ಕನ್ನಡಪ್ರಭ ವಾರ್ತೆ ಹೊನ್ನಾಳಿ/ಯಾದಗಿರಿ:
ಶಂಕ್ರಯ್ಯ ಅವರು ಮಗ ಹರ್ಷನೊಂದಿಗೆ ಅಮಾವಾಸ್ಯೆ ಪೂಜೆಗಾಗಿ ಗೂಡಂಗಡಿಗೆ ಬಂದಿದ್ದರು. ಬೈಕ್‌ಗೆ ಹಾಕಲೆಂದು ತಂದಿದ್ದ ಪೆಟ್ರೋಲ್ ಅಂಗಡಿಯಲ್ಲಿಯೇ ಇರಿಸಿದ್ದರು. ಪೂಜೆ ವೇಳೆ ಅಗರಬತ್ತಿ ಕಿಡಿ ಪೆಟ್ರೋಲ್‌ಗೆ ತಾಕಿ ಕ್ಷಣಾರ್ಧದಲ್ಲಿಯೇ ಇಡೀ ಅಂಗಡಿ ಹೊತ್ತಿ ಉರಿದಿದೆ.
ಬೆಂಕಿಯ ಜ್ವಾಲೆಯಿಂದ ತಂದೆ ಶಂಕ್ರಯ್ಯ ಅವರನ್ನು ಹೊರತರಲು ಹರ್ಷ ಹರಸಾಹಸ ಪಟ್ಟಿದ್ದು, ವಿಫಲನಾಗಿದ್ದಾನೆ. ಪರಿಣಾಮ ಶಂಕ್ರಯ್ಯ ಅಂಗಡಿಯಲ್ಲಿಯೇ ಬೆಂಕಿಗೆ ಆಹುತಿಯಾಗಿದ್ದಾರೆ.ಪಟಾಕಿ ಕಿಡಿಗೆ 300 ಕ್ವಿಂಟಲ್ ಹತ್ತಿ ಭಸ್ಮ:
ಕೆಂಭಾವಿ ಪಟ್ಟದ ಮಲ್ಲಯ್ಯ ಚನ್ನೂರ ಎಂಬುವರಿಗೆ ಸೇರಿದ ಗೋದಾಮಿನಲ್ಲಿ ಮುದಿಗೌಡ ಮಾಲಿಪಾಟೀಲ ಎಂಬ ರೈತರಿಗೆ ಸೇರಿದ ₹28 ಲಕ್ಷ ಮೌಲ್ಯದ, ಸುಮಾರು 300 ಕ್ವಿಂಟಲ್‌ನಷ್ಟು ಅಧಿಕ ಹತ್ತಿ ದಾಸ್ತಾನು ಶೇಖರಿಸಿಡಲಾಗಿತ್ತು. ಬೆಂಕಿ ಹೊತ್ತಿದ ಪರಿಣಾಮ ಹತ್ತಿ ಸಂಪೂರ್ಣ ಭಸ್ಮವಾಗಿದೆ.
ರಾಯಚೂರು ನಗರದ ಹೈದರಾಬಾದ್ ರಸ್ತೆಯಲ್ಲಿ ಪಟಾಕಿ ಸಿಡಿದು ಅಂಗಡಿಯಲ್ಲಿದ್ದ ಲ್ಯಾಪ್‌ಟಾಪ್, ಪ್ರಿಂಟರ್ ಸೇರಿದಂತೆ ವಿವಿಧ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸೋಮವಾರ ವರದಿಯಾಗಿದೆ. ರವಿಕಾಂತ್ ಎಂಬುವರಿಗೆ ಸೇರಿದ ಮಳಿಗೆಯಲ್ಲಿ ದುರ್ಘಟನೆ ಸಂಭವಿಸಿದ್ದು, ದೀಪಾವಳಿ ನಿಮಿತ್ತ ದೀಪ ಹಚ್ಚಿ ಪೂಜೆ ಸಲ್ಲಿಸಿದ್ದರು. ಪಟಾಕಿ ಸಿಡಿದು ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಅಂಗಡಿಯಲ್ಲಿ ಇದ್ದ ಲ್ಯಾಪ್‌ಟಾಪ್, ಪ್ರಿಂಟರ್, ಮೆಡಿಕಲ್ ಬಳಕೆಗಾಗಿ ಇಟ್ಟ ಹತ್ತಿ ಸುಟ್ಟುಹೋಗಿವೆ.