ಕನ್ನಡಪ್ರಭ ವಾರ್ತೆ ಮೂಲ್ಕಿ
ಗೋಮಾತೆಯನ್ನು ಪೂಜಿಸುವ ಮೂಲಕ ಸಕಲ ಇಷ್ಟಾರ್ಥಗಳು ನೆರವೇರಿ ಬದುಕಿನುದ್ದಕ್ಕೂ ಸನ್ಮಂಗಲವನ್ನು ಉಂಟುಮಾಡಲಿ, ನಾಡಿಗೆ, ಲೋಕಕ್ಕೆ ಕಲ್ಯಾಣ ಉಂಟುಮಾಡಲೆಂದು ಕಿನ್ನಿಗೋಳಿ ಯುಗಪುರುಷದ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.ವಿಶ್ವ ಹಿಂದು ಪರಿಷತ್ತು ಹಾಗೂ ಬಜರಂಗ ದಳ ಮೂಲ್ಕಿ ತಾಲೂಕು ಘಟಕದಿಂದ ಕಿನ್ನಿಗೋಳಿ ಮಹಮ್ಮಾಯಿ ಕಟ್ಟೆಯ ಬಳಿ ನಡೆದ ಗೋಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗ ದಳ ಮೂಲ್ಕಿ ತಾಲೂಕು ಘಟಕದ ಶ್ಯಾಮಸುಂದರ್, ಯಜ್ಞಾತ ಆಚಾರ್ಯ, ಅಶೋಕ ಕೆಮ್ಮಡೆ, ಶಶಿ ಲಿಂಗಪ್ಪಯ್ಯಕಾಡು, ಧನುಷ್ ಮೂಲ್ಕಿ, ಕೀರ್ತನ್ ಕೆರೆಕಾಡು, ಗೌತಮ್ ಹೊಸಕಾಡು, ಸುಬ್ರಹ್ಮಣ್ಯ ಶೆಣೈ, ರವಿಚಂದ್ರ, ರಾಜೇಶ್ ಎಸ್. ಕೋಡಿ, ಕಿಶೋರ್ ಶೆಟ್ಟಿ, ಕೇಶವ ಕೋಟ್ಯಾನ್, ಸುಮಿತ್ ಕುಮಾರ್, ಕಿಶೋರ್, ಸಂತೋಷ್ ಶೆಟ್ಟಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಹೆಬ್ಬಾರ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಿದರು.
ಕೆಮ್ಮಡೆ ಗೋಪೂಜೆ: ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಮೂಲ್ಕಿ ಪ್ರಖಂಡ ಗೋರಕ್ಷ ವಿಭಾಗದ ವತಿಯಿಂದ ಕೆಮ್ಮಡೆಯ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಮುಂಭಾಗದಲ್ಲಿ ಗೋಪೂಜೆ ಉತ್ಸವ ನಡೆಯಿತು.ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ವಿಶ್ವ ಹಿಂದು ಪರಿಷತ್ತಿನ ಕಾರ್ಯದರ್ಶಿ ಶ್ಯಾಮ್ ಸುಂದರ್ ಶೆಟ್ಟಿ, ಅಶೋಕ್ ಕೆ., ಆದರ್ಶ್ ಕೀರ್ತನ್, ತನುಷ್ ಕರ್ನಾಡ್, ರಾಜೇಶ್, ಶಶಿ ಲಿಂಗಪ್ಪಯಕಾಡು, ದುರ್ಗಾ ಪ್ರಸಾದ್, ಉಮೇಶ್ ಕೆ, ವಸಂತಿ, ರಾಮಕೃಷ್ಣ, ಶಶಿಕಲಾ, ಅಕ್ಷಯ್, ನಯನ, ಸುರೇಖಾ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಬಜರಂಗ ದಳ ಮೂಲ್ಕಿ ಪ್ರಖಂಡ ಗೋರಕ್ಷ ವಿಭಾಗ ವತಿಯಿಂದ ಏಳಿಂಜೆಯ ಶ್ರೀ ಲಕ್ಷ್ಮೀ ಜನಾರ್ದನ ಮಹಾಗಣಪತಿ ದೇವಸ್ಥಾನದ ಮುಂಭಾಗದಲ್ಲಿ ಗೋಪೂಜೆ ಉತ್ಸವ ನಡೆಯಿತು. ಕಿನ್ನಿಗೋಳಿಯ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ದೇವಳದ ಅರ್ಚಕರಾದ ಗಣೇಶ್ ಭಟ್, ವರುಣ್ ಭಟ್ ಏಳಿಂಜೆ, ವಿಶ್ವ ಹಿಂದು ಪರಿಷತ್ತಿನ ಕಾರ್ಯದರ್ಶಿ ಶ್ಯಾಮ್ ಸುಂದರ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಏಳಿಂಜೆ, ಸುರೇಶ್ ಎಂ. ಕೋಟ್ಯಾನ್ ಪಟ್ಟೆ, ನಾರಾಯಣ ಶೆಟ್ಟಿ, ಬಾಬು ಪೂಜಾರಿ, ಗಂಗಾಧರ್, ಅಶೋಕ್ ಕೆ., ತನುಷ್, ರಾಜೇಶ್, ಶಶಿ ಲಿಂಗಪ್ಪಯ್ಯಕಾಡು, ಉಮೇಶ್ ಕೆ. ಮತ್ತಿತರರು ಉಪಸ್ಥಿತರಿದ್ದರು.