ಕನ್ನಡಪ್ರಭ ವಾರ್ತೆ ಜಮಖಂಡಿ ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಉಳಿಸಿಕೊಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ಲಾಸ್ಟಿಕ್‌ಮ ರಸಗೋಬ್ಬರಗಳು ಅತಿಯಾಗಿ ಬಳಕೆ ಯಿಂದಾಗಿ ನಮ್ಮ ಜಮೀನುಗಳು ಫಲವತ್ತತೆ ಕಳೆದು ಕೊಳ್ಳುತ್ತಿವೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಮುಂದಿನ ಪೀಳಿಗೆಗೆ ಫಲವತ್ತಾದ ಭೂಮಿಯನ್ನು ಉಳಿಸಿಕೊಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ಲಾಸ್ಟಿಕ್‌ಮ ರಸಗೋಬ್ಬರಗಳು ಅತಿಯಾಗಿ ಬಳಕೆ ಯಿಂದಾಗಿ ನಮ್ಮ ಜಮೀನುಗಳು ಫಲವತ್ತತೆ ಕಳೆದು ಕೊಳ್ಳುತ್ತಿವೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

ಹಿಪ್ಪರಗಿ ಗ್ರಾಮದಲ್ಲಿ ಎಂಆರ್‌ಎನ್‌ ಫೌಂಡೇಶನ್‌ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕೃಷ್ಣಾತರಿ, ಕೃಷ್ಣಾ ಪುಣ್ಯಸ್ನಾನ ಹಾಗೂ ತಮ್ಮ 61ನೇ ಹುಟ್ಟು ಹಬ್ಬದ ಕಾರ್ಯಕ್ರಮದ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು.

ತಮ್ಮ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಅಧ್ದೂರಿಯಾಗಿ ಆಯೋಜಿಸಿರುವ ಎಲ್ಲರನ್ನು ಅಭಿನಂದಿಸಿದ ಅವರು, ಆರ್‌ಎಸ್ಎಸ್‌ನ ಉತ್ತರ ಕರ್ನಾಟಕದ ಪ್ರಮುಖ ಅರವಿಂದರಾವ ದೇಶಪಾಂಡೆ ಅವರ ಸಲಹೆಯಂತೆ ಹೆಚ್ಚಿನ ಸಮಯವನ್ನು ಸಮಾಜ ಸೇವೆಗೆ ಮೀಸಲಿಡಿ ಎಂದು ಹೇಳಿದ್ದಾರೆ. ಅವರ ಮಾತಿನಂತೆ ನಮ್ಮ ಉದ್ಯೋಗ ಹಾಗೂ ಇನ್ನಿತರ ವ್ಯವಸ್ಥೆಯನ್ನು ಸಂಗಮೇಶ ನಿರಾಣಿ ಅವರು ಹಾಗೂ ವಿಜಯ ಮತ್ತು ವಿಶಾಲ ಅವರು ನೋಡಿಕೊಳ್ಳುತ್ತಿದ್ದು. ಅವರಿಗೆ ಎಲ್ಲ ಜವಾಬ್ದಾರಿಗಳು ವಹಿಸಿ ಕೊಡಲು ನಿಶ್ಚಯಿಸಿದ್ದೇನೆ. ಅಲ್ಲದೇ ಹೆಚ್ಚಾಗಿ ಸಮಾಜ ಸೇವೆಗಳಲ್ಲಿ ತೊಡಗಿಕೊಳ್ಳಲು ನಿರ್ಧರಿಸಿದ್ದೇನೆ ಎಂದರು.

ಪ್ಲಾಸಿಕ್‌ಗೆ ಪರ್ಯಾಯವಾಗಿ ಕಬ್ಬು, ಮೆಕ್ಕೆಜೋಳ, ಅಕ್ಕಿಯ ಉತ್ಪನ್ನಗಳಿಂದ ಪ್ಲಾಸ್ಟಿಕ ಪರ್ಯಾಯ ಪದಾರ್ಥಗಳನ್ನು ನಿರ್ಮಿಸಿ ಬಳಸಲು ನಮ್ಮ ಸಂಸ್ಥೆ ಮುಂಚೊಣಿಯಲ್ಲಿದೆ. ಮುಂದಿನ ದಿನಗಳಲ್ಲಿ ಹಿಪ್ಪರಗಿಯ ಸಾಯಿಪ್ರೀಯಾ ಸಕ್ಕರೆ ಕಾರ್ಖಾನೆಯಲ್ಲಿ ಪ್ಲಾಸ್ಟಿಕ್‌ನ ಪರ್ಯಾಯ ಉತ್ಪನ್ನಗಳ ತಯಾರಿಕೆ ಪ್ರಾರಂಭವಾಗಲಿದೆ. ಸುಮಾರು 6 ಸಾವಿರ ಕೋಟಿಯ ಯೋಜನೆ ಇದಾಗಿದ್ದು ಸಾವಿರಾರು ಜನರಿಗೆ ಉದ್ಯೋಗ ಅವಕಾಶದ ಜತೆಗೆ ಪರಿಸರ ರಕ್ಷಣೆಯು ಆಗಲಿದೆ ಎಂದರು.

ಡಿಗ್ರೇಡೇಬಲ್‌ ಉತ್ಪನ್ನಗಳ ತಯಾರಿಕಾ ಘಟಕ ಪ್ರಾರಂಭವಾಗಲಿದೆ ಎಂದ ಅವರು, ಇಥೆನಾಲ್‌ ದಿಂದ ನಮ್ಮ ದೇಶದ ಪ್ರೆಟ್ರೋಲ್‌ ದರ ₹ 100ಗಳಿಗೆ ಉಳಿದಿದೆ. ಇಲ್ಲವಾದಲ್ಲಿ ಅತಿ ಹೆಚ್ಚು ಪೆಟ್ರೋಲ್‌ಗೆ ದರ ತೆರಬೇಕಾಗಿತ್ತು. ಮುಂದಿನ ದಿನಗಳಲ್ಲಿ ಇಥೇನಾಲ್‌ ಇಂಜನ್‌ಗಳ ತಯಾರಿಕೆ ಸರ್ಕಾರ ಪರವಾನಿಗೆ ನೀಡಿದೆ ಎಂದರು.

20 ವರ್ಷಗಳ ಹಿಂದೆ ಒಂದು ಪೆಟ್ರೋಲ್‌ ಪಂಪ್‌ ಪಡೆಯಲು ಅರ್ಜಿ ಹಾಕಿದ್ದೆ ಎಂದು ನೆನಪಿಸಿಕೊಂಡ ಅವರು, ಇಂದು ತಮ್ಮೆಲ್ಲರ ಸಹಾಯ ಸಹಕಾರ ಆಶೀರ್ವಾದದಿಂದಾಗಿ ಸಾವಿರಾರು ಪೆಟ್ರೋಲ್‌ ಪಂಪ್‌ಗಳ ಪರವಾನಿಗೆ ನೀಡುವ ಶಕ್ತಿ ಪಡೆದುಕೊಂಡಿದೆ ಎಂದರು.

ವೇದಿಕೆ ಮೇಲೆ ಆ ಸುಕ್ಷೇತ್ರ ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭುಜಿ ಮಹರಾಜರು, ನೊಣವಿನಕೆರೆ ಮಠದ ವೀರ ಗಂಗಾಧರ ಮಹಾಸ್ವಾಮೀಜಿ, ಉತ್ತರ ಪ್ರದೇಶದ ನಾಗಸಾಧು ದೇವಗಿರಿ ಬಾಬಾ, ನಡೆಸೋಸಿಯ ನಿಜಲಿಂಗೇಶ್ವರ ಸ್ವಾಮೀಜಿ, ಆರ್ ಎಸ್ ಎಸ್ ಉತ್ತರ ಕರ್ನಾಟಕ ಪ್ರಮುಖ ಅರವಿಂದ್ ರಾವ್ ದೇಶಪಾಂಡೆ, ಆರ್ ಎಸ್ ಎಸ್ ನ ರಾಷ್ಟ್ರೀಯ ಪರ್ಯಾವರಣ ಪ್ರಮುಖ ಗಣಪತಿ ಹೆಗಡೆ, ಹಿಂದೂ ಜಾಗರಣ ವೇದಿಕೆ ರಾಜ್ಯ ಸಂಚಾಲಕ ಜಗದೀಶ್ ಕಾರಂತ್, ಆರ್ ಎಸ್ ಎಸ್ ಪ್ರಾಂತ ಕಾರ್ಯವಾಹ ಹೆಸರು ರಾಘವೇಂದ್ರ ಕಾಗವಾಡ ಸೇರಿದಂತೆ ವಿವಿಧ ಮಠಾಧೀಶರು, ಮುಖಂಡರು ಅಧಿಕಾರಿಗಳು ಮತ್ತು ರೈತ ಮುಖಂಡರು ಇದ್ದರು.

ಭೂಮಿಯ ಫಲವತ್ತತೆ ಕಳೆದುಕೊಳ್ಳುವ ದಿನಮಾನಗಳಲ್ಲಿ ನಾವಿದ್ದೇವೆ. ಮುಂಬರುವ ದಿನಗಳಲ್ಲಿ ನಮ್ಮ ಮುಂದಿನ ಪೀಳಿಗೆಗೆ ಫಲವತ್ತಾದ ಜಮೀನನ್ನು ಉಳಿಸಿಕೊಡಬೇಕಾದ ಮಹತ್ವದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಗಮನ ಹರಿಸಬೇಕು. ಪಶುಗಳ ಸಂಖ್ಯೆ ಹೆಚ್ಚಳವಾಗಬೇಕು. ಗೋಮಾತೆಯನ್ನು ಚಿತ್ರಗಳಲ್ಲಿ ನೊಡುವಂತಾಬಾರದು. ಗೋಮಾತೆಯ ಸಂತತಿಯನ್ನು ರಕ್ಷಿಸಿ, ಉಳಿಸಿ ಬೆಳೆಸಬೇಕಾಗಿದೆ.

-ಮುರುಗೇಶ ನಿರಾಣಿ, ಮಾಜಿ ಸಚಿವ