ಕಾನೂನು ಪಾಲನೆ ಮಾಡುವ ಅಧಿಕಾರಿಗಳೆ ಗೋ ಹಂತಕರ ಜೊತೆ ಕೈಮಿಲಾಯಿಸಿ ಗೋಹತ್ಯೆ ಸಹಕಾರ ನೀಡುತ್ತಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ರಾಮದುರ್ಗ
ಕಾನೂನು ಪಾಲನೆ ಮಾಡುವ ಅಧಿಕಾರಿಗಳೆ ಗೋ ಹಂತಕರ ಜೊತೆ ಕೈಮಿಲಾಯಿಸಿ ಗೋಹತ್ಯೆ ಸಹಕಾರ ನೀಡುತ್ತಿದ್ದಾರೆ. ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ತಾಲೂಕಿನಲ್ಲಿ ಅವ್ಯಾಹತವಾಗಿ ಗೋವಿನ ವಧೆ ನಡೆಸಿ ಮಾಂಸ ಮಾರಾಟ ನಡೆಯುತ್ತಿದ್ದು ಜಾಗದ ಸಹಿತವಾಗಿ ಬಜರಂಗದಳ ಮಾಹಿತಿ ನೀಡಿದರು ಸಂಬಂಧಿಸಿದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕಾನೂನು ಪಾಲನೆ ಮಾಡಬೇಕಾಗಿದ್ದವರೇ ಕೈಕಟ್ಟಿ ಕುಳಿತ ಪರಿಣಾಮ ಇತ್ತಿಚೆ ಅನಿವಾರ್ಯವಾಗಿ ಬಜರಂಗದಳದ ಕಾರ್ಯಕರ್ತರು ಕಾರ್ಯಾಚರಣೆ ಮಾಡಿ ಕಸಾಯಿ ಕಾಣೆಯಲ್ಲಿದ್ದ ಸುಮಾರು 13 ಗೋವುಗಳನ್ನು ರಕ್ಷಣೆ ಮಾಡಿ ಸುಮಾರು 5 ಗಾಡಿಗಳಲ್ಲಿದ್ದ ಗೋವಿನ ಮಾಂಸವನ್ನು ಜಪ್ತಿ ಮಾಡಲಾಯಿತು.ತಾಲೂಕಿನಲ್ಲಿ ಕಾನೂನು ಪಾಲನಾ ಅಧಿಕಾರಿಗಳು ಗೋ ಹಂತಕರ ಜೊತೆಗೆ ಕೈ ಮಿಲಾಯಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ಅಕ್ರಮವಾಗಿ ರಾಮದುರ್ಗ ನಗರ ಸೇರಿದಂತೆ ತಾಲೂಕಿನ ಸುರೇಬಾನ, ಚಿಕೊಪ್ಪ, ಬಟಕುರ್ಕಿ, ತೊರಗಲ್ ಮುಂತಾದ ಗ್ರಾಮಗಳಲ್ಲಿ ಬಹಿರಂಗವಾಗಿಯೇ ಗೋವಿನ ಮಾಂಸವನ್ನು ಮಾರಾಟ ಮಾಡುತ್ತಿದ್ದು ರಾಮದುರ್ಗ ನಗರಗಳಲ್ಲಿಯೂ ಸಹ ಗೋ ಮಾಂಸ ಮಾರಾಟ ನಡೆಯುತ್ತಿದೆ ಹಾಗೂ ಕೆಲ ಹೋಟೆಲ್‌ಗಳಲ್ಲಿ ಬೀಫ್ ಸಿಗುತ್ತದೆ ಎಂಬ ಬೋರ್ಡ್ ಹಾಕಿ ವ್ಯಾಪಾರ ಮಾಡಲಾಗುತ್ತಿದೆ. ಗೋವಧೆ ಹಾಗೂ ಗೋವಿನ ಮಾಂಸ ಮಾರಾಟ ಕಾನೂನು ಪ್ರಕಾರ ಅಪರಾಧವಾಗಿದ್ದು, ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ಮಾಂಸ್ ಮಾರಾಟ ಸ್ಥಳಗಳ ಮೇಲೆ ದಾಳಿ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಭಾಗ ಸತ್ಸಂಗ ಪ್ರಮುಖ ವಿಜಯೇಂದ್ರ ಜೋಶಿ, ಜಿಲ್ಲಾ ಮಾತೃ ಶಕ್ತಿ ಸಂಚಾಲಕಿ ಸುನಿತಾ ತಿಮ್ಮನಗೌಡರ, ರಾಮದುರ್ಗ ಪ್ರಖಂಡ ಅಧ್ಯಕ್ಷ ಪ್ರಕಾಶ ಸೂಳಿಬಾವಿ, ಕಾರ್ಯದರ್ಶಿ ಸಂಗಮೇಶ ಉದಪುಡಿ ಮತ್ತು ಭಾರತೀಯ ಕಿಸಾನ್ ಸಂಘ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಶ್ರೀರಾಮ ಸೇನೆ, ಭಾರತೀಯ ಜನತಾ ಪಕ್ಷ ಮುಂತಾದ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.