ವಿದೇಶಿ ಕ್ರೀಡೆ ಅಬ್ಬರದಲ್ಲಿ ದೇಶಿ ಕ್ರೀಡೆ ಮಾಯ

KannadaprabhaNewsNetwork |  
Published : Feb 16, 2026, 03:00 AM IST
ಕ್ರೀಡಾಕೂಟ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಕಾಗವಾಡ ಕ್ರೀಡಾಪಟುಗಳಲ್ಲಿ ನಿರಂತರ ಅಭ್ಯಾಸ, ನೈಪುಣ್ಯತೆ ಇದ್ದರೆ ಮಾತ್ರ ಕ್ರೀಡಾಕೂಟಗಳಲ್ಲಿ ಒಳ್ಳೆಯ ಪ್ರದರ್ಶನ ನೀಡಬಹುದು. ವಿದೇಶಿ ಕ್ರೀಡೆಗಳ ಅಬ್ಬರದಲ್ಲಿಂದು ದೇಶಿ ಕ್ರೀಡೆಗಳು ಮಾಯವಾಗುತ್ತಿದ್ದು, ಇಂದಿನ ದಿನಗಳಲ್ಲಿ ಅಪ್ಪಟ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಯುವನಾಯಕ ಚಿದಾನಂದ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಕ್ರೀಡಾಪಟುಗಳಲ್ಲಿ ನಿರಂತರ ಅಭ್ಯಾಸ, ನೈಪುಣ್ಯತೆ ಇದ್ದರೆ ಮಾತ್ರ ಕ್ರೀಡಾಕೂಟಗಳಲ್ಲಿ ಒಳ್ಳೆಯ ಪ್ರದರ್ಶನ ನೀಡಬಹುದು. ವಿದೇಶಿ ಕ್ರೀಡೆಗಳ ಅಬ್ಬರದಲ್ಲಿಂದು ದೇಶಿ ಕ್ರೀಡೆಗಳು ಮಾಯವಾಗುತ್ತಿದ್ದು, ಇಂದಿನ ದಿನಗಳಲ್ಲಿ ಅಪ್ಪಟ ಗ್ರಾಮೀಣ ಕ್ರೀಡೆ ಕಬಡ್ಡಿಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಯುವನಾಯಕ ಚಿದಾನಂದ ಸವದಿ ಹೇಳಿದರು.

ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಭಾನುವಾರ ಮಾಜಿ ಡಿಸಿಎಂ, ಶಾಸಕ ಲಕ್ಷ್ಮಣ ಸವದಿ ೬೬ನೇ ಹುಟ್ಟು ಹಬ್ಬದ ನಿಮಿತ್ತ ಅಖಿಲ ಭಾರತ ಎ ಗ್ರೇಡ್ ಪುರುಷರ ಕಬ್ಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು. ಕಬ್ಬಡ್ಡಿ ಆಡುವುದು ಸುಲಭವಲ್ಲ, ದೈಹಿಕ ಸಾಮರ್ಥ್ಯದ ಜತೆಗೆ ಚಾಕಚಕ್ಯತೆ ಅಗತ್ಯ. ವಿದೇಶಿ ಕ್ರೀಡೆಗಳ ಪ್ರಭಾವದಿಂದ ಕಬ್ಬಡ್ಡಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು, ಐನಾಪೂರ ಪಟ್ಟಣದ ಯುವಕರು ಈ ಆಟವನ್ನು ಪೋಷಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಕಬಡ್ಡಿಯನ್ನು ಕಷ್ಟಪಟ್ಟು ಆಡದೆ ಇಷ್ಟಪಟ್ಟು ಆಡುವುದನ್ನು ಕ್ರೀಡಾಪಟುಗಳು ಕಲಿಯಬೇಕು. ಸ್ಪರ್ಧೆಯಲ್ಲಿ ಹೆದರದೆ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದೆ ಬರಬೇಕು. ಆಟದಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಪ್ರತಿಯೊಬ್ಬ ಕ್ರೀಡಾಪಟು ಸ್ಪರ್ಧಾಮನೋಭಾವದಿಂದ ಭಾಗವಹಿಸುವುದು ಮುಖ್ಯ. ನಮ್ಮ ದೇಶಿಯ ಆಟಗಳಲ್ಲಿ ಸಿಗುವ ಸಂತೋಷ, ಮನರಂಜನೆ ಇನ್ನಿತರ ಆಟಗಳಲ್ಲಿ ಸಿಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಮೈದಾನ ಪೂಜೆಯನ್ನು ಜುಗೂಳ ಪಿಕೆಪಿಎಸ್‌ ಅಧ್ಯಕ್ಷ ಅಣ್ಣಾಸಾಬ ಪಾಟೀಲ, ಚಿದಾನಂದ ಸವದಿ ನೆರವೇರಿಸಿದರು.

ಕ್ರೀಡಾಪಟುಗಳಿಗೆ ಹಸ್ತಲಾಘವ ಮಾಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ಒಟ್ಟು ಎರಡು ದಿನಗಳ ಹೊನಲು ಬೆಳಕಿನ ಸ್ಪರ್ಧೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ, ಹರಿಯಾಣ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಿಂದ ೩೦ ಕಬಡ್ಡಿ ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿವೆ.

ಈ ವೇಳೆ ಶಿವಕುಮಾರ ಸವದಿ, ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಡಾ.ಸುಜನ್ ಗಾಣಿಗೇರ, ವಿನಾಯಕ ಬಾಗಡಿ, ಸಂಜಯ ಕುಚನೂರೆ, ಸಂಜಯ ಭಿರಡಿ, ಸುರೇಶ ಗಾಣಿಗೇರ, ಚಮನರಾವ್ ಪಾಟೀಲ, ಸುಭಾಷ ಪಾಟೀಲ, ಸಿದ್ದಪ್ಪ ಕನಾಳೆ, ಸೌರಭ ಪಾಟೀಲ, ಅಪ್ಪು ನ್ಯಾಮಗೌಡ, ವಿಶಾಲ ನಿಂಬಾಳ, ಜಡೆಪ್ಪ ಕುಂಬಾರ, ರಾಮನಗೌಡ ಪಾಟೀಲ, ಸಿದರಾಯ ತೇಲಿ, ಶಿವಾನಂದ ಗೋಲಭಾಂವಿ, ಪ್ರದೀಪ ಜಾಧವ, ಸಂಜಯ ತಳವಲಕರ, ವಿನಾಯಕ ಚೌಗಲಾ, ಸಚಿನ ಚೌಗಲಾ, ಉಮೇಶ ಕಾರ್ಚಿ, ಅಪ್ಪು ಪೂಜಾರಿ ಸೇರಿ ಅನೇಕರು ಇದ್ದರು.

ಫೋಟೋಶಿರ್ಷಿಕೆ(15ಕಾಗವಾಡ-2) ಕಾಗವಾಡ ತಾಲೂಕಿನ ಐನಾಪೂರ ಪಟ್ಟಣದಲ್ಲಿ ಮಾಜಿ ಡಿಸಿಎಂ ,ಅಥಣಿ ಶಾಸಕ ಲಕ್ಷö್ಮಣ ಸವದಿಯವರ ೬೬ ನೇ ಹುಟ್ಟು ಹಬ್ಬದ ನಿಮಿತ್ಯ ರಾಷ್ಟç ಮಟ್ಟದ ಕಬ್ಬಡ್ಡಿ ಪಂದ್ಯಾವಳಿಗಳನ್ನು ಭವಷ್ಯದ ನಾಯಕ ಚಿದಾನಂದ ಸವದಿ ಉದ್ಘಾಟಿಸಿಸುತ್ತಿರುವ ಚಿತ್ರ.

-------

ಕೋಟ್‌

ಶಾಸಕ ರಾಜು ಕಾಗೆ ಹಾಗೂ ಸವದಿ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. ಅವರು ನಮ್ಮ ತಂದೆಯ ಸಮಾನರು. ಆದರೆ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳ ಪೋಸ್ಟ್‌ಗಳನ್ನು ಹರಿಬಿಡುತ್ತಿದ್ದು, ಆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲ್ಲ. ರಾಜು ಕಾಗೆ ನಾವು ಹಿಂದೆಯೂ ಒಗ್ಗಟ್ಟಾಗಿದ್ದೇವೆ, ಮುಂದೆಯೂ ಒಗ್ಗಟ್ಟಾಗಿರುತ್ತೇವೆ. ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ನಮ್ಮದು ಪಕ್ಕದ ಕ್ಷೇತ್ರವಾಗಿದ್ದರೂ ಕೂಡ ಇಲ್ಲಿಯ ಜನರು ತೋರಿದ ಪ್ರೀತಿ, ವಿಶ್ವಾಸಕ್ಕೆ ಚಿರಋಣಿ. ನನ್ನ ಹಾಗೂ ನನ್ನ ತಂದೆಯ ಮೇಲಿಟ್ಟಿರುವ ವಿಶ್ವಾಸಕ್ಕೆ ಜನರ ಸೇವೆ ಮಾಡಿ ಋಣ ತೀರಿಸುವ ಕೆಲಸ ಮಾಡುತ್ತೇನೆ.

-ಚಿದಾನಂದ ಸವದಿ, ಯುವ ನಾಯಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಥಣಿಯಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ
ಪು4...ಲೀಡ್‌.... ಕಲಾವಿದರಿಗೆ ಬೇಕಿದೆ ಸಮಾಜ, ಸರ್ಕಾರದ ನೆರವು