ಜಿಲ್ಲೆಗೆ ಮೂರು ರಾಜ್ಯಮಟ್ಟದ ಶಿಕ್ಷಕ ಗೌರವ

KannadaprabhaNewsNetwork |  
Published : Sep 05, 2026, 04:00 AM IST
 ಪ್ರಭಾವತಿ ಬಾಳಪ್ಪ ಹಾಲೆನ್ನವರ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. | Kannada Prabha

ಸಾರಾಂಶ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ ರಾಜ್ಯಮಟ್ಟದ ಪ್ರಶಸ್ತಿ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯು ಅಭೂತಪೂರ್ವ ಸಾಧನೆ ಮಾಡಿದೆ. ಪ್ರಮುಖ ಉತ್ತಮ ಶಾಲೆ ಪ್ರಶಸ್ತಿ ಸೇರಿದಂತೆ ಇಬ್ಬರು ಶಿಕ್ಷಕರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿರುವ ರಾಜ್ಯಮಟ್ಟದ ಪ್ರಶಸ್ತಿ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯು ಅಭೂತಪೂರ್ವ ಸಾಧನೆ ಮಾಡಿದೆ. ಪ್ರಮುಖ ಉತ್ತಮ ಶಾಲೆ ಪ್ರಶಸ್ತಿ ಸೇರಿದಂತೆ ಇಬ್ಬರು ಶಿಕ್ಷಕರು ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸವದತ್ತಿ ತಾಲೂಕಿನ ಕರಿಕಟ್ಟಿ ಸರ್ಕಾರಿ ಪ್ರೌಢಶಾಲೆಯು ತನ್ನ ಶೈಕ್ಷಣಿಕ ಗುಣಮಟ್ಟ ಹಾಗೂ ಮೂಲಸೌಕರ್ಯಗಳ ನಿರ್ವಹಣೆಗಾಗಿ ಇಲಾಖೆಯ ಉತ್ತಮ ಶಾಲಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.ಇನ್ನು ಪ್ರಾಥಮಿಕ ಶಾಲಾ ವಿಭಾಗದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಮೂಡಲಗಿ ಶೈಕ್ಷಣಿಕ ವಲಯದ ಹುಲ್ಲೂರ ಕ್ರಾಸ್‌ನ ಕೆ.ಎಚ್.ಪಿ.ಎಸ್. ಶಾಲೆಯ ಶಿಕ್ಷಕ ಬಸಪ್ಪ ಪರಪ್ಪ ಪಾಟೀಲ ಅವರಿಗೆ ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ ಬೆಳಗಾವಿ ಗ್ರಾಮಾಂತರ ವಲಯದ ಜಾಫರವಾಡಿ ಕಡೋಲಿಯ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪ್ರಭಾವತಿ ಬಾಳಪ್ಪ ಹಾಲೆನ್ನವರ ಅವರಿಗೆ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ನಿರಂತರ ಸೇವೆ ಮತ್ತು ಬೋಧನಾ ವೈವಿಧ್ಯತೆಯನ್ನು ಗುರುತಿಸಿ ನೀಡಲಾಗಿರುವ ಈ ಗೌರವಕ್ಕೆ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಹಾಗೂ ಶಿಕ್ಷಣ ಪ್ರೇಮಿಗಳು ಹರ್ಷ ವ್ಯಕ್ತಪಡಿಸಿ ಶುಭ ಹಾರೈಸಿದ್ದಾರೆ.2026ರ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 50 ಶಿಕ್ಷಕರ ಆಯ್ಕೆ:

2026ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ಕಿರಿಯ/ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಒಟ್ಟು 50 ಶಿಕ್ಷಕರು ಆಯ್ಕೆಯಾಗಿದ್ದಾರೆ. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ 34 ಶಿಕ್ಷಕರು, ಪ್ರೌಢಶಾಲಾ ವಿಭಾಗದಲ್ಲಿ 16 ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕಿರಿಯ / ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು:

1. ರಾಜು ಬಸವಣ್ಣೆಪ್ಪ ಉಡಕೇರಿ (ಸಹ ಶಿಕ್ಷಕರು), ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಬೆನಚಿನಮರಡಿ, ತಾ: ಬೈಲಹೊಂಗಲ

2. ಶಾಹೀನ್‌ಪರವೀನ ಬಾಬು ಜಮಾದಾರ (ಸ.ಶಿ), ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಮಲ್ಲಹೊಳಿ, ತಾ: ಬೆಳಗಾವಿ ಗ್ರಾಮೀಣ

3. ಅಙ್ಕತುಲ್ಲಾ ಮ ಉಸ್ತಾದ (ಸ.ಶಿ), ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಕಲ್ಲೇಶ್ವರ ನಗರ, ತಾ: ಖಾನಾಪೂರ

4. ಪ್ರಕಾಶ ತಂಗೋಜಿ (ಸ.ಶಿ), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹಿರೂರ ತೋಟ, ತಾ: ಸವದತ್ತಿ

5. ನಜೀರಹೃದ ಪಟಾಯಿತ್ (ಸ.ಶಿ), ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ವೈಭವನಗರ, ಬೆಳಗಾವಿ ನಗರ

6. ರಮೇಶ ಹೊಸಕೋಟ (ಸ.ಶಿ), ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ತಿಮ್ಮಾಪೂರ ಎಸ್.ಎ, ತಾ: ರಾಮದುರ್ಗ

7. ಮಾಲೂತಾಯಿ ಬಸಲಿಂಗಗೋಳ (ಸ.ಶಿ), ಕರ್ನಾಟಕ ಪಬ್ಲಿಕ್ ಸ್ಕೂಲ್ ಕಣಬರಗಿ, ತಾ: ಬೆಳಗಾವಿ

8. ದಯಾನಂದ ಹುದ್ದಾರ (ಸ.ಶಿ), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ (ಕೆ.ಪಿ.ಎಸ್) ಸಾಲಾಪೂರ, ರಾಮದುರ್ಗ

9. ಸಿ ಎಸ್ ಸಿದ್ದಸಮುದ್ರ (ಸ.ಶಿ), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅಸುಂಡಿ, ತಾ: ಸವದತ್ತಿ

10. ಸುರೇಶ ಸೋಮಪ್ಪ ಗಡಾದ (ಪ್ರಗು), ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಚಿಕ್ಕದಿನಕೊಪ್ಪ, ತಾ: ಖಾನಾಪೂರ

11. ನಬೀಸಾಬ ಇ ಖುದ್ದುನವರ (ಸ.ಶಿ), ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಬೋದನಾಪುರ, ತಾ: ಕಿತ್ತೂರು

12. ಅಜ್ಜಪ್ಪ ಬಾಬು ಅಂಗಡಿ (ಸ.ಶಿ), ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ನಂ 2, ಬೈಲಹೊಂಗಲ

13. ಬಸವರಾಜ ಪಾಟೀಲ (ಸ.ಶಿ), ಕೆ.ಪಿ.ಎಸ್ ಶಾಲೆ ಮಾಸ್ತಮರ್ಡಿ, ಬೆಳಗಾವಿ ಗ್ರಾಮೀಣ

14. ಎನ್ ಆಯ್ ನಿಪ್ಪಾಣಿಕರ (ಮು.ಶಿ), ಸರ್ಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ ಹಿರೇಬಾಗೇವಾಡಿ, ಬೆಳಗಾವಿ ಗ್ರಾಮೀಣ

15. ರಾಜೇಂದ್ರ ಭಂಡಾರಿ (ಸ.ಶಿ), ಸರ್ಕಾರಿ ಕನ್ನಡ ಹಿ. ಪ್ರಾ ಹೆಣ್ಣುಮಕ್ಕಳ ಶಾಲೆ ನಂ : 5 ವಡಗಾಂವಿ, ಬೆಳಗಾವಿ ನಗರ

16. ಶಿಲ್ಪಾ ತ್ರಂಬಕನಾಥ ಕುಬುಸದ (ಸ.ಶಿ), ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಅಮರಾಪೂರ, ತಾ: ಚ. ಕಿತ್ತೂರ

17. ಪೀಟರ್ ಎಸ್ ದಳವಾಯಿ (ಸಹ ಶಿಕ್ಷಕ), ಕಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಆಶ್ರಮ ಶಾಲೆ, ಮೊಹರ, ಬೈಲಹೊಂಗಲ

18. ಸುರೇಖಾ ನವಲಗುಂದೆ (ಸ.ಶಿ), ಸರ್ಕಾರಿ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಶಾಹುನಗರ, ಬೆಳಗಾವಿ ನಗರ

19. ಮೋನಿಕಾ ಗೊನ್ಸಾಲವೀಸ್, ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ಕುಟ್ಟಲವಾಡಿ, ತಾ: ಬೆಳಗಾವಿ ಗ್ರಾಮೀಣ

20. ಕಲ್ಲಪ್ಪ ಗೌರಕ್ಕನವರ (ಸ.ಶಿ), ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಳಸನಟ್ಟಿ, ತಾ: ಖಾನಾಪೂರ

21. ಸುಮನ್ ಶ್ರೀಶೈಲ ಕಟ್ಟಿ (ಸ.ಶಿ), ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಂಗೊಳ್ಳಿ, ತಾ: ಬೈಲಹೊಂಗಲ

22. ಪಿ.ಆರ್. ಹಂಚಿನಮನಿ (ದೈ.ಶಿ), ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಅಂಬಡಗಟ್ಟಿ, ತಾ: ಚ. ಕಿತ್ತೂರು

23. ಶಿವಪುತ್ರ ಕಲ್ಲಪ್ಪ ಸುಣಗಾರ (ಸ.ಶಿ), ಸರ್ಕಾರಿ ಹಿರಿಯ ಮರಾಠಿ ಶಾಲೆ ಮುಘವಾಡೆ, ತಾ: ಖಾನಾಪೂರ

24. ಸುಜಾತಾ ಶೇಖಪ್ಪ ಜಂಗಣ್ಣವರ (ಸ.ಶಿ), ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಕರೀಕಟ್ಟಿ, ತಾ: ಸವದತ್ತಿ

25. ಸುರೇಶ ಬಸನಗೌಡ ಪಾಟೀಲ (ಮು.ಶಿ), ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾರುಗೊಪ್ಪ, ತಾ: ಸವದತ್ತಿ

26. ಅನಿಲ ಅನಂತ ಪಾಟೀಲ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗುದಗೊಪ್ಪ, ತಾ: ರಾಮದುರ್ಗ

27.ಎಂ ಎನ್ ಗವನ್ನವರ (ಸ.ಶಿ), ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಚಿಕ್ಕೊಪ್ಪ ಎಸ್ ಕೆ, ತಾ: ರಾಮದುರ್ಗ

28. ಶಮೀಮಾಬಾನು ಮುಲ್ಲಾ, ಸರ್ಕಾರಿ ಉರ್ದು ಮಾದರಿ ಶಾಲೆ ನಂ.11 ಅಜಂನಗರ, ಬೆಳಗಾವಿ ನಗರ

29. ಶೋಭಾ ನೀಲಜಕರ (ಸ.ಶಿ), ಕೆ.ಪಿ.ಎಸ್ ಮರಾಠಿ ಮಾದರಿ ಶಾಲೆ ಯಳ್ಳೂರು, ಬೆಳಗಾವಿ ಗ್ರಾಮೀಣ

30. ಲಕ್ಷ್ಮಣ ತರದಾಳ (ಪ್ರಗು), ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ಪಿರಣವಾಡಿ, ಬೆಳಗಾವಿ ಗ್ರಾಮೀಣ

31. ಗುಂಡು ಕುಬೇರ ಹಚ್ಚಂಬಲಿ (ಪ್ರಗು), ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಹಾಗೂ ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆ ಇಟಗಿ, ಖಾನಾಪೂರ

32. ಗಿರೀಶ ಜಗಜಂಪಿ (ಪ್ರಗು), ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಕಾಕತಿ, ಬೆಳಗಾವಿ ಗ್ರಾಮೀಣ

33. ಗೀತಾ ಪ್ರಭು (ಸ.ಶಿ), ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಶಗಣಮಟ್ಟ

34. ನಿರ್ಮಲಾ ಮ ಗುರವ, ಸರ್ಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆ ಉಚಗಾಂವ ಪ್ರೌಢಶಾಲೆ ಶಿಕ್ಷಕರು:

1. ರುದ್ರಪ್ಪ ಕೆ ತರಗಾರ (ಸ.ಶಿ), ಸರ್ಕಾರಿ ಪ್ರೌಢಶಾಲೆ ಚಿಕ್ಕ ಬೆಳ್ಳಿಕಟ್ಟಿ, ತಾ: ಬೈಲಹೊಂಗಲ

2. ಮಂಜುನಾಥ ದೇಮಪ್ಪ ಕರಿಸಿದ್ದನವರ (ಸ.ಶಿ), ಸರ್ಕಾರಿ ಪ್ರೌಢಶಾಲೆ ಖೋದನಾಪೂರ, ತಾ: ಚ. ಕಿತ್ತೂರ

3. ಆರ್ ವಿ ಕಾಂಬಳೆ (ಸ.ಶಿ), ಸರ್ಕಾರಿ ಪ್ರೌಢಶಾಲೆ ಮಣ್ಣಿಕೇರಿ, ಬೆಳಗಾವಿ ಗ್ರಾಮೀಣ

4. ವಿನೀತಕುಮಾರ ಹೆಗಡೆ (ಸ.ಶಿ), ಸರ್ಕಾರಿ ಪ್ರೌಢ ಶಾಲೆ ಮುದಕವಿ, ರಾಮದುರ್ಗ

5. ರತ್ನಾ ಪವಾರ (ಮು.ಶಿ), ಶ್ರೀ ರೇಣುಕಾ ಯಲ್ಲಮ್ಮಾ ದೇವಿ ಪ್ರೌಢಶಾಲೆ ಉಗರಗೋಳ, ಸವದತ್ತಿ

6. ಮಹೇಶ ಸಿದ್ದಪ್ಪ ಅಕ್ಕಿ (ದೈ.ಶಿ), ಸರ್ಕಾರಿ ಪ್ರೌಢಶಾಲೆ ಕಾಕತಿ, ಬೆಳಗಾವಿ ಗ್ರಾಮೀಣ

7. ಗೀತಾ ಭೀ ಹೊಂಗಲ (ವೃತ್ತಿ ಶಿಕ್ಷಣ ಶಿಕ್ಷಕಿ), ಸರ್ಕಾರಿ ಪ್ರೌಢಶಾಲೆ ವಣ್ಣೂರ, ತಾ: ಬೈಲಹೊಂಗಲ

8. ಬಸಪ್ಪ ರಾಮಪ್ಪ ಚಲವಾದಿ (ಚಿ.), ಸರ್ಕಾರಿ ಪ್ರೌಢಶಾಲೆ ಕತ್ರಿದಡ್ಡಿ, ತಾ: ಚ. ಕಿತ್ತೂರ

9. ನಾರಾಯಣ ಜ್ಞಾನೋಬಾ ಪಾಟೀಲ (ಮು.ಶಿ), ಲೋಂಡಾ ಪ್ರೌಢಶಾಲೆ ಲೋಂಡಾ, ತಾ: ಖಾನಾಪೂರ

10. ಗಜಾನನ ಬಸವಂತ ಲೋಹಾರ (ಚಿ.ಶಿ), ಎಮ್ ಎಮ್ ಶಿವರಾಜ ಹೈಸ್ಕೂಲ್ ರಾಕಸಕೊಪ್ಪ, ಬೆಳಗಾವಿ ಗ್ರಾಮೀಣ

11. ದಶರಥ ನಾಯಕ (ಸ.ಶಿ), ಪಿ.ಎಂ.ಶ್ರೀ ಸರ್ಕಾರಿ ಪ್ರೌಢಶಾಲೆ ಖನಗಾಂವಿ ಬಿ.ಕೆ, ಬೆಳಗಾವಿ ಗ್ರಾಮೀಣ

12.ಗಣಪತಿ ಮೋಟೆ (ಸ.ಶಿ), ಸರ್ಕಾರಿ ಪ್ರೌಢಶಾಲೆ ಸಾಲಾಪೂರ, ತಾ: ರಾಮದುರ್ಗ

13. ಬಾಬುಗೌಡ ಪಾಟೀಲ (ಸ.ಶಿ), ಸರ್ಕಾರಿ ಪ್ರೌಢಶಾಲೆ ಚಿಕ್ಕೋಪ, ತಾ: ಸವದತ್ತಿ

14. ಮೊಹಮ್ಮದ ಕಿಲ್ಲೇದಾರ (ಸ.ಶಿ), ಸರ್ಕಾರಿ ಬಾಲಿಕೆಯರ ಉರ್ದು ಪ್ರೌಢಶಾಲೆ ಖಂಜರಗಲ್ಲಿ, ಬೆಳಗಾವಿ ನಗರ

15. ಅಶ್ವಿನಿ ತುಕಾರಾಮ ಪಾಟೀಲ (ದೈ.ಶಿ), ಮರಾಠಾ ಮಂಡಳ ತಾರಾರಾಣಿ ಪ್ರೌಢಶಾಲೆ, ಖಾನಾಪೂರ

16. ಚಂದ್ರಕಾಂತ ಆಯ್ ಪಾಟೀಲ (ಸ.ಶಿ), ಕನ್ಯಾ ವಿದ್ಯಾಲಯ ನಂದಗಡ, ತಾ: ಖಾನಾಪೂರಈ ಬಾರಿ ಕನ್ನಡದ ಜತೆಗೆ ಉರ್ದು ಹಾಗೂ ಮರಾಠಿ ಮಾಧ್ಯಮ ಶಾಲೆಗಳ ಶಿಕ್ಷಕರೂ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ವೃತ್ತಿ ಶಿಕ್ಷಣ ಶಿಕ್ಷಕರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೋ ಹತ್ಯೆಗೆ ಸಹಕಾರ ನೀಡುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಿ
ಕೈಗಾರಿಕೆ ಪ್ರದೇಶಕ್ಕೆ ಮೂಲಸೌಕರ್ಯ ಕಲ್ಪಿಸಿ