ಕನ್ನಡಪ್ರಭ ವಾರ್ತೆ ಹುಕ್ಕೇರಿ
ತಾಲೂಕಿನ ಹೊಸೂರ ಗ್ರಾಮದಲ್ಲಿ ನಡೆದ ವಿರಾಟ ಹಿಂದೂ ಸಮ್ಮೇಳನದಲ್ಲಿ ಮಾತನಾಡಿದ ಅವರು, ಸನಾತನ ಸಂಸ್ಕೃತಿ ಉಳಿಸಿ ಬೆಳೆಸಿದಲ್ಲಿ ಭವ್ಯ ಭಾರತವನ್ನು ಮತ್ತೇ ಮೇರು ಸ್ಥಿತಿಯಲ್ಲಿ ಕಾಣಬಹುದು. ಈ ನಿಟ್ಟಿನಲ್ಲಿ ಇಂದಿನ ಪೀಳಿಗೆಗೆ ಹಿಂದುತ್ವ, ಧರ್ಮ, ಸಮಾಜ ಮತ್ತು ಸಂಸ್ಕೃತಿಯ ಕುರಿತು ಮನವರಿಕೆ ಮಾಡುವುದರ ಜೊತೆಗೆ ನಾವೆಲ್ಲರೂ ಒಂದಾಗುವ ಅಗತ್ಯವಿದೆ ಎಂದರು.
ಹಿಂದೂ ಧರ್ಮ ಯಾರನ್ನೂ ಎಂದಿಗೂ ದ್ವೇಷಿಸುವುದನ್ನು ಕಲಿಸಿಲ್ಲ. ಅದು ಪ್ರೀತಿ, ಸಹಿಷ್ಠುತೆ ಮತ್ತು ಜ್ಞಾನದ ದೀವಿಗೆಯಂತಿದೆ. ಸಾವಿರಾರು ವರ್ಷಗಳಿಂದಲೂ ಪರಕೀಯರ ದಾಳಿಯಿಂದ ದೇಶದ ಅಪಾರ ಸಂಪತ್ತನ್ನು ದೋಚಲಾಗಿದೆ. ಆದರೆ, ಇಲ್ಲಿರುವ ಸಂಸ್ಕೃತಿಯನ್ನು ದೋಚಿಕೊಂಡು ಹೋಗಲು ಸಾಧ್ಯವಾಗಿಲ್ಲ ಎಂಬುದನ್ನು ಹೇಳಿದರು.ಸಾನಿಧ್ಯ ವಹಿಸಿದ್ದ ನಿಡಸೋಸಿ ಸಿದ್ಧಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಇಡೀ ಜಗತ್ತಿಗೆ ಸಂಸ್ಕೃತಿ, ನಾಗರಿಕತೆ, ಬದುಕುವ ಕಲೆಯನ್ನು ಹೇಳಿಕೊಟ್ಟ ಹಿಂದೂ ಧರ್ಮ ಉಳಿಯಬೇಕು. ಈ ನಿಟ್ಟಿನಲ್ಲಿ ಹಿಂದೂಗಳು ಸಂಘಟಿತರಾಗಬೇಕು ಎಂದು ಕರೆ ನೀಡಿದರು.ಸನ್ಯಾಸಿ ಶಶಿಕಾಂತ ಗುರೂಜಿ ಮಾತನಾಡಿ, ನಮ್ಮದು ಕೃಷಿ, ಋಷಿ, ಹಿಂದೂ ಸಂಸ್ಕೃತಿ ದೇಶವಾಗಿದೆ. ವಿವಿಧ ಭಾಷೆ, ಜನಾಂಗ, ವಿಶಿಷ್ಟ ಹಿಂದೂ ಸಂಸ್ಕೃತಿಯಿಂದ ಭಾರತ ಬಲಿಷ್ಠವಾಗಿದೆ. ಈ ನೆಲದ ಪರಂಪರೆ ನಮ್ಮ ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಹೇಳಿದರು.ನೇತೃತ್ವ ವಹಿಸಿದ್ದ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಮಾತನಾಡಿದರು. ಸಮ್ಮೇಳನ ಸಮಿತಿ ಅಧ್ಯಕ್ಷ ಶಿವಾನಂದ ಬಾಗೇವಾಡಿ, ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಮುಖಂಡರಾದ ಬಿ.ಬಿ.ಪಾಟೀಲ, ಬಸವರಾಜ ಹುಂದ್ರಿ, ಕಲಗೌಡ ಪಾಟೀಲ, ರಾಮಚಂದ್ರ ಜೋಶಿ, ಬಾಳಗೌಡ ನಾಯಿಕ, ಶಿವಾನಂದ ಮುಗಳಖೋಡ, ಮಹಾವೀರ ಅಕ್ಕತಂಗೇರಹಾಳ, ಜಿನ್ನಪ್ಪಾ ಖಾನಾಪೂರೆ, ಮಹಾನಿಂಗ ಹಿಟ್ಟಣಗಿ, ಬಾಹುಬಲಿ ಶಿರಗುಪ್ಪಿ, ಸಮ್ಮೇದ ಶಾಖಾಂಬರಿ, ಸವೀನ ಸಪ್ತಸಾಗರ, ಸಚಿನ್ ಚೌಗಲಾ, ಕಾಡಪ್ಪಾ ಅಕ್ಕತಂಗೇರಹಾಳ ಮತ್ತಿತರರು ಉಪಸ್ಥಿತರಿದ್ದರು.ಬಾಹುಬಲಿ ನಾಗನೂರಿ ಸ್ವಾಗತಿಸಿ ಪರಿಚಯಿಸಿದರು. ಕುಂಬಾರ ನಿರೂಪಿಸಿದರು. ಮಾದೇವ ಪಾಟೀಲ ವಂದಿಸಿದರು. ಇದಕ್ಕೂ ಮೊದಲು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮಹಿಳೆಯರ ಕುಂಭಮೇಳ ಹಾಗೂ ಭವ್ಯ ಶೋಭಾಯಾತ್ರೆ ಸಂಚರಿಸಿ ಸಮಾವೇಶ ಸ್ಥಳಕ್ಕೆ ತಲುಪಿತು. ಈ ವೇಳೆ ಸಾವಿರಾರು ಹಿಂದೂ ಕಾರ್ಯಕರ್ತರು, ವಿವಿಧ ಕಲಾತಂಡಗಳು ಭಾಗವಹಿಸಿದ್ದವು.