ಜಿಪಂ, ತಾಪಂ ಕ್ಷೇತ್ರವಾರು ಮೀಸಲಾತಿ ಕರಡು ಅಧಿಸೂಚನೆ ಪ್ರಕಟ

KannadaprabhaNewsNetwork |  
Published : Oct 10, 2026, 01:15 AM IST
ಅಕ್ಷರ ದಾಸೋಹ ನೌಕರರ ಮೂರು ತಿಂಗಳ ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ತಾಪಂ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಚಿಕ್ಕಮಗಳೂರುಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳಿಗೆ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಮೂಲಕ ಮೀಸಲಾತಿ ನಿಗದಿ ಪಡಿಸಿ ಶುಕ್ರವಾರ ರಾಜ್ಯ ಪತ್ರ ಹೊರಡಿಸಿದೆ.ಮಂಗಳವಾರವಷ್ಟೇ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಮೀಸ ಲಾತಿ ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿತ್ತು. ಶುಕ್ರವಾರ ಪ್ರತಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಕ್ಷೇತ್ರವಾರು ಕರಡು ಮೀಸಲಾತಿ ನಿಗದಿ ಪಡಿಸಿದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಮೀಸ ಲಾತಿ ನಿಗದಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಸ್ಥಾನಗಳಿಗೆ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಮೂಲಕ ಮೀಸಲಾತಿ ನಿಗದಿ ಪಡಿಸಿ ಶುಕ್ರವಾರ ರಾಜ್ಯ ಪತ್ರ ಹೊರಡಿಸಿದೆ.

ಮಂಗಳವಾರವಷ್ಟೇ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಕ್ಷೇತ್ರ ಪುನರ್‌ ವಿಂಗಡಣೆ ಮಾಡಿ ಮೀಸ ಲಾತಿ ನಿಗದಿ ಪಡಿಸಿ ಅಧಿಸೂಚನೆ ಹೊರಡಿಸಿತ್ತು. ಶುಕ್ರವಾರ ಪ್ರತಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿಯ ಕ್ಷೇತ್ರವಾರು ಕರಡು ಮೀಸಲಾತಿ ನಿಗದಿ ಪಡಿಸಿದೆ.

ಸಾರ್ವಜನಿಕರಿಗೆ ಈ ಬಗ್ಗೆ ಆಕ್ಷೇಪಣೆಗಳಿದ್ದರೆ ಮುಂದಿನ 10 ದಿನದಲ್ಲಿ ಅಂದರೆ, ಅ.19ರ ಒಳಗಾಗಿ ಪೂರಕ ದಾಖಲೆ ಗಳೊಂದಿಗೆ ಖುದ್ದು ಅಥವಾ ಅಂಚೆ ಮೂಲಕ ಸಲ್ಲಿಸುವುದಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರದ ಕಾರ್ಯದರ್ಶಿ (ಪಂ,ರಾಜ್‌) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್‌ ರಾಜ್‌ ಇಲಾಖೆ, ಬಹುಮಹಡಿ ಕಟ್ಟಡ, 3ನೇ ಹಂತ, 3ನೇ ಮಹಡಿ, ಅಂಬೇಡ್ಕರ್‌ ವೀಧಿ, ಬೆಂಗಳೂರು ವಿಳಾಸಕ್ಕೆ ಸಲ್ಲಿಸಲು ಸೂಚಿಸಲಾಗಿದೆ. ಕೊನೆ ದಿನಾಂಕದ ಬಳಿಕ ಬಂದ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

---ಬಾಕ್ಸ್‌----

ಜಿಪಂ 36 ಕ್ಷೇತ್ರವಾರ ಮೀಸಲಾತಿ

1-ಮೆಣಸೆ- ಸಾಮಾನ್ಯ, 2-ಶೃಂಗೇರಿ (ಕಸಬಾ)- ಎಸ್ಸಿ (ಮ), 3-ಹರಿಹರಪುರ- ಸಾಮಾನ್ಯ (ಮ), 4-ಹರಂದೂರು- ಸಾಮಾನ್ಯ (ಮ), 5-ಕೊಪ್ಪ ಗ್ರಾಮಾಂತರ- ಹಿಂ. ಅ ವರ್ಗ, 6-ಹೇರೂರು- ಎಸ್ಸಿ (ಮ), 7-ಮುತ್ತಿನಕೊಪ್ಪ- ಹಿಂ.ಬ ವರ್ಗ (ಮ), 8-ಕರ್ಕೇಶ್ವರ- ಸಾಮಾನ್ಯ, 9-ಬಿಕಣಬೂರು- ಎಸ್ಸಿ, 10-ಲಕ್ಕವಳ್ಳಿ- ಎಸ್ಸಿ, 11-ಅಮ್ಮತಾಪುರ- ಸಾಮಾನ್ಯ (ಮ), 12-ಲಿಂಗದಹಳ್ಳಿ- ಹಿಂ. ಅ (ಮ), 13-ಮಾವಿನಕೆರೆ (ಕಳಸ)- ಎಸ್ಟಿ, 14-ಹೊರನಾಡು- ಎಸ್ಸಿ, 15-ಬಾಂಡ್ಯ- ಸಾಮಾನ್ಯ, 16-ಜಾಗರ- ಸಾಮಾನ್ಯ, 17-ಬ್ಯಾರವಳ್ಳಿ- ಎಸ್ಸಿ (ಮ), 18-ಕುರುವಂಗಿ- ಸಾಮಾನ್ಯ (ಮ), 19-ಲಕ್ಕ್ಯಾ- ಹಿಂ. ಅ ವರ್ಗ, 20-ಕಳಸಾಪುರ- ಸಾಮಾನ್ಯ (ಮ), 21-ಅಂಬಳೆ- ಹಿಂ. ಅ (ಮ), 22-ವಸ್ತಾರೆ- ಸಾಮಾನ್ಯ, 23-ಆಲ್ದೂರು- ಸಾಮಾನ್ಯ, 24-ಶಿವನಿ- ಹಿಂ.ಅ ವರ್ಗ, 25-ಬಗ್ಗವಳ್ಳಿ- ಎಸ್ಸಿ (ಮ), 26-ಹಿರೇನಲ್ಲೂರು- ಸಾಮಾನ್ಯ (ಮ), 27-ಯಗಟಿ- ಹಿಂ. ಅ (ಮ), 28-ದೊಡ್ಡಪಟ್ಟಣಗೆರೆ- ಎಸ್ಸಿ (ಮ), 29-ಸಿಂಗಟಗೆರೆ- ಸಾಮಾನ್ಯ, 30-ಸಖರಾಯಪಟ್ಟಣ- ಸಾಮಾನ್ಯ, 31-ದೇವನೂರು- ಸಾಮಾನ್ಯ, 32-ಕೂವೆ- ಎಸ್ಸಿ, 33-ಬಣಕಲ್- ಸಾಮಾನ್ಯ, 34-ಬಿದರಹಳ್ಳಿ- ಸಾಮಾನ್ಯ (ಮ), 35-ಬಿಳಗುಳ- ಸಾಮಾನ್ಯ (ಮ), 36-ಗೋಣಿಬೀಡು- ಎಸ್ಟಿ (ಮ) ಮೀಸಲು ನಿಗದಿ ಪಡಿಸಲಾಗಿದೆ.

---ಬಾಕ್ಸ್‌---

ಜಿಲ್ಲಾ ಮೀಸಲಾತಿ ನಿಗದಿ ವಿವರ

ಒಟ್ಟು ಸ್ಥಾನ:36

ಮಹಿಳಾ ಮೀಸಲಾಸು:18

ಎಸ್ಸಿ:09

ಎಸ್ಟಿ:02

ಹಿಂ.ವರ್ಗ (ಅ):06

ಹಿಂ.ವರ್ಗ (ಬ):01

ಸಾಮಾನ್ಯ:18 9 ತಾಲೂಕು ಪಂಚಾಯಿತಿ ಮೀಸಲಾತಿ

1.ಚಿಕ್ಕಮಗಳೂರು ತಾಪಂ 19 ಕ್ಷೇತ್ರ

1- ಶಿರವಾಸೆ- ಎಸ್ಸಿ (ಮ), 2-ದೇವನಾನ- ಸಾಮಾನ್ಯ, 3-ಬಿಂಡಿಗಾ- ಸಾಮಾನ್ಯ (ಮ), 4-ಹಿರೇಕೊಳಲೆ- ಎಸ್ಸಿ, 5-ಬ್ಯಾರವಳ್ಳಿ- ಎಸ್ಸಿ (ಮ), 6-ದೊಡ್ಡಮಾಗರವಳ್ಳಿ- ಸಾಮಾನ್ಯ (ಮ), 7-ಅಲ್ಲಂಪುರ- ಎಸ್ಸಿ, 8-ಮೂಗ್ತಿಹಳ್ಳಿ- ಸಾಮಾನ್ಯ, 9-ಕರ್ತಿಕೆರೆ- ಸಾಮಾನ್ಯ, 10-ಲಕ್ಯಾ- ಸಾಮಾನ್ಯ (ಮ), 11-ಬೆಳಕಲ್ಲಹಳ್ಳಿ- ಹಿಂ.ಅ ವರ್ಗ, 12-ಬೆಳವಾಡಿ- ಹಿಂ.ಅ (ಮ), 13-ಕಳಸಾಪುರ- ಸಾಮಾನ್ಯ (ಮ), 14-ಮರ್ಲೆ- ಸಾಮಾನ್ಯ, 15-ಅಂಬಳೆ- ಎಸ್ಸಿ, 16-ವಸ್ತಾರೆ- ಸಾಮಾನ್ಯ, 17-ಆಣೂರು- ಎಸ್ಸಿ (ಮ), 18-ಆಲ್ದೂರು- ಸಾಮಾನ್ಯ (ಮ), 19-ಮಾಚಗೊಂಡನಹಳ್ಳಿ- ಎಸ್ಟಿ (ಮ)

=------

2.ಮೂಡಿಗೆರೆ ತಾಪಂನ 9 ಕ್ಷೇತ್ರ

1-ಜಾವಳಿ- ಸಾಮಾನ್ಯ (ಮ), 2-ನಿಡುವಾಳ-ಎಸ್ಸಿ, 3-ಬಣಕಲ್- ಎಸ್ಸಿ (ಮ), 4-ಬಿಳುಗುಳ- ಸಾಮಾನ್ಯ, 5-ಮೂಡಿಗೆರೆ ಗ್ರಾಮಾಂತರ ಕಸಬಾ- ಸಾಮಾನ್ಯ, 6-ಬಿದರಹಳ್ಳಿ- ಸಾಮಾನ್ಯ (ಮ), 7-ದಾರದಹಳ್ಳಿ- ಸಾಮಾನ್ಯ, 8-ಚಿನ್ನಿಗ- ಎಸ್ಸಿ (ಮ), 9-ಗೊಣಿಬೀಡು- ಎಸ್ಟಿ (ಮ).

---

3. ಕಳಸ ತಾಪಂ 7 ಕ್ಷೇತ್ರ

1-ಸಂಸೆ- ಸಾಮಾನ್ಯ, 2-ಹೊರನಾಡು- ಸಾಮಾನ್ಯ, 3-ತನೂಡಿ- ಎಸ್ಸಿ (ಮ), 4-ಹೆಮ್ಮಕ್ಕಿ- ಹಿಂ.ಅ (ಮ), 5-ಮಾವಿನಕೆರೆ (ಕಳಸ)- ಎಸ್ಟಿ (ಮ), 6-ಮರಸಣಿಗೆ- ಸಾಮಾನ್ಯ (ಮ), 7-ಇಡಕಣಿ- ಸಾಮಾನ್ಯ

---

4. ತರೀಕೆರೆ ತಾಪಂ11 ಕ್ಷೇತ್ರ

1-ಕರಕುಚ್ಚಿ- ಎಸ್ಸಿ, 2-ಬೆಲೇನಹಳ್ಳಿ- ಎಸ್ಟಿ (ಮ), 3-ಅಮೃತಾಪುರ- ಸಾಮಾನ್ಯ (ಮ), 4-ಬಾವಿಕೆರೆ-ಸಾಮಾನ್ಯ (ಮ), 5-ಮುಡುಗೋಡು- ಸಾಮಾನ್ಯ, 6-ಲಕ್ಕವಳ್ಳಿ- ಎಸ್ಸಿ, 7-ನಂದಿಬಟ್ಟಲು- ಸಾಮಾನ್ಯ, 8-ದೋರನಾಳು- ಸಾಮಾನ್ಯ (ಮ), 9-ಕುಡ್ಲೂರು- ಎಸ್ಸಿ (ಮ), 10-ಲಿಂಗದಹಳ್ಳಿ- ಸಾಮಾನ್ಯ, 11-ಉಡೇವಾ- ಎಸ್ಸಿ (ಮ)

---

5.ನರಸಿಂಹರಾಜಪುರ ತಾಪಂ 9 ಕ್ಷೇತ್ರ

1- ಮುತ್ತಿನಕೊಪ್ಪ- ಸಾಮಾನ್ಯ, 2- ಕಡಹಿನಬೈಲು- ಸಾಮಾನ್ಯ, 3-ಸೀತೂರು-ಸಾಮಾನ್ಯ (ಮ), 4-ಹರಾವರಿ-ಹಿಂ. ಅ (ಮ), 5-ಬಾಳೆ-ಸಾಮಾನ್ಯ, 6-ಹೊನ್ನೇಕೋಡಿಗೆ- ಸಾಮಾನ್ಯ (ಮ), 7-ಕರ್ಕೇಶ್ವರ-ಎಸ್ಸಿ, 8-ಬಿ.ಕಣಬೂರು-ಎಸ್ಸಿ (ಮ), 9-ಮಾಗುಂಡಿ- ಎಸ್ಟಿ (ಮ)

6.ಅಜ್ಜಂಪುರ ತಾಪಂ 9 ಕ್ಷೇತ್ರ

1-ಬುಕ್ಕಾಂಬುದಿ - ಸಾಮಾನ್ಯ2-ಭಕ್ತನಕಟ್ಟೆ - ಎಸ್ಸಿ, 3-ಶಿವನಿ - ಸಾಮಾನ್ಯ,4-ಜಾವೂರು - ಹಿಂ.ಅ ವರ್ಗ (ಮ), 5-ಗಡಿಹಳ್ಳಿ - ಸಾಮಾನ್ಯ, 6-ಸೊಲ್ಲಾಪುರ - ಸಾಮಾನ್ಯ (ಮ), 7-ಮುಗುಳಿ - ಎಸ್ಟಿ (ಮ)8-ಸೊಕ್ಕೆ - ಸಾಮಾನ್ಯ (ಮ),9-ಬಗ್ಗವಳ್ಳಿ - ಎಸ್ಸಿ (ಮ),

--

7.ಕಡೂರು ತಾಪಂ 20ಕ್ಷೇತ್ರ

1-ಹಿರೇನಲ್ಲೂರು - ಸಾಮಾನ್ಯ (ಮ),2-ಬಿಸಲೇರೆ - ಹಿಂ.ಅ ವರ್ಗ,3-ಚೌಳಹಿರಿಯೂರು - ಸಾಮಾನ್ಯ (ಮ),4-ಹೋಚಿಹಳ್ಳಿ - ಸಾಮಾನ್ಯ,5-ಯಗಟಿ - ಹಿಂ.ಅ ವರ್ಗ, 6-ಯಳ್ಳಂಬಳಸೆ - ಸಾಮಾನ್ಯ (ಮ),7-ಬಿಕ್ಕನೂರು - ಸಾಮಾನ್ಯ,8-ಎಮ್ಮೆದೊಡ್ಡಿ - ಎಸ್ಸಿ (ಮ),9-ದೊಡ್ಡಪಟ್ಟಣಗೆರೆ - ಸಾಮಾನ್ಯ, 10-ಮಲ್ಲೇಶ್ವರ - ಎಸ್ಸಿ (ಮ), 11-ಕುಂಕನಾಡು - ಸಾಮಾನ್ಯ, 12-ಪಂಚನಹಳ್ಳಿ - ಸಾಮಾನ್ಯ (ಮ), 13-ಕೆ.ಬಿದರೆ - ಸಾಮಾನ್ಯ, 14-ಸಿಂಗಟಗೆರೆ - ಎಸ್ಟಿ (ಮ), 15-ಬಿಳ್ಳೆಕೆರೆ - ಎಸ್ಸಿ, 16-ಸಖರಾಯಪಟ್ಟಣ - ಎಸ್ಸಿ, 17-ಜಿಗಣೇಹಳ್ಳಿ - ಸಾಮಾನ್ಯ, 18-ಮತಿಘಟ್ಟ - ಹಿಂ.ಬ ವರ್ಗ (ಮ), 19-ದೇವನೂರು - ಹಿಂ.ಅ ವರ್ಗ (ಮ), 20-ಎಸ್.ಬಿದರೆ - ಹಿಂ.ಅ ವರ್ಗ (ಮ)8.ಶೃಂಗೇರಿ ತಾಪಂ 7 ಕ್ಷೇತ್ರ

1-ಬೇಗಾರು - ಸಾಮಾನ್ಯ,2-ಅಡ್ಡಗದ್ದೆ - ಹಿಂ.ಅ ವರ್ಗ (ಮ),3-ಖುಷ್ಯಶೃಂಗಾಪುರ (ಮರ್ಕಲ್) - ಸಾಮಾನ್ಯ (ಮ),4-ಶೃಂಗೇರಿ ಗ್ರಾಮಾಂತರ - ಎಸ್ಸಿ (ಮ),5-ಮೆಣಸೆ - ಸಾಮಾನ್ಯ6-ನೆಮ್ಮಾರು - ಸಾಮಾನ್ಯ,7-ಕೆರೆ - ಎಸ್ಟಿ (ಮ).9.ಕೊಪ್ಪ ತಾಪಂ 9 ಕ್ಷೇತ್ರ

1-ಚಾವಲ್ಮನೆ - ಹಿಂ.ಅ ವರ್ಗ (ಮ),2-ಹರಿಹರಪುರ - ಸಾಮಾನ್ಯ (ಮ), 3-ಹರಂದೂರು - ಸಾಮಾನ್ಯ (ಮ),4-ಕೊಪ್ಪ ಗ್ರಾಮಾಂತರ - ಸಾಮಾನ್ಯ,5-ಬಿಂತ್ರವಳ್ಳಿ - ಸಾಮಾನ್ಯ,6-ಜಯಪುರ - ಎಸ್ಸಿ (ಮ), 7-ಗುಡ್ಡೆತೋಟ - ಎಸ್ಟಿ (ಮ), 8-ಹೇರೂರು - ಎಸ್ಸಿ, 9-ಹೊನ್ನಗುಂಡಿ - ಸಾಮಾನ್ಯ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಧಾರ್ ತಿದ್ದುಪಡಿಗಾಗಿ ಅಂಚೆ ಕಚೇರಿ ಎದುರು ಜನರ ಪರದಾಟ
ಕಲಬುರಗಿ: ಜಿಪಂ ಮೀಸಲಾತಿ ಪ್ರಕಟ