ಗುಳೆ ಹೋಗಬೇಡಿ, ನಿಮ್ಮೂರಲ್ಲೇ ಕೆಲಸ ಮಾಡಿ: ಫಾಜಿಲ್ ಅಹಮದ್

KannadaprabhaNewsNetwork |  
Published : Aug 07, 2026, 02:45 AM IST
ಹರಪನಹಳ್ಳಿ ತಾಲೂಕಿನ ಚಿರಸ್ತಹಳ್ಳಿ ಗ್ರಾಪಂ ವ್ಯಾಪ್ತಿಯ ಶಿವಪುರ ತಾಂಡದಲ್ಲಿ 'ಗುಳೆ ಹೋಗಬೇಡಿ, ನಿಮ್ಮೂರಲ್ಲೇ ಕೆಲಸ ಮಾಡಿ  ಜಾಗೃತಿ ಅಭಿಯಾನ ನಡೆಸಲಾಯಿತು. | Kannada Prabha

ಸಾರಾಂಶ

ಹರಪನಹಳ್ಳಿ ತಾಲೂಕಿನ ಚಿರಸ್ತಹಳ್ಳಿ ಗ್ರಾಪಂ ವ್ಯಾಪ್ತಿಯ ಶಿವಪುರ ತಾಂಡಾದಲ್ಲಿ 'ಗುಳೆ ಹೋಗಬೇಡಿ, ನಿಮ್ಮೂರಲ್ಲೇ ಕೆಲಸ ಮಾಡಿ' ಜಾಗೃತಿ ಅಭಿಯಾನ ನಡೆಯಿತು.

ಹರಪನಹಳ್ಳಿ: ಗ್ರಾಮೀಣ ಭಾಗದ ಶ್ರಮಿಕ ಕುಟುಂಬಗಳು, ತಾಂಡಾದ ಜನರು, ರೈತ ಕೂಲಿಕಾರರು ಉದ್ಯೋಗ ಮತ್ತು ಜೀವನೋಪಾಯವನ್ನು ಅರಸಿ ಮಹಾನಗರಗಳಿಗೆ, ನೆರೆ ರಾಜ್ಯಗಳಿಗೆ ಕುಟುಂಬ ಸಮೇತ ಗುಳೆ ಹೋಗುವುದನ್ನು ಸಂಪೂರ್ಣವಾಗಿ ತಡೆಯುವುದು ವಿಬಿ ಜಿ ರಾಮ್ ಜಿ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದು ವಿಜಯನಗರ ಜಿಪಂನ ಡಿಐಇಸಿ ಸಂಯೋಜಕ ಫಾಜಿಲ್ ಅಹಮದ್ ಹೇಳಿದರು.

ತಾಲೂಕಿನ ಚಿರಸ್ತಹಳ್ಳಿ ಗ್ರಾಪಂ ವ್ಯಾಪ್ತಿಯ ಶಿವಪುರ ತಾಂಡಾದಲ್ಲಿ ವಿಜಯನಗರ ಜಿಪಂ ಹಾಗೂ ತಾಪಂ, ಗ್ರಾಪಂ ಆಶ್ರಯದಲ್ಲಿ ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್‌ ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆಯ ಐಇಸಿ ಚಟುವಟಿಕೆಯಡಿ ಹಮ್ಮಿಕೊಂಡಿದ್ದ ''''ಗುಳೆ ಹೋಗಬೇಡಿ, ನಿಮ್ಮೂರಲ್ಲೇ ಕೆಲಸ ಮಾಡಿ'''' ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ಥಳೀಯವಾಗಿಯೇ ಕೆಲಸದ ಅಭಯ: ಅಧಿಕೃತ ಮಾಹಿತಿಯ ಪ್ರಕಾರ, ಹರಪನಹಳ್ಳಿ ತಾಲೂಕಿನಲ್ಲಿ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಿಂದ ಗುರುತಿಸಲ್ಪಟ್ಟ ಒಟ್ಟು 51 ತಾಂಡಾಗಳಿವೆ. ಈ ಪೈಕಿ ಬಹುತೇಕ ಎಲ್ಲ ತಾಂಡಾಗಳಲ್ಲಿ ವಾಸಿಸುತ್ತಿರುವ ಬಂಜಾರ ಸಮುದಾಯದ ಕುಟುಂಬಗಳ ಅರ್ಹರಿಗೆ ಸರ್ಕಾರದ ವತಿಯಿಂದ ವಿಬಿ ಜಿ ರಾಮ್ ಜಿ ಯೋಜನೆಯಡಿ ಈಗಾಗಲೇ ಉದ್ಯೋಗ ಚೀಟಿ ವಿತರಿಸಲಾಗಿದೆ. 51 ತಾಂಡಾಗಳ ಪ್ರತಿಯೊಬ್ಬ ಜಾಬ್ ಕಾರ್ಡ್‌ದಾರರಿಗೂ ಸ್ವಗ್ರಾಮ ಅಥವಾ ತಾಂಡಾಗಳಲ್ಲೇ ಆದ್ಯತೆಯ ಮೇರೆಗೆ ಶೇ. 100ರಷ್ಟು ಕೆಲಸ ಒದಗಿಸಲು ತಾಪಂ ಮತ್ತು ಗ್ರಾಪಂ ಹಂತದಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಅದರಂತೆ ಹರಪನಹಳ್ಳಿ ತಾಪಂ ಇಒ ಹಾಗೂ ಸಹಾಯಕ ನಿರ್ದೆಶಕರ ನೇತೃತ್ವದ ತಂಡವು ನಿರಂತರವಾಗಿ ಹಂತ ಹಂತದಲ್ಲಿ ಕೆಲಸ ನೀಡಲು ಎಲ್ಲ ರೀತಿಯಲ್ಲೂ ಸಜ್ಜಾಗಿದೆ ಎಂದು ಮಾಹಿತಿ ನೀಡಿದರು.

ಹರಪನಹಳ್ಳಿ ತಾಪಂನ ಐಇಸಿ ಸಂಯೋಜಕ ಕೆ. ವಸಿಗೇರಪ್ಪ ಚಾಗನೂರು ಮಾತನಾಡಿ, ಜಾಬ್ ಕಾರ್ಡ್‌

ಹೊಂದಿರುವ ಪ್ರತಿಯೊಂದು ಗ್ರಾಮೀಣ ಕುಟುಂಬವೂ ವರ್ಷದಲ್ಲಿ 125 ದಿನ ಕೆಲಸ ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿದೆ. ಬೇರೆ ನಗರ ಅಥವಾ ರಾಜ್ಯಗಳಿಗೆ ವಲಸೆ ಹೋಗಿ ಕಷ್ಟ-ನಷ್ಟಗಳನ್ನು ಅನುಭವಿಸುವ ಅಗತ್ಯವಿಲ್ಲ. ತಾಂಡಾ ನಿವಾಸಿಗಳು ತಮ್ಮ ಸ್ವಂತ ಊರಿನಲ್ಲಿ ಲಭ್ಯವಿರುವ ಆಸ್ತಿ ಸೃಷ್ಟಿಸುವ ಕಾಮಗಾರಿಗಳಾದ ಜಲಸಂರಕ್ಷಣೆ, ವಿವಿಧ ಅಭಿವೃದ್ಧಿ ಕಾಮಗಾರಿಗಳು ಹಾಗೂ ಕೆರೆ ಪುನಶ್ಚೇತನ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆರ್ಥಿಕ ಸ್ವಾವಲಂಬನೆ ಮತ್ತು ಗೌರವಾನ್ವಿತ ಜೀವನ ಕಂಡುಕೊಳ್ಳಬೇಕು ಎಂದು ಹೇಳಿದರು.

ಜಾಗೃತಿ ಅಭಿಯಾನದಲ್ಲಿ ಚಿರಸ್ತಹಳ್ಳಿ ಗ್ರಾಪಂ ತಾಂಡಾ ರೋಜ್ಗಾರ್ ಮಿತ್ರ ರವಿನಾಯ್ಕ, ನೀರಗಂಟಿ, ಕಾಯಕ ಬಂಧುಗಳು, ತಾಂಡಾದ ಶ್ರಮಿಕರು ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಲ್ಮಾಡಿ ಚರ್ಚ್ ವಾರ್ಷಿಕೋತ್ಸವ: ನೊವೆನಾ ಪ್ರಾರ್ಥನೆಗೆ ಚಾಲನೆ
ಪಿಂಚಣಿ ರದ್ದು, ವಿಧಾನಸಭೆಯಲ್ಲಿ ಪ್ರಸ್ತಾಪ: ಯಶ್‌ಪಾಲ್ ಸುವರ್ಣ