ರಾಮನಗರ: ವೈದ್ಯರ ಸಲಹಾ ಚೀಟಿ ಇಲ್ಲದೆ ಯಾವುದೇ ಗ್ರಾಹಕರಿಗೆ ಔಷಧಿ ನೀಡಬಾರದು ಎಂದು ಔಷಧ ಮಳಿಗೆ ಮಾರಾಟಗಾರರಿಗೆ ಪುರ ವೃತ್ತ ಆರಕ್ಷಕ ನಿರೀಕ್ಷಕ ಕೃಷ್ಣ ಸೂಚನೆ ನೀಡಿದರು.
ವೈದ್ಯರ ಸಲಹಾ ಚೀಟಿ ಇಲ್ಲದೆ ಗ್ರಾಹಕರಿಗೆ ಮತ್ತು ಕೊಳ್ಳುವವರಿಗೆ ಔಷಧಿ ವಿತರಣೆ ಮಾಡಬಾರದು. ಆ ರೀತಿ ಪಡೆಯುವವರ ಬಗ್ಗೆ ನೀವು ಹೆಚ್ಚು ಗಮನಹರಿಸಿ ನಮ್ಮ ಗಮನಕ್ಕೆ ತರಬೇಕು. ಅಮಲು ಬರಿಸುವ ಕಾನೂನು ಬಾಹ್ಯ ಔಷಧಗಳನ್ನು ಮಾರಾಟ ಮಾಡಕೂಡದು, ಅದು ಅಪರಾಧವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪುರ ಠಾಣೆ ಸಬ್ ಇನ್‌ಸ್ಪೆಕ್ಟರ್ ತನ್ವಿರ್ ಹುಸೇನ್ ಮಾತನಾಡಿ, ತಮ್ಮ ತಮ್ಮ ಮೆಡಿಕಲ್ ಸ್ಟೋರ್‌ಗಳ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ, ಇದರಿಂದ ಮಾದಕ ವ್ಯಸನಿ ಗಳನ್ನು ಪತ್ತೆ ಹಚ್ಚಲು ನೆರವಾಗಲಿದೆ. ತಾವುಗಳು ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ತಡೆಗಟ್ಟುವಲ್ಲಿ ನಮ್ಮ ಜೊತೆ ಕೈ ಜೋಡಿಸಿ ಎಂದು ಕೃಷ್ಣ ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಔಷಧ ನಿಯಂತ್ರಣಾಧಿಕಾರಿ ಮಮತಾ, ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಕೃಷ್ಣ ಸೇರಿದಂತೆ ನಗರದ ಔಷಧಿ ವ್ಯಾಪಾರಿಗಳು ಹಾಜರಿದ್ದರು.
25ಕೆಆರ್ ಎಂಎನ್ 3.ಜೆಪಿಜಿರಾಮ ನಗರ ಪುರ ಪೋಲೀಸ್ ಠಾಣೆಯಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಮಾರಾಟ ಮತ್ತು ಸೇವನೆ ವಿರೋಧಿ ದಿನ ಜಾಗೃತಿ ಜಾಥಾಗೆ ಆರಕ್ಷಕ ನಿರೀಕ್ಷಕ ಕೃಷ್ಣ ಚಾಲನೆ ನೀಡಿದರು.