ದೊಡ್ಡಣಗುಡ್ಡೆ ರಮಾನಂದ ಗುರೂಜಿಗೆ ಸಮ್ಮಾನ

KannadaprabhaNewsNetwork |  
Published : Jul 05, 2026, 02:30 AM IST
04ಗುರೂಜಿ | Kannada Prabha

ಸಾರಾಂಶ

ಇಲ್ಲಿನ ಕುಂಜಿಬೆಟ್ಟು ಶ್ರೀ ಬಬ್ಬುಸ್ವಾಮಿ, ತನ್ನಿಮಾನಿಗ, ಪರಿವಾರ ದೈವಗಳು ಹಾಗೂ ಶ್ರೀ ಚಾಮುಂಡಿ ದೇವಿಯ ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಸಲು ಮಾರ್ಗದರ್ಶನ ನೀಡಿದ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಪೌರೋಹಿತ್ಯ ವಹಿಸಿದ್ದ ವೇ|ಮೂ| ವಿಖ್ಯಾತ್‌ ಭಟ್‌ ಅವರನ್ನು ಜೀರ್ಣೋದ್ಧಾರ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.

ಉಡುಪಿ: ಇಲ್ಲಿನ ಕುಂಜಿಬೆಟ್ಟು ಶ್ರೀ ಬಬ್ಬುಸ್ವಾಮಿ, ತನ್ನಿಮಾನಿಗ, ಪರಿವಾರ ದೈವಗಳು ಹಾಗೂ ಶ್ರೀ ಚಾಮುಂಡಿ ದೇವಿಯ ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಯಶಸ್ವಿಯಾಗಿ ನಡೆಸಲು ಮಾರ್ಗದರ್ಶನ ನೀಡಿದ ದೊಡ್ಡಣಗುಡ್ಡೆ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಹಾಗೂ ಧಾರ್ಮಿಕ ವಿಧಿ ವಿಧಾನಗಳ ಪೌರೋಹಿತ್ಯ ವಹಿಸಿದ್ದ ವೇ|ಮೂ| ವಿಖ್ಯಾತ್‌ ಭಟ್‌ ಅವರನ್ನು ಜೀರ್ಣೋದ್ಧಾರ ಸಮಿತಿ ವತಿಯಿಂದ ಸಮ್ಮಾನಿಸಲಾಯಿತು.ಜೀರ್ಣೋದ್ಧಾರ ಸಮಿತಿ ಪ್ರಮುಖರು ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಜೀರ್ಣೋದ್ಧಾರಕ್ಕೆ ಮುಂದಾದರೂ ಕಾರಣಾಂತರಗಳಿಂದ ಪುನರ್‌ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನೆರವೇರದೆ ದೈವಸ್ಥಾನಕ್ಕೆ ಸಂಬಂಧಪಟ್ಟ ಎಲ್ಲರೂ ಬಹಳಷ್ಟು ನೊಂದಿದ್ದರು. ಪ್ರಧಾನ ದೈವ ಬಬ್ಬುಸ್ವಾಮಿಯಲ್ಲಿ ಜಿಲ್ಲೆಯ ಪ್ರಮುಖ ಜೋತಿಷ್ಯರು, ಧಾರ್ಮಿಕ ತಜ್ಞರ ಹೆಸರನ್ನು ಸೂಚಿಸಿ ಪ್ರಾರ್ಥಿಸಿದರೆ ಒಪ್ಪಿಗೆ ದೊರಕಿಲ್ಲ. ಅಂತಿಮವಾಗಿ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನೆರವೇರಿಸುವ ಯೋಗ, ಹೊಣೆಗಾರಿಕೆ ಶ್ರೀ ರಮಾನಂದ ಗುರೂಜಿಯವರಿಗೆ ಒಲಿದು ಬಂತು. ಅಂತೆಯೇ ಕಾರ್ಯಪ್ರವೃತ್ತರಾದ ಗುರೂಜಿಯವರು ಕರ್ಮಾಂಗಗಳನ್ನು ವ್ಯವಸ್ಥಿತವಾಗಿ ಚಾಚೂತಪ್ಪದೆ ಯಶಸ್ವಿಯಾಗಿ ನೆರವೇರಿಸಿಕೊಟ್ಟಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ.ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಂಜನ್‌ ಕೆ., ಪ್ರಧಾನ ಕಾರ್ಯದರ್ಶಿ ಗಿರೀಶ್‌ ಎಂ. ಅಂಚನ್‌, ಕೋಶಾಧಿಕಾರಿ ಸೀತಾರಾಮ ಎಂ., ಜತೆ ಕೋಶಾಧಿಕಾರಿ ಸತೀಶ ಭಾಗವತ್‌, ಹಂಚಿನ ಮನೆತನದ ಸದಾಶಿವ ಶೆಟ್ಟಿ, ರತ್ನಾಕರ ಶೆಟ್ಟಿ, ಓಕುಡೆ ಮನೆತನದ ಅರವಿಂದ ಓಕುಡೆ, ಡಾ. ಅಶೋಕ ಕುಮಾರ್‌ ಓಕುಡೆ, ಶಶಿರಾಜ ಕುಂದರ್‌, ಪ್ರಶಾಂತ ಪಾತ್ರಿ, ಅಶೋಕ ಪಾತ್ರಿ, ದೈವಸ್ಥಾನದ ಮುಕ್ಕಾಲಿ ಶೇಷು, ದೊಡ್ಡಣಗುಡ್ಡೆ ಕ್ಷೇತ್ರದ ಉಸ್ತುವಾರಿ ಕುಸುಮಾ ನಾಗರಾಜ್‌ ಹಾಗೂ ಹತ್ತು ಸಮಸ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಕ್ತದಾನ ಶಿಬಿರ, ಶಿಕ್ಷಣ ಧನ ಸಹಾಯ ವಿತರಣೆ
ವಿಶ್ವಾಸಾರ್ಹ ಮುದ್ರಣ ಮಾಧ್ಯಮ: ಅಮ್ಮಾಟಂಡ ಎ. ಜೋಯಪ್ಪ