ತಾಯಿಯ ಅಮೃತವನ್ನು ನವಜಾತ ಶಿಶುಗಳಿಗೆ ತಪ್ಪಿಸಬೇಡಿ

KannadaprabhaNewsNetwork |  
Published : Aug 08, 2026, 02:15 AM IST
೬ಶಿರಾ೨: ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದ ಐದನೇ ಬ್ಲಾಕ್ ಸಂತೇದಿಬ್ಬ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸುಸ್ತಿರ ಜೀವನದ ಆರಂಭ ಶಕ್ತಿವರ್ಧಕ ಎದೆಹಾಲು ಎಂಬ ಧ್ಯೇಯ ವಾಕ್ಯದೊಂದಿಗೆ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಡಾ. ಎಸ್ ಸಿದ್ದರಾಮಣ್ಣ ಉದ್ಘಾಟಿಸಿದರು. | Kannada Prabha

ಸಾರಾಂಶ

ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಎಂಬುದು ಅಮೃತ ಸಮಾನವಾಗಿದ್ದು ಹುಟ್ಟಿದ ಆರು ತಿಂಗಳವರೆಗೆ ಕಡ್ಡಾಯವಾಗಿ ಮಗುವಿಗೆ ಎದೆಹಾಲು ಕುಡಿಸಬೇಕು ಅದರಿಂದ ಮಗುವಿನ ಪೌಷ್ಟಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ. ಎಸ್ ಸಿದ್ದರಾಮಣ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲು ಎಂಬುದು ಅಮೃತ ಸಮಾನವಾಗಿದ್ದು ಹುಟ್ಟಿದ ಆರು ತಿಂಗಳವರೆಗೆ ಕಡ್ಡಾಯವಾಗಿ ಮಗುವಿಗೆ ಎದೆಹಾಲು ಕುಡಿಸಬೇಕು ಅದರಿಂದ ಮಗುವಿನ ಪೌಷ್ಟಿಕ ಬೆಳವಣಿಗೆಗೆ ಸಹಾಯಕವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಡಾ. ಎಸ್ ಸಿದ್ದರಾಮಣ್ಣ ಹೇಳಿದರು.

ಅವರು ಶಿರಾ ತಾಲೂಕು ಬುಕ್ಕಾಪಟ್ಟಣ ಗ್ರಾಮದ ಐದನೇ ಬ್ಲಾಕ್ ಸಂತೇದಿಬ್ಬ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರಿತ್ಯ ಹಾಗೂ ಪೌಷ್ಟಿಕ ಆಹಾರದ ಕೊರತೆಯಿಂದಾಗಿ ಮತ್ತು ಅತಿಯಾದ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಗುಣಮಟ್ಟದ ಆಹಾರ ಎಲ್ಲರಿಗೂ ಸಿಗುತ್ತಿಲ್ಲ. ಅದರಲ್ಲಿಯೂ ಸಹ ನವಜಾತ ಶಿಶುಗಳಿಗೆ ತಾಯಿಯ ಎದೆಹಾಲು ಅಮೃತ ಸಮಾನವಾದದು, ಅದರಿಂದ ಮಕ್ಕಳನ್ನು ವಂಚಿಸುವುದು ಮಹಾ ಪಾಪವೇ ಸರಿ, ಹುಟ್ಟಿದ ಮಗುವಿಗೆ ಆರು ತಿಂಗಳವರೆಗೆ ಕೇವಲ ತಾಯಿಯ ಎದೆ ಹಾಲನ್ನು ಕುಡಿಸಿ ಬೆಳೆಸಬೇಕು. ತಾಯಿಯ ಎದೆಹಾಲಿನಲ್ಲಿ ಸಿಗುವ ಪೌಷ್ಟಿಕಾಂಶ ಬೇರೆ ಯಾವುದೇ ರೀತಿಯ ಕೃತಕ ಆಹಾರಗಳಲ್ಲಿ ಸಿಗುವುದಿಲ್ಲ. ಮಕ್ಕಳ ಶ್ರೇಯೋಭಿಲಾಷಿಗಾಗಿ ಮಗುವಿನ ತಾಯಂದಿರು ನೆನೆಸಿದ ಕಾಳುಗಳನ್ನು ಹಣ್ಣು ಹಂಪಲುಗಳನ್ನು ಹಾಗೂ ಅಂಗನವಾಡಿಗಳಲ್ಲಿ ನೀಡುವ ಎಲ್ಲಾ ರೀತಿಯ ಪೌಷ್ಟಿಕಾಂಶಯುಕ್ತ ಆಹಾರ ವಸ್ತುಗಳನ್ನು ಸೇವಿಸುವ ಮೂಲಕ ಮಗುವಿನ ಆರೋಗ್ಯದ ಕಡೆಗೆ ಗಮನಹರಿಸಬೇಕು ಎಂದು ತಿಳಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹರಿಪ್ರಸಾದ್ ಸಿ ಅವರು ಮಾತನಾಡಿದರು. ಈ ವೇಳೆ ಶರಾವತಿ, ಕಮಲಮ್ಮ ಡಿಜಿ, ಯಶೋಧಾ, ಮುದ್ದಮ್ಮ,ಉಮೇಶ್ ಆರ್, ಅಂಗನವಾಡಿ ಕಾರ್ಯಕರ್ತೆಯರಾದ ಸುಧಾ ಜಿ, ಶಿಲ್ಪಾ, ಶೈಲಮ್ಮ, ಮಂಜುರುನ್ನೀಸಾ, ಮಂಗಳಗೌರಮ್ಮ, ಕವಿತಾ, ಗೀತಾ, ಸರೋಜಾ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗುತ್ತಿಗೆ ಉದ್ಯೋಗಕ್ಕಾಗಿ ಹರಿದು ಬಂದ ಉದ್ಯೋಗಾಕಾಂಕ್ಷಿಗಳು
ಮೊಬೈಲ್ ದುರ್ಬಳಕೆಯಿಂದ ಹಾಳಾಗಬೇಡಿ