ವಿಶೇಷ ವರದಿ
ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಲೆಕ್ಕ ಪರಿಶೋಧನಾ ಇಲಾಖೆಯ ಲೆಕ್ಕ ಅಧೀಕ್ಷಕ ಎಂ.ಎ. ಆಸೀಫ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಅಧಿಕಾರಿ ಆರ್.ಎಚ್. ಲೋಕೇಶ್ ನಡುವೆ ಹಣಾಹಣಿಯಿದೆ.
ಖಜಾಂಚಿ ಸ್ಥಾನಕ್ಕೆ ಜಿಲ್ಲಾಸ್ಪತ್ರೆಯ ನರ್ಸಿಂಗ್ ವಿಭಾಗದ ಹನುಮಂತರಾಯ ಹಾಗೂ ತಾಲೂಕು ಪಂಚಾಯಿತಿಯ ಮುಖ್ಯ ಅಕೌಂಟೆಂಟ್ ಶರಣಪ್ಪ ಮತ್ತು ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಕಂದಾಯ ಇಲಾಖೆಯ ಎಂ. ಸುರೇಶ್ ಕುಮಾರ್ ಹಾಗೂ ಡಿಡಿಪಿಐ ಕಚೇರಿಯ ಎಫ್‌ಡಿಎ ಮಹಾಂತೇಶ್ ಅವರ ನಡುವೆ ಜಿದ್ದಾಜಿದ್ದಿಯಿದೆ.ಇದೇ ಮೊದಲ ಬಾರಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆದಿದ್ದು, ರಾಜಕೀಯ ಪಕ್ಷಗಳಿಗೂ ಮೀರಿಸುವಂತೆ ರಾಜಕೀಯ ಅಬ್ಬರ ನಡೆದಿದೆ. ಒಟ್ಟು 68 ಜನ ಮತದಾನ ಹಕ್ಕು ಹೊಂದಿದ್ದಾರೆ.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸ್ಥಾನದ ಜಿದ್ದಾಜಿದ್ದಿ ಗೋವಾ ಟ್ರಿಪ್, ನಿತ್ಯ ಗುಂಡು ಪಾರ್ಟಿಗೆ ಆಸ್ಪದ ಒದಗಿಸಿದೆ. ಕೆಲವರಿಗೆ ನಗದು ಹಣವನ್ನು ನೀಡಿ ತಮ್ಮ ಪರ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ನಿರ್ದೇಶಕರನ್ನು ಹಿಡಿದಿಟ್ಟುಕೊಳ್ಳಲು ಸಂಘದ ಒಂದು ಬಣ 30 ಜನರನ್ನು ಗೋವಾ ಟ್ರಿಪ್ ಕಳಿಸಿಕೊಟ್ಟಿದ್ದು, ತಂಡ ಮಂಗಳವಾರ ಬಳ್ಳಾರಿಗೆ ಬಂದಿಳಿದಿದೆ. ಇನ್ನು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ದಿನದಿಂದಲೇ ಗುಂಡುಪಾರ್ಟಿ ನೀಡಲಾಗುತ್ತಿದೆ ಎಂದು ನೌಕರರೇ ಹೇಳುತ್ತಿದ್ದಾರೆ.
ಬೆಳಗ್ಗೆ 9 ಗಂಟೆಯಿಂದ ಸಂಜೆ 4ರ ವರೆಗೆ ಸಂಘದ ಕಚೇರಿಯಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದ್ದು, ಸಂಜೆ 6ರ ವೇಳೆಗೆ ಫಲಿತಾಂಶ ಹೊರಬೀಳಲಿದೆ.