ವೈದ್ಯರು ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು : ತಮ್ಮಯ್ಯ

KannadaprabhaNewsNetwork |  
Published : Jul 01, 2025, 12:47 AM IST
ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಯಲ್ಲಿ ನರ ವಿಜ್ಞಾನ ವಿಭಾಗದ ಕೇಂದ್ರವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಸೋಮವಾರ ಉದ್ಘಾಟಿಸಿದರು. ಗಾಯತ್ರಿ ಶಾಂತೇಗೌಡ. ಡಾ. ವಿಜಯಕುಮಾರ್‌, ಡಾ. ಶುಭ ವಿಜಯ್‌, ನರರೋಗ ತಜ್ಞ ಡಾ. ಎಂ.ಎಸ್.ಸುಮುಖ್ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಮನುಷ್ಯನ ಪ್ರಾಣ ಉಳಿಸುವ ವೈದ್ಯರನ್ನು ದೇವರಿಗೆ ಹೋಲಿಸುತ್ತೇವೆ. ವೈದ್ಯರು ಹಣಗಳಿಕೆ ಎನ್ನದೇ ಸೇವಾ ಮನೋಭಾವದಲ್ಲಿ ಕಾರ್ಯ ನಿರ್ವಹಿಸಬೇಕು. ಈ ಹಿಂದೆ ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿ ಸಿರುವ ವೈದ್ಯರು, ದಾದಿಯರ ಸೇವೆ ಮರೆಯುವಂತಿಲ್ಲ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

- ಆಶ್ರಯ ಆಸ್ಪತ್ರೆಯಲ್ಲಿ ನರ ವಿಜ್ಞಾನ ವಿಭಾಗ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮನುಷ್ಯನ ಪ್ರಾಣ ಉಳಿಸುವ ವೈದ್ಯರನ್ನು ದೇವರಿಗೆ ಹೋಲಿಸುತ್ತೇವೆ. ವೈದ್ಯರು ಹಣಗಳಿಕೆ ಎನ್ನದೇ ಸೇವಾ ಮನೋಭಾವದಲ್ಲಿ ಕಾರ್ಯ ನಿರ್ವಹಿಸಬೇಕು. ಈ ಹಿಂದೆ ಕೋವಿಡ್ ಸಮಯದಲ್ಲಿ ಪ್ರಾಣದ ಹಂಗು ತೊರೆದು ಕೆಲಸ ನಿರ್ವಹಿ ಸಿರುವ ವೈದ್ಯರು, ದಾದಿಯರ ಸೇವೆ ಮರೆಯುವಂತಿಲ್ಲ ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದರು.

ನಗರದ ಆಶ್ರಯ ಆಸ್ಪತ್ರೆಯಲ್ಲಿ ನರವಿಜ್ಞಾನ ವಿಭಾಗವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ಜಗತ್ತಿನಲ್ಲಿ ರೋಗಿಗಳ ಆರೋಗ್ಯ ಸುಧಾರಿಸಲು ಹೊಸ ತಂತ್ರಜ್ಞಾನದಡಿ ಹೆಜ್ಜೆ ಇಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ವೈದ್ಯಕೀಯ ಲೋಕದಲ್ಲಿ ಚಿಕಿತ್ಸೆಗೆ ಅನುಕೂಲವಾಗಲು ಹೊಸ ವಿಭಾಗಗಳನ್ನು ಸ್ಥಾಪಿಸುವ ಮೂಲಕ ಆಶ್ರಯ ಆಸ್ಪತ್ರೆ ರೋಗಿಗಳ ಸಮಗ್ರ ಚಿಕಿತ್ಸೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಆರೋಗ್ಯದ ವಿಷಯದಲ್ಲಿ ಅಸಡ್ಡೆ ವಹಿಸದೇ ಜವಾಬ್ದಾರಿಯಾಗಿ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಆಕಸ್ಮಿಕವಾಗಿ ಬರುವ ಕೆಲವು ಅನಾರೋಗ್ಯ ಸಮಸ್ಯೆಗಳಿಗೆ ಸ್ಥಳೀಯ ವಾಗಿ ಚಿಕಿತ್ಸೆಗಳು ಲಭ್ಯವಾದರೆ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶ್ವಥ್‌ಬಾಬು ಮಾತನಾಡಿ, ಬಹುತೇಕ ಚಿಕಿತ್ಸೆ ಎಲ್ಲಾ ವಿಭಾಗಗಳನ್ನು ಸ್ಥಾಪಿಸುವ ಮೂಲಕ ಆಶ್ರಯ ಆಸ್ಪತ್ರೆ ಮಲ್ಟಿ ಸ್ಪೆಷಾಲಿಟಿಯಾಗಿ ಪರಿವರ್ತನೆಯಾಗಿದೆ. ಜೊತೆಗೆ ಸ್ವಚ್ಛತೆ, ವೈದ್ಯರು, ಸಿಬ್ಬಂದಿ ಸೇವೆ ಉತ್ತಮ ವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಗತಿ ಸಾಧಿಸಲಿ ಎಂದು ಆಶಿಸಿದರು.

ನರರೋಗ ತಜ್ಞ ಡಾ. ಎಂ.ಎಸ್.ಸುಮುಖ್ ಮಾತನಾಡಿ, ನರರೋಗ ಎಂಬುದು ಬಹು ದಿನಗಳ ಕಾಡುವ ಕಾಯಿಲೆಯಾದ ಕಾರಣ ದೂರ ದೂರಿಗಳಿಗೆ ಚಿಕಿತ್ಸೆ ತೆರಳಲು ಜಿಲ್ಲೆಯ ಜನತೆಗೆ ಕಷ್ಟಸಾಧ್ಯ. ತಾವು ಕೂಡಾ ಇದೇ ಜಿಲ್ಲೆಯವರಾದ ಕಾರಣ ನರರೋಗ ಸಮಸ್ಯೆಗಳಿಗೆ ಚಿಕಿತ್ಸೆ ನೀಡಿದರೆ ಸ್ಥಳೀಯರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರುಆಶ್ರಯ ಆಸ್ಪತ್ರೆ ಸಂಸ್ಥಾಪಕ ಡಾ. ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ, ಪ್ರಸ್ತುತ ಆಸ್ಪತ್ರೆ 88ರ ಕಾಲ ಘಟ್ಟದಲ್ಲಿ ಕೇವಲ 15 ಬೆಡ್‌ಗಳೊಂದಿಗೆ ಆರಂಭಿಸಿ ಇದೀಗ 150 ಬೆಡ್‌ಗಳು ಸ್ಥಾಪಿಸಿ ಚಿಕಿತ್ಸೆಗೆ ಪೂರಕವಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯಾಗಿ ಪರಿವರ್ತನೆಯಾಗುವ ಮೂಲಕ ಜನತೆ ಅವಶ್ಯಕತೆಗೆ ಅನುಗುಣವಾ ಗಿ ಚಿಕಿತ್ಸೆ ನೀಡುತ್ತಿದೆ ಎಂದರು.ಆಸ್ಪತ್ರೆಯ ಡಾ. ಅನಿಕೇತ್ ಮಾತನಾಡಿ, ಆಸ್ಪತ್ರೆಯಲ್ಲಿ ರೋಗಿಗಳ ಚಿಕಿತ್ಸೆಗಳ ಅನುಕೂಲಕ್ಕೆ ಒಟ್ಟು 16 ವಿಭಾಗಗಳು ಚಾಲ್ತಿಯಲ್ಲಿದ್ದು, ಇದೀಗ ಸೂಪರ್ ಸ್ಪೆಷಾಲಿಟಿಯಡಿ 9ನೇ ವಿಭಾಗವಾಗಿ ನರವಿಜ್ಞಾನ ಕೇಂದ್ರ ಸ್ಥಾಪಿಸುವ ಮುಖೇನಾ ಆಸ್ಪತ್ರೆ ಹಂತ ಹಂತವಾಗಿ ಮೇಲ್ದಜೇಗೇರುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ನಯಾಜ್, ಆಸ್ಪತ್ರೆ ಸಂಸ್ಥಾಪಕ ಡಾ. ಶುಭಾ ವಿಜಯ್, ಆಡಳಿತ ವ್ಯವಸ್ಥಾಪಕ ಜಿ.ಪುರುಷೋತ್ತಮ್ ಹಾಗೂ ವಿವಿಧ ವಿಭಾಗಗಳ ವೈದ್ಯರು, ಸಿಬ್ಬಂದಿ ಇದ್ದರು.

30 ಕೆಸಿಕೆಎಂ 5ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆಯಲ್ಲಿ ನರ ವಿಜ್ಞಾನ ವಿಭಾಗದ ಕೇಂದ್ರವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಸೋಮವಾರ ಉದ್ಘಾಟಿಸಿದರು. ಗಾಯತ್ರಿ ಶಾಂತೇಗೌಡ. ಡಾ. ವಿಜಯಕುಮಾರ್‌, ಡಾ. ಶುಭ ವಿಜಯ್‌, ನರರೋಗ ತಜ್ಞ ಡಾ. ಎಂ.ಎಸ್.ಸುಮುಖ್ ಇದ್ದರು.

PREV

Recommended Stories

ವಿದ್ಯಾರ್ಥಿಗಳು ಸರ್ಕಾರಿ ಯೋಜನೆ ಸದುಪಯೋಗ ಪಡೆದುಕೊಳ್ಳಿ
ಗುರು, ಶಿಷ್ಯರದು ಜಗತ್ತಿನ ಶ್ರೇಷ್ಠ ಸಂಬಂಧ