ಪೋಲ್‌ವಾಲ್ಟ ಸ್ಪರ್ಧೆಯಲ್ಲಿ ದಿವ್ಯಾ ನಾಯ್ಕ ರಾಷ್ಟ್ರಮಟ್ಟಕ್ಕೆ ಆಯ್ಕೆ

KannadaprabhaNewsNetwork |  
Published : Nov 14, 2025, 03:30 AM IST
ಫೋಟೋ : ೧೩ಕೆಎಂಟಿ_ಎನ್‌ಒವಿ_ಕೆಪಿ೧  : ದಿವ್ಯಾ ನಾಯ್ಕ | Kannada Prabha

ಸಾರಾಂಶ

ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದ ಬಾಲಕಿಯರ ವಿಭಾಗದ ಪೋಲ್‌ವಾಲ್ಟ ಸ್ಪರ್ಧೆಯಲ್ಲಿ ೨.೪೦ ಮೀಟರ್ ಎತ್ತರ ಜಿಗಿದ ಪಟ್ಟಣದ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪಿಯು ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಚಂದ್ರಶೇಖರ ನಾಯ್ಕ ದ್ವಿತೀಯ ಸ್ಥಾನದೊಂದಿಗೆ ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.

ಕನ್ನಡಪ್ರಭ ವಾರ್ತೆ ಕುಮಟಾ

ಮೈಸೂರಿನಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದ ಬಾಲಕಿಯರ ವಿಭಾಗದ ಪೋಲ್‌ವಾಲ್ಟ ಸ್ಪರ್ಧೆಯಲ್ಲಿ ೨.೪೦ ಮೀಟರ್ ಎತ್ತರ ಜಿಗಿದ ಪಟ್ಟಣದ ನೆಲ್ಲಿಕೇರಿ ಸರ್ಕಾರಿ ಹನುಮಂತ ಬೆಣ್ಣೆ ಪಿಯು ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಚಂದ್ರಶೇಖರ ನಾಯ್ಕ ದ್ವಿತೀಯ ಸ್ಥಾನದೊಂದಿಗೆ ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ಕಾಲೇಜಿನ ಕ್ರೀಡಾ ಸಂಚಾಲಕ ನಾಗರಾಜ ನಾಯ್ಕ ತರಬೇತು ನೀಡಿದ್ದರು. ದಿವ್ಯಾಳ ಸಾಧನೆಗೆ ನೆಲ್ಲಿಕೇರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಾಸಕ ದಿನಕರ ಶೆಟ್ಟಿ, ಡಿಡಿಪಿಐ ಸತೀಷ ನಾಯ್ಕ, ಪ್ರಾಚಾರ್ಯ ಆರ್. ಎಚ್. ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ. ನೆರವಾಗಿ:

ತಾಲೂಕಿನ ಹೆಬೈಲ್ ಗ್ರಾಮದ ನಿವಾಸಿಯಾದ ದಿವ್ಯಾ ನಾಯ್ಕ, ಮನೆಯಲ್ಲಿ ಸಾಕಷ್ಟು ಬಡತನದ ನಡುವೆಯೂ ಪೋಲ್‌ವಾಲ್ಟ ಕ್ರೀಡೆಯಲ್ಲಿ ಪ್ರೌಢಶಾಲಾ ಹಂತದಿಂದಲೂ ರಾಜ್ಯಮಟ್ಟದ ಸಾಧನೆ ಮಾಡುತ್ತಾ ಬಂದಿದ್ದಾಳೆ. ಇವರಿಗೆ ದೂರದ ಕ್ರೀಡಾಕೂಟಗಳಿಗೆ ಬಿದಿರಿನ ಪೋಲ್ ಸಾಗಿಸುವುದೇ ಹರಸಾಹಸ ಎಂಬಂತಾಗಿದೆ. ಇತ್ತೀಚೆಗೆ ಮೈಸೂರಿನ ರಾಜ್ಯಮಟ್ಟದ ಕ್ರೀಡಾಕೂಟದ ಪೋಲ್‌ವಾಲ್ಟ ಸ್ಪರ್ಧೆಗಾಗಿ ತೆರಳಲು ರೈಲನ್ನೇರಿದ್ದ ವಿದ್ಯಾ ತನ್ನೊಂದಿಗೆ ೩ ಮೀಟರು ಉದ್ದದ ಬಿದಿರಿನ ಪೋಲ್‌ನ್ನು ತಂದಿದ್ದಳು. ರೈಲಿನಲ್ಲಿ ಬಿದಿರಿನ ಪೋಲ್ ತಂದಿದ್ದಕ್ಕೆ ರೈಲ್ವೆ ಅಧಿಕಾರಿಗಳು ದಿವ್ಯಾ ನಾಯ್ಕರಿಗೆ ₹೫೦೦ ದಂಡ ಹಾಕಿದ್ದರು. ಮುಂದಿನ ಹಂತದ ಹರಿಯಾಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಬಿದಿರಿನ ಪೋಲ್ ಬಳಸುವಂತಿಲ್ಲ. ಅದಕ್ಕೆ ಫೈಬರ್ ಪೋಲ್ ಕಡ್ಡಾಯ. ಅದನ್ನು ಖರೀದಿಸಲು ಸುಮಾರು ₹೧.೫ ಲಕ್ಷ ಅವಶ್ಯಕತೆ ಇದೆ. ಹಾಗೆಯೇ ಫೈಬರ್ ಪೋಲ್ ಮತ್ತು ಲ್ಯಾಂಡಿಂಗ್ ಬೆಡ್ ಖರೀದಿಸಿ ನಿರಂತರ ಅಭ್ಯಾಸ ಮಾಡಿ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಆಡಬೇಕೆಂಬ ದಿವ್ಯಾಳ ಕನಸಿಗೆ ಕ್ರೀಡಾಭಿಮಾನಿಗಳು ನೆರವಾಗಬಹುದಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ