲ ಕಲ್ಪಿಸಿದ್ದಾರೆ.- ಎ.ಬಿ.ಚೇತನ್ ಕುಮಾರ್, ಅಧ್ಯಕ್ಷರು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ....ಕೋಟ್ ..

ಶಾಸಕ ಇಕ್ಬಾಲ್ ಹುಸೇನ್ ರವರು ರಾಮದೇವರ ಬೆಟ್ಟಕ್ಕೆ ಬಾಲ ರಾಮನ ವಿಗ್ರಹ ನೀಡುವಂತೆ ಮನವಿ ಮಾಡಿದ್ದರು. ಇದು ಅವರೊಬ್ಬ ರಾಮನ ಅಪ್ಪಟ ಭಕ್ತ ಎಂಬುದನ್ನು ನಿರೂಪಿಸುತ್ತದೆ. ಪ್ರತಿ ಊರಿನಲ್ಲಿ ಪೂಜೆ ಪುನಸ್ಕಾರ ನೆರವೇರಿಸುತ್ತಾರೆ. ಇದೀಗ ರಾಮೋತ್ಸವ ಆಚರಣೆಗೆ ಮುಂದಾಗಿದ್ದು, ಅವರು ನಿಜವಾಗಿಯೂ ಹಿಂದೂ - ಮುಸ್ಲಿಂರ ಸಾಮರಸ್ಯದ ಕೊಂಡಿ ಆಗಿದ್ದಾರೆ.- ಕೀರಣಗೆರೆ ಜಗದೀಶ್ , ಮುಖಂಡರು.------------------------------------2ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರೇಷ್ಮೆ ನಗರಿಯಲ್ಲಿ ರಾಮೋತ್ಸವ 2025-26 ಅನ್ನು ಆಚರಣೆ ಸಂಬಂಧ ಭಾನುವಾರ ನಡೆದ ಪೂರ್ವಭಾವಿ ಸಭೆಯನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.-----------------------------------

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ