ವೈದ್ಯರ ಸಲಹೆ ಇಲ್ಲದೇ ಆಂಟಿಬಯೋಟಿಕ್‌ ಔಷಧಿ ಬಳಸದಿರಿ

KannadaprabhaNewsNetwork |  
Published : Nov 19, 2026, 01:45 AM IST
ಕ್ಯಾಪ್ಷನ18ಕೆಡಿವಿಜಿ31, 32 ದಾವಣಗೆರೆಯಲ್ಲಿಂದು ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹ ಅಂಗವಾಗಿ ಬೃಹತ್ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು. | Kannada Prabha

ಸಾರಾಂಶ

ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹ-2026ರ ಅಂಗವಾಗಿ ನಗರದ ಜಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸುಟಿಕಲ್ ಸೈನ್ಸಸ್ ಅಂಡ್ ರಿಸರ್ಚ್ ವತಿಯಿಂದ ಬುಧವಾರ ಆಂಟಿಬಯೋಟಿಕ್ ಔಷಧಿಗಳ ದುರ್ಬಳಕೆ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಬೃಹತ್ ಜಾಗೃತಿ ಜಾಥಾ ನಡೆಯಿತು.

- ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹದ ಜಾಥಾದಲ್ಲಿ ಡೆಪ್ಯೂಟಿ ಡ್ರಗ್ ಕಂಟ್ರೋಲರ್ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹ-2026ರ ಅಂಗವಾಗಿ ನಗರದ ಜಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸುಟಿಕಲ್ ಸೈನ್ಸಸ್ ಅಂಡ್ ರಿಸರ್ಚ್ ವತಿಯಿಂದ ಬುಧವಾರ ಆಂಟಿಬಯೋಟಿಕ್ ಔಷಧಿಗಳ ದುರ್ಬಳಕೆ ಮತ್ತು ಅದರಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತ ಬೃಹತ್ ಜಾಗೃತಿ ಜಾಥಾ ನಡೆಯಿತು.

ಜಿಲ್ಲಾ ಔಷಧ ನಿಯಂತ್ರಣ ಇಲಾಖೆ ಹಾಗೂ ದಾವಣಗೆರೆ ಔಷಧ ತಜ್ಞರ ಸಂಘದ ಸಹಯೋಗದೊಂದಿಗೆ ನಡೆದ ''''ಎಎಂಆರ್ ಜಾಗೃತಿ ನಡಿಗೆ''''ಗೆ ನಗರದ ಗುಂಡಿ ಮಹಾದೇವಪ್ಪ ವೃತ್ತದಿಂದ ಆರಂಭಗೊಂಡು ಸಿಜಿ ಆಸ್ಪತ್ರೆ ರಸ್ತೆ ಮುಖಾಂತರ ಸಾಗುತ್ತಾ ವಿದ್ಯಾರ್ಥಿ ಭವನ ರಸ್ತೆ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಸಾಗಿ ಕೊನೆಗೆ ಜಯದೇವ ವೃತ್ತದಲ್ಲಿ ಸಮಾರೋಪಗೊಂಡಿತು.

ಜಯದೇವ ವೃತ್ತದಲ್ಲಿ ನಡೆದ ಜಾಥಾ ಸಮಾರೋಪದಲ್ಲಿ ಡೆಪ್ಯೂಟಿ ಡ್ರಗ್ ಕಂಟ್ರೋಲರ್ ಡಾ.ಖಾಲಿದ್ ಅಹಮದ್ ಖಾನ್ ಮಾತನಾಡಿ, ವೈದ್ಯರ ಸಲಹೆಯಿಲ್ಲದೆ ಆಂಟಿಬಯೋಟಿಕ್‌ಗಳನ್ನು ಬಳಸುವುದರಿಂದ ದೇಹದಲ್ಲಿ ರೋಗಾಣುಗಳು ಔಷಧಿಗಳಿಗೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತವೆ. ಇದರಿಂದ ಮುಂದಿನ ದಿನಗಳಲ್ಲಿ ಯಾವುದೇ ಔಷಧಿಗಳು ಕೆಲಸ ಮಾಡದಂತಹ ಗಂಭೀರ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಸಿದರು.

ಫಾರ್ಮಸಿಸ್ಟ್‌ಗಳು ಮತ್ತು ಔಷಧ ವ್ಯಾಪಾರಿಗಳು ವೈದ್ಯರ ಚೀಟಿಯಿಲ್ಲದೇ ಆಂಟಿಬಯೋಟಿಕ್ ಹಾಗೂ ಶೆಡ್ಯೂಲ್ ಎಚ್/ಎಚ್1 ಔಷಧಿಗಳನ್ನು ಮಾರಾಟ ಮಾಡಬಾರದು ಎಂದು ಅಸೋಸಿಯೇಷನ್ ಪದಾಧಿಕಾರಿಗಳು ಮನವಿ ಮಾಡಿದರು.

ಜಿಎಂಐಪಿಎಸ್‌ಆರ್‌ನ ಪ್ರಾಂಶುಪಾಲ ಡಾ.ಗಿರೀಶ್ ಬೋಳಕಟ್ಟಿ ಮಾತನಾಡಿ, ಸಾರ್ವಜನಿಕರು ಸಣ್ಣಪುಟ್ಟ ಕಾಯಿಲೆಗಳಿಗೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೇ, ವೈದ್ಯರ ಅಧಿಕೃತ ಚೀಟಿ ಇಲ್ಲದೇ ಯಾವುದೇ ಕಾರಣಕ್ಕೂ ಆಂಟಿಬಯೋಟಿಕ್ ಔಷಧಿಗಳನ್ನು ಸೇವಿಸಬಾರದು ಎಂದು ತಿಳಿಸಿದರು.

ಜಾಥಾದಲ್ಲಿ ಜಿ.ಎಂ. ಫಾರ್ಮಸಿ ಕಾಲೇಜು ಉಪ ಪ್ರಾಂಶುಪಾಲ ಡಾ. ಜೆ.ತಿಮ್ಮಾಶೆಟ್ಟಿ, ಸಹಾಯಕ ಪ್ರಾಧ್ಯಾಪಕರಾದ ಕೇಶವ ಕೆ.ಎಸ್, ಡಾ.ಮೊಹಮ್ಮದ್ ಯಾಸೀನ್, ಮೊಹಮ್ಮದ್ ಯೂಸುಫ್ ಮಲಿಕ್ ದಮಾನಿ, ಸಹಾಯಕ ಔಷಧ ನಿಯಂತ್ರಕರಾದ ಪ್ರಸನ್ನ, ಗೀತಾ, ಜಿಲ್ಲಾ ಕೆಮಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಪ್ರಕಾಶ್, ಕಾರ್ಯದರ್ಶಿ ಪ್ರಸನ್ನ ಕುಮಾರ, ದಾವಣಗೆರೆ ಜಿಲ್ಲಾ ಕೆಮಿಸ್ಟ್ ಮತ್ತು ಡ್ರಗ್ಗಿಸ್ಟ್ ಅಸೋಸಿಯೇಷನ್, ಔಷಧ ನಿಯಂತ್ರಣ ಇಲಾಖೆ ಸೇರಿದಂತೆ ನೂರಾರು ಫಾರ್ಮಸಿಸ್ಟ್‌ಗಳು, ಜಿ.ಎಂ. ಇನ್‌ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಹಾಗೂ ವಿವಿಧ ಫಾರ್ಮಸಿ ಕಾಲೇಜು, ಎಸ್.ಸಿ.ಎಸ್. ಫಾರ್ಮಸಿ ಕಾಲೇಜಿನ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

- - -

-18ಕೆಡಿವಿಜಿ31:

ದಾವಣಗೆರೆಯಲ್ಲಿ ಬುಧವಾರ ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹ ಅಂಗವಾಗಿ ಬೃಹತ್ ಜಾಗೃತಿ ಜಾಥಾ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಡುಪಿ: ಕಿಶೋರ ಯಕ್ಷಗಾನ ಸಂಭ್ರಮಕ್ಕೆ ಚಾಲನೆ
ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಿ