ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶವನ್ನು ಇಬ್ಭಾಗ ಮಾಡಿ ಪಾಕಿಸ್ತಾನ ಹುಟ್ಟು ಹಾಕಿದ್ದೇ ಕಾಂಗ್ರೆಸ್. ಈಗ ನಿಮಗೆ ತಾಕತ್ತಿದ್ದರೆ ದೇಶವನ್ನು ಇಬ್ಭಾಗ ಮಾಡಿ, ನೋಡೋಣ. ದೇಶ ವಿಭಜನೆಯು ದೇಶದ್ರೋಹದ ಮಾತಾಗುತ್ತದೆ. ತಕ್ಷಣವೇ ಡಿ.ಕೆ.ಸುರೇಶ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಲಿ ಎಂದರು. ಬಾಂಗ್ಲಾ ಮತ್ತು ಪಾಕಿಸ್ತಾನವನ್ನು ವಿಭಜಿಸಿ, ಅದೆಷ್ಟು ಅನುಭವಿಸುತ್ತಿದ್ದೇವೆಂಬುದು ಎಲ್ಲರಿಗೂ ಗೊತ್ತಿದೆ. ಅವುಗಳ ವಾಪಸ್ ಪಡೆಯುವ ಮಾನಸಿಕತೆಯಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದ್ದರೆ. ಸಂಸದ ಡಿ.ಕೆ.ಸುರೇಶ್ ತಮ್ಮ ಹೇಳಿಕೆ ಹಿಂಪಡೆದು, ದೇಶದ ಜನರಲ್ಲಿ ಕ್ಷಮೆಯಾಚಿಲಿ ಎಂದು ತಾಕೀತು ಮಾಡಿದರು.
ಕಾಂಗ್ರೆಸ್ಸಿನವರಿಗೆ ಒಡೆಯುವುದೇ ಕೆಲಸವಾಗಿದೆ. ಇದು ಕಾಂಗ್ರೆಸ್ಸಿನ ವಿಕೃತ ಸಂಸ್ಕತಿಯಾಗಿದೆ. ಓರ್ವ ಸಂಸದನಾಗಿ, ಜವಾಬ್ದಾರಿಯುತ ವ್ಯಕ್ತಿಯಾಗಿ ಡಿ.ಕೆ.ಸುರೇಶ ಹೀಗೆಲ್ಲಾ ಮಾತನಾಡಬಾರದು. ಮತಕ್ಕಾಗಿ ರಾಜ್ಯವನ್ನು ಒಡೆದ ಕಾಂಗ್ರೆಸ್‌ನವರು ಜಾತಿ ಜಾತಿಗಳ ಒಡೆಯುತ್ತಿದ್ದಾರೆ. ಬ್ರಿಟಿಷರಂತೆ ಒಡೆದು ಆಳುವ ನೀತಿ ಕಾಂಗ್ರೆಸ್ಸಿನದ್ದಾಗಿದೆ. ಬ್ರಿಟಿಷರ ನೀತಿಯನ್ನೇ ಕಾಂಗ್ರೆಸ್ಸಿನವರು ಮುಂದುವರಿಸುತ್ತಿದ್ದಾರೆ. ಅದೇ ಈಗ ಡಿಕೆಸು ಬಾಯಲ್ಲಿ ಬಂದಿದೆ ಎಂದು ಹರಿಹಾಯ್ದರು.ದೇಶ ಜೋಡಿಸುವುದನ್ನು ಬಿಟ್ಟು, ಉತ್ತರ ಭಾರತ ಮತ್ತು ದಕ್ಷಿಣ ಭಾರತವೆಂದು ಒಡೆಯಲು ಕಾಂಗ್ರೆಸ್‌ನವರು ಹೊರಟಂತಿದೆ. ದೇಶವನ್ನು ಒಡೆಯುವ ಮಾತುಗಳನ್ನಾಡಿದ ಸಂಸದ ಡಿ.ಕೆ.ಸುರೇಶರನ್ನು ಆ ಕ್ಷೇತ್ರದ ಜನರು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು. ಸಾವಿರಾರು ವರ್ಷದಿಂದಲೂ ಹಿಂದು ಆಚಾರ, ವಿಚಾರ ನಂಬಿಕೊಂಡು ಬಂದಿದ್ದೇವೆ. ಹನುಮ ಧ್ವಜವು ಯಾವುದೋ ಪಕ್ಷದ್ದಲ್ಲ. ಅದು ಧರ್ಮಧ್ವಜ. ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಧ್ವಜದ ಬಗ್ಗೆ ಮಾತನಾಡುವ ನೈತಿಕತೆಯೇ ಇಲ್ಲ. ಕಾಶ್ಮೀರದ ಲಾಲ್ ಚೌಕ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಉಗ್ರರು ದೇಶ ವಾಸಿಗಳಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾಗ ಕೈಲಾಗದವರಂತೆ ಸುಮ್ಮನಿದ್ದ ರಣಹೇಡಿಗಳು ಕಾಂಗ್ರೆಸ್‌ನ ನಾಯಕರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜ್ಞಾನವಾಪಿ ಹಿಂದು ಮಂದಿರ ಹೊರತು, ಮಸೀದಿಯಲ್ಲ
...........
ಲೋಕಸಭೆ ಚುನಾವಣೆಗೆ ರಾಜ್ಯದ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧಿಸಲ್ಲ. ಇದು ನಮಗೆ ಚುನಾವಣೆ ಮಾಡುವ ಸಮಯವಂತೂ ಅಲ್ಲ. ನರೇಂದ್ರ ಮೋದಿ ಗೆಲ್ಲಿಸಿ, ಭಾರತ ಉಳಿಸಿ ಅಭಿಯಾನ ಮಾಡುತ್ತೇವೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ನರೇಂದ್ರ ಮೋದಿ ಗೆಲ್ಲಿಸಿ, ಮತ್ತೊಮ್ಮೆ ಪ್ರಧಾನಿಯಾಗಿಸಲು ಮೋದಿಗೆ ಬೆಂಬಲಿಸಿ, ಅಭಿಯಾನ ಮಾಡುತ್ತೇವೆ.