ಕನ್ನಡಪ್ರಭ ವಾರ್ತೆ ವಿಜಯಪುರ
ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ಶ್ರೀ ಮುಕ್ತಂಕಾರ ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪವಾಡಗಳ ಮೂಲಕ ಹೆಸರಾಗಿದ್ದ ಮುಕ್ತಂಕಾರರ ಆಶೀರ್ವಾದದಿಂದ ಇಲ್ಲಿ ಸಮೃದ್ಧಿ ನೆಲೆಸಿದೆ. ಶ್ರದ್ಧೆ ಭಕ್ತಿಯಿಂದ ಕಾರ್ಯಕ್ರಮದಲ್ಲಿ ಸಮಸ್ತ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ. ನಾನೂ ಭಾಗಿಯಾಗಿದ್ದು ಸಂತಸ ತಂದಿದೆ. ದೇಶದ ಪರಂಪರೆ, ಸಂಸ್ಕೃತಿಗೆ ಮಠಗಳ ಕೊಡುಗೆ ಅಪಾರ. ಮಠಗಳು ಧರ್ಮ ಜಾಗೃತಿ, ದಾಸೋಹ, ಶಿಕ್ಷಣ ಸೇವೆಯ ಮೂಲಕ ಅಪಾರ ಕೊಡುಗೆ ನೀಡುತ್ತಿವೆ. ಆದ್ದರಿಂದ ಮಠಗಳ ಬಗ್ಗೆ ನಮ್ಮಲ್ಲಿ ಇಂದಿಗೂ ಭಕ್ತಿ ಮತ್ತು ಶ್ರದ್ಧೆ ಉಳಿದಿದೆ ಎಂದು ಹೇಳಿದರು.
ವಿಧಾನ ಪರಿಷತ ಸದಸ್ಯ ಹಣಮಂತ ನಿರಾಣಿ ಮಾತನಾಡಿ, ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮಠಗಳು ಕೊಡುಗೆ ನೀಡಿವೆ. ಹಿರಿಯರು ಪ್ರಾರಂಭಿಸಿದ ಬಿ.ಎಲ್.ಡಿ.ಇ ಶಿಕ್ಷಣ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಸಚಿವ ಎಂ.ಬಿ.ಪಾಟೀಲ ಅವರು ಈ ಭಾಗದಲ್ಲಿ ಅಭಿವೃದ್ಧಿ ಮಾಡಿದ್ದಾರೆ. ನಮ್ಮ ಕುಟುಂಬಕ್ಕೂ ಕೋಟ್ಯಾಳ ಗ್ರಾಮಕ್ಕೆ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.ಮನಗೂಳಿ ಸಂಸ್ಥಾನ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಸರ್ವರೊಂದಿಗೆ ಸಾಮರಸ್ಯದಿಂದ ಬದುಕಬೇಕು. ದಾನಧರ್ಮ ಮಾಡಬೇಕು. ಸಚಿವ ಎಂ.ಬಿ.ಪಾಟೀಲರು ಮಠಗಳ ಬಗ್ಗೆ ಅಪಾರ ಭಕ್ತಿ ಹೊಂದಿದ್ದಾರೆ. ಜಲಸಂಪನ್ಮೂಲರಾಗಿ ನೀರಾವರಿ ರೈತರ ಬದುಕು ಹಸನಾಗಿಸಿದ್ದಾರೆ. ಅವರ ಮೇಲೆ ಪ್ರೀತಿ, ವಿಶ್ವಾಸ ಇಡಬೇಕು. ಅವರ ಕೆಲಸ ಕಾರ್ಯಗಳಿಗೆ ಬೆಂಬಲ ನೀಡಬೇಕು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ಜಾತಿಭೇದ ಮಾಡದೇ ಪ್ರೀತಿಯಿಂದ ಬದುಕಬೇಕು ಎಂದು ಹೇಳಿದರು.
ಕೋಟ್ಯಾಳ ಮುಕ್ತಂಕಾರ ಮಠದ ಶ್ರೀ ಕಾಶೀನಾಥ ಅಪ್ಪನವರು, ತಿಕೋಟಾ ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು, ವಿರಕ್ತಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ಕೊಲ್ಹಾರದ ಶ್ರೀ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಪಟ್ಟದ ದೇವರು, ದೇವರ ಹಿಪ್ಪರಗಿಯ ಶ್ರೀ ಅವೂಗೇಶ್ವರ ತಪೋಧ್ಯಾಮ ಪರದೇಶಿ ಮಠದ ಶ್ರೀ ಶಿವಯೋಗಿ ಮಹಾಸ್ವಾಮಿಗಳು, ಕೋಟ್ಯಾಳದ ಶ್ರೀ ಮಹೇಶ ಮಳಯ್ಯ ಹಿರೇಮಠ, ಶಿವಾನಂದ ಹಿರೇಮಠ, ಮುಖಂಡರಾದ ಭೀಮನಗೌಡ ಪಾಟೀಲ, ಡಾ.ಗಜಾನನ ಮಹಿಶಾಳೆ, ನೀಲಕಂಠ ಅಳ್ಳೊಳ್ಳಿ, ಪರಗೊಂಡ ರಾಮತೀರ್ಥ, ಬಾಬು ಗದ್ಯಾಳ, ರಾವಸಾಬ ಹೊಸಮನಿ, ಮಲ್ಲನಗೌಡ ಪಾಟೀಲ ಸೇರಿದಂತೆ ನಾನಾ ಮುಖಂಡರು, ಹಿರಿಯರು, ಮಹಿಳೆಯರು, ಯುವಕರು, ಗ್ರಾಮಸ್ಥರು ಇದ್ದರು.