ಕನ್ನಡಪ್ರಭ ವಾರ್ತೆ ಸಿರಿಗೆರೆ
ಸಿರಿಗೆರೆ ಸಮೀಪದ ಮುತ್ತುಗದೂರು ಗ್ರಾಮದಲ್ಲಿ 1 ಕೋಟಿ 30 ಲಕ್ಷ ರು. ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ಸಲ್ಲಿಸಿದ ನಂತರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.
ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರು ನೀರನ್ನು ಕಾಪಾಡುವುದು ಬಹಳ ಅವಶ್ಯಕವಾಗಿದೆ. ನೀವು ನೀರನ್ನು ಕಾಪಾಡಿದರೆ ಬೋರ್‌ವೆಲ್‌ಗಳಲ್ಲಿ ನೀರು ಉಳಿಯುತ್ತದೆ. ಇದರಿಂದ ನಿಮ್ಮ ಕೃಷಿಯ ಬದುಕು ಸಾಗುತ್ತದೆ ಎಂದರು.ರೈತರ ಹಿತ ಕಾಪಾಡಲೆಂದೇ ಹಿರೇಕಂದವಾಡಿ, ಹಿರೇಎಮ್ಮಿಗನೂರು, ಮಲ್ಲಾಡಿಹಳ್ಳಿ, ಹನುಮಲಿ, ತುಪ್ಪದಹಳ್ಳಿ, ಎನ್.ಜಿ.ಹಳ್ಳಿ, ತಾಳ್ಯ, ಟಿ.ನುಲೇನೂರು ಹೀಗೆ ಹದಿನೇಳು ಕಡೆ ಹೊಸದಾಗಿ ವಿದ್ಯುತ್ ಪವರ್ ಸ್ಟೇಷನ್ ನಿರ್ಮಿಸಲಾಗುತ್ತಿದೆ.
ಚುನಾವಣೆಯಲ್ಲಿ ಮತ ಹಾಕುವುದು ಒಂದು ಸೆಕೆಂಡಿನ ಕೆಲಸ. ಯಾರು ನಿಮ್ಮ ಕಷ್ಟ-ಸುಖಗಳಿಗೆ ಸ್ಪಂದಿಸಿ ಒಳ್ಳೆಯದು ಮಾಡುತ್ತಾರೆ ಎನ್ನುವುದನ್ನು ಆಲೋಚಿಸಿ ನಂತರ ಓಟು ನೀಡಿ. ಯಾರಿಂದಲೂ ಅರ್ಜಿ ಪಡೆದಿಲ್ಲ. 493 ಹಳ್ಳಿ ಜನರು ನನ್ನ ಕುಟುಂಬದವರೆಂದು ತಿಳಿದು ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇನೆ. ನಾನು ಕೂಡ ರೈತ. ಹಾಗಾಗಿ ರೈತರ ಸಮಸ್ಯೆಗಳೇನೆಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ. ಇನ್ನು ಐವತ್ತು ವರ್ಷಗಳ ಕಾಲ ಕರೆಂಟ್ ಮಿಣಿಕ್ ಅನ್ನಬಾರದು. ದಿನಕ್ಕೆ ಹತ್ತು ಗಂಟೆಗಳ ಕಾಲ ವಿದ್ಯುತ್ ಪೂರೈಸುತ್ತೇನೆಂದು ಶಾಸಕ ಡಾ.ಎಂ.ಚಂದ್ರಪ್ಪ ಭರವಸೆ ನೀಡಿದರು.