ಬೆಳಕಿನ ಹಬ್ಬ ದೀಪಾವಳಿ ಆಚರಣೆಗೆ ಬೆಲೆ ಏರಿಕೆ ಬಿಸಿ!

KannadaprabhaNewsNetwork |  
Published : Oct 31, 2024, 01:05 AM IST
ಯಾದಗಿರಿಯಲ್ಲಿ ಹಣತೆಗಳ ಖರೀದಿಯಲ್ಲಿ ತೊಡಗಿರುವ ಜನರು. | Kannada Prabha

ಸಾರಾಂಶ

Diwali festival of lights price hike hot!

- ಮನೆ ಮನೆಯಲ್ಲಿ ಸಡಗರ ಸಂಭ್ರಮದ ದೀಪಗಳ ಹಬ್ಬ ದೀಪಾವಳಿ ಆಚರಣೆ । ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದ ಜನತೆ

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಬೆಲೆಯೇರಿಕೆಯ ನಡುವೆಯೂ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ನಗರ ಹಾಗೂ ಗ್ರಾಮೀಣ ಪ್ರದೇಶದ ಜನತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು.

ಹೂವು, ಕುಂಬಳಕಾಯಿ, ಪೂಜಾ ಸಾಮಗ್ರಿ, ಪಟಾಕಿ ಸಹಿತ ದುಬಾರಿ ದರ ದೃಷ್ಟಿಯಲ್ಲಿಟ್ಟುಕೊಂಡು ಗ್ರಾಹಕರು ಬಜೆಟ್‌ಗೆ ಅನುಗುಣವಾಗಿ ಚೌಕಾಸಿ ನಡೆಸಿ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡು ಬಂದಿತು.

ನಗರದಲ್ಲಿ ಬೆಳಕಿನ ಹಬ್ಬದೀಪಾವಳಿ ಆಚರಣೆ ಹತ್ತಿರ ಬರುತ್ತಿದ್ದಂತೆ ಬೆಲೆ ಏರಿಕೆಯ ಬಿಸಿಯೂ ಹೆಚ್ಚಾಗುತ್ತಿದೆ. ದೀಪಾವಳಿ ಹಬ್ಬದ ಆಚರಣೆಗೆ ಮಾರುಕಟ್ಟೆ ಗಳಲ್ಲಿ ಜನರು ನೂಕುನುಗ್ಗಲಿನಲ್ಲಿಯೂ ನಿಂತು ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ.

ನಗರದ ಮಾರುಕಟ್ಟೆ, ಮಾರುತಿ ರೋಡ್, ಬಸವೇಶ್ವರ ವೃತ್ತ, ಹಳೆ ಬಸ್ ನಿಲ್ದಾಣ ರಸ್ತೆ ಯುದ್ದಕ್ಕೂ ಬೀದಿ ವ್ಯಾಪಾರಿಗಳು ಸೇಬು, ದಾಳಿಂಬೆ, ಸೀತಾಫಲ, ಕಿತ್ತಳೆ, ಚಿಕ್ಕು, ಪೇರಲ, ಮೋಸಂಬಿ, ಕಿವಿ, ಡ್ರ್ಯಾಗನ್, ಪಪ್ಪಾಯ ಹಣ್ಣುಗಳು, ತೆಂಗಿನಕಾಯಿ ಮತ್ತು ಹೂವುಗಳು, ಬಾಳೆ ದಿಂಡು ಬೂದುಗುಂಬಳಕಾಯಿಯ ವ್ಯಾಪಾರ ವಹಿವಾಟು ಭರ್ಜರಿಯಾಗಿತ್ತು.

ಮಣ್ಣಿನ ದೀಪಗಳಿಗೆ ಕುಂದಿದ ಬೇಡಿಕೆ: ದೀಪಾವಳಿ ಹಬ್ಬಕ್ಕಾಗಿ ಮಣ್ಣಿನಿಂದ ಮಾಡಿದ ವಿವಿಧ ರೀತಿಯ ಅಲಂಕಾರಿಕ ಮಣ್ಣಿನ ದೀಪಗಳನ್ನು ನಗರದ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಮಾರಾಟಕ್ಕಿಡಲಾಗಿದೆ. ಚಿಕ್ಕ ದೀಪಗಳು 15 ರು.ಗೆ ನಾಲ್ಕರಂತೆ ಮಾರಾಟವಾಗುತ್ತಿವೆ. ಆಕಾರಕ್ಕೆ ತಕ್ಕಂತೆ ಬೆಲೆ ಇದೆ. ಈ ಸಲ ಮಣ್ಣಿನ ದೀಪ ಖರೀದಿ ಮಾಡುವವರ ಸಂಖ್ಯೆ ಗಣನೀಯ ಇಳಿಮುಖವಾಗಿದೆ. ನೋಡಲು ಸುಂದರವಾಗಿ ಮತ್ತು ಮಿರಿ ಮಿರಿ ಮಿಂಚುವಂತೆ ಕಾಣುವ ಚೀನಿ ಮಣ್ಣಿನ ವಿವಿಧ ಬಗೆಯ ಹಣತೆಗಳನ್ನು ಜನ ಇಷ್ಟಪಡುತ್ತಾರೆ. ಮಣ್ಣಿನ ಹಣತೆ ಯಾರು ಕೇಳುತ್ತಿಲ್ಲ. ಬೇರೆ ಕಡೆಯಿಂದ ಸಾಲ ಮಾಡಿ ಹೆಚ್ಚಿನ ದೀಪಗಳನ್ನು ಖರೀದಿಸಿ ತಂದಿದ್ದೇವೆ. ಈಗಕೊಳ್ಳುವವರಿಲ್ಲದೆ ತಂದಿರುವ ದೀಪಗಳು ಹಾಗೆ ಉಳಿದಿದೆ. ಸಾಲ ಹೇಗೆ ತೀರಿಸುವುದು ಹೇಗೆ ಅಂತ ಚಿಂತೆಯಾಗಿದೆ ಎನ್ನುತ್ತಾರೆ ವ್ಯಾಪಾರಿ ಕುಂಬಾರ ಸಂಗಪ್ಪ.

ಹೂವು, ಹಣ್ಣು ಬೆಲೆ ಹೆಚ್ಚಳ:

ಬಾಳೆ ಹಣ್ಣು ಡಜನ್‌ 60 ರಿಂದ 80 ರು. ಸೇಬು ಒಂದಕ್ಕೆ 30 ರಿಂದ 35 ರು. ಮೋಸಂಬಿ, 25 ರು. ಹೆಚ್ಚಿನ ದರವಿದೆ. ಸೀತಾ ಫಲ 100 ರು. ಇಂದ 200 ರು.ಗೆ ಕೆಜಿಗೆ ಇದೆ. ಬಾಳೆ ದಿಂಡು ಜೋಡಿಗೆ 50 ರಿಂದ 150 ರು. ಒಂದು ಮೊಳ ಹೂವಿಗೆ 35 ರಿಂದ 45 ರು. ಇದೆ. ಒಂದು ಕೆಜಿ ಚೆಂಡು ಹೂವಕ್ಕೆ 150 ರುಪಾಯಿ ಇದೆ. ಸಾಮಾನ್ಯ ಹಾರ 70 ರಿಂದ 1000 ರು. ವಿವಿಧ ಬಗೆಯ ಹಾರ ಮತ್ತು ತೊಟ್ಟಿಲು, ದಂಡೆ ಬೇರೆ ಬೇರೆ ತರ ಇದೆ.

ಪಟಾಕಿ ವ್ಯಾಪಾರ ಜೋರು:

ದೀಪಾವಳಿ ಹಬ್ಬ ಒಂದು ವಾರ ಮುಂಚಿತವಾಗಿಯೇ ಪಟಾಕಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ದೀಪಾವಳಿ ಹಬ್ಬದಲ್ಲಿ ನಾಗರಿಕರು ಪಟಾಕಿಕೊಳ್ಳುವವರ ಸಂಖ್ಯೆ ಗಣನೀಯ ಹೆಚ್ಚಳ ಕಂಡಿದೆ. ಕಳೆದ ವರ್ಷಕ್ಕಿಂತಲೂ ಈ ವರ್ಷ ಪಟಾಕಿ ವ್ಯಾಪಾರ ಜೋರಾಗಿದೆ. ಪಟಾಕಿ ಬೆಲೆಯಲ್ಲಿ ಹೆಚ್ಚಳ ಕಂಡರೂ ಕೊಳ್ಳುವವರ ಸಂಖ್ಯೆ ಈ ವರ್ಷ ಜಾಸ್ತಿ ಆಗಿದೆ ಎನ್ನುತ್ತಾರೆ ಪಟಾಕಿ ವ್ಯಾಪಾರಿಯೊಬ್ಬರು. ಒಟ್ಟಿನಲ್ಲಿ ಬೆಲೆ ಏರಿಕೆ ನಡುವೆ ದೀಪಾವಳಿ ಹಬ್ಬದ ಖರೀದಿ ಜೋರಾಗಿ ನಡೆದಿರುವುದು ಕಂಡು ಬಂದಿತ್ತು.

ಅನುಮತಿ ಕಡ್ಡಾಯ:

ಪಟಾಕಿ ವ್ಯಾಪಾರ ಮಾಡುವರು ಕಡ್ಡಾಯವಾಗಿ ತಾಲೂಕ ಆಡಳಿತದಿಂದ ಅನುಮತಿ ಪಡೆಯಬೇಕು. ಜನನಿಬಿಡ ಪ್ರದೇಶದಲ್ಲಿ ಪಟಾಕಿ ವ್ಯಾಪಾರಕ್ಕೆ ಅವಕಾಶವಿಲ್ಲ. ನಗರದ ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗುವುದು. ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ದಿನಾಚರಣೆ ಆಚರಿಸುವುದರಿಂದ ಅಂದು ಬೆಳಗ್ಗೆ ಪಟಾಕಿ ವ್ಯಾಪಾರಸ್ಥರು ಬೆಳಗ್ಗೆ 8 ಗಂಟೆ ಯಿಂದ 10 ಗಂಟೆವರೆಗೆ ಯಾರು ಪಟಾಕಿ ಅಂಗಡಿಗಳನ್ನು ತೆಗೆಯಬಾರದು ಎಂದು ತಹಸಿಲ್ದಾರ್ ಉಮಾ ಕಾಂತ ಹೆಳ್ಳೆ ತಿಳಿಸಿದ್ದಾರೆ.

---

....ಕೋಟ್.....1: ಹಣ್ಣುಗಳ ಮಾರುವವರ ಸಂಖ್ಯೆ ಕಳೆದ ವರ್ಷಕ್ಕಿಂತ ಈ ವರ್ಷ ಜಾಸ್ತಿಯಾಗಿದೆ. ದೀಪಾವಳಿ ಹಬ್ಬಕ್ಕ ಹೋದ ವರ್ಷಕ್ಕಿಂತಲೂ ಈ ವರ್ಷ ಹಣ್ಣಿನ ವ್ಯಾಪಾರ ಜಾಸ್ತಿ ಇದೆ. ನಮ್ಮ ನಮ್ಮಲ್ಲಿ ಕಾಂಪಿಟೇಶನ್ ಇದೆ. ಗಂಟಿನ ಮೇಲೆ ಒಂದೆರಡು ರುಪಾಯಿ ಬಂದರೆ ವ್ಯಾಪಾರ ಮಾಡುತ್ತೇನೆ.

- ನಿಂಗಮ್ಮ ಹಣ್ಣು ಮಾಡುವ ವ್ಯಾಪಾರಿ.

--------

....ಕೋಟ್‌....2 : ದೀಪಾವಳಿ ಹಬ್ಬಕ್ಕೆ ಬೇಕಾದ ಕಿರಾಣಿ ವ್ಯಾಪಾರ ಈ ವರ್ಷ ಉತ್ತಮವಾಗಿದೆ. ಹಬ್ಬಕ್ಕೆ ಬ್ಯಾಳಿ, ಎಣ್ಣೆ, ಬೆಲ್ಲ, ಹಿಟ್ಟು ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಿದ್ದರೂ ಹಬ್ಬಕ್ಕೆ ಬೇಕಾದ ಸಾಮಗ್ರಿಕೊಳ್ಳುವವರ ಸಂಖ್ಯೆ ಜಾಸ್ತಿ ಇದೆ.

-ಜಿಲಾನಿ ಕಿರಾಣಿ ವ್ಯಾಪಾರಿ. ಶಹಾಪುರ.

------

30ವೈಡಿಆರ್‌8 : ಶಹಾಪುರದಲ್ಲಿ ದೀಪಾವಳಿ ಹಬ್ಬಕ್ಕೆಂದು ಮಾರುಕಟ್ಟೆಗೆ ಬಂದಿರುವ ರಂಗುರಂಗಿನ ಆಕಾಶಬುಟ್ಟಿಗಳು.

30ವೈಡಿಆರ್‌9 : ಯಾದಗಿರಿಯಲ್ಲಿ ಪಟಾಕಿ ಅಂಗಡಿಗಳ ಮುಂದೆ ಖರೀದಿಗೆ ಬಂದಿರುವ ಗ್ರಾಹಕರು.

30ವೈಡಿಆರ್‌10 : ಯಾದಗಿರಿಯಲ್ಲಿ ಹಣತೆಗಳ ಖರೀದಿಯಲ್ಲಿ ತೊಡಗಿರುವ ಜನರು.

PREV

Recommended Stories

ಏಕಾಏಕಿ ಟೊಮೆಟೋ ಕೇಜಿಗೆ ₹10ಕ್ಕೆ ಕುಸಿತ: ರೈತರು ಕಂಗಾಲು
ವಿಠಲಗೌಡ ತಲೆಬುರುಡೆ ತಂದ ಬಂಗ್ಲೆಗುಡ್ಡೆಯಲ್ಲಿ ಇಂದು ಮಹಜರು?